ಕೊಪ್ಪಳ (ಅ.09) :  ರಾಜ್ಯದಲ್ಲಿ ಕೋವಿಡ್‌ ಹೆಚ್ಚುತ್ತಿದೆ. ಸಿಎಂ ಯಡಿಯೂರಪ್ಪ ಅವರಿಗೆ ಬುದ್ದಿ ಕೆಟ್ಟು ಹೋಗಿದೆ. ಕೋವಿಡ್‌ ತಡೆಗಟ್ಟಲು ಸಿಎಂ ಯಡಿಯೂರಪ್ಪ ವಿಫಲರಾಗಿದ್ದಾರೆ. ಹೀಗಾಗಿ ಯಡಿಯೂರಪ್ಪಗೆ ಗೌರವ ಇದ್ರೆ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು ವಾಟಾಳ್ ನಾಗರಾಜ್.

ಕೋವಿಡ್‌ ಸೋಂಕಿನಿಂದ ನಿತ್ಯ ಸಾವು ಹೆಚ್ಚುತ್ತಿವೆ. ಆದರೆ ಯಡಿಯೂರಪ್ಪ ಕೋವಿಡ್‌ ಕೈ ಬಿಟ್ಟಿದ್ದಾರೆ. ದುರಾಡಳಿತ ನಡೆಸುತ್ತಿದ್ದಾರೆ. ಸಾಯುವವರು ಸಾಯಲಿ. ನಾನು ನನ್ನ ಪಾಡಿಗೆ ಆರಾಮ ಇರುವೆ ಎಂಬಂತಿದೆ ಅವರ ದೋರಣೆ ಎಂದು ವಾಗ್ದಾಳಿ ನಡೆಸಿದರು.

ವಾಟಾಳ್‌ ನಾಗರಾಜ್‌ ದಿಢೀರ್ ನಾಮಪತ್ರ ಸಲ್ಲಿಕೆ .

ಕೋವಿಡ್‌ ಬಗ್ಗೆ ರಾಜ್ಯದಲ್ಲಿ ಮೊದಲಿನ ಭಯ, ಭೀತಿ , ಶಿಸ್ತು ಮಾಯವಾಗಿದೆ. ಸರಕಾರಿ ಆಸ್ಪತ್ರೆಗಳು ಯಮಲೋಕ. ವೈದ್ಯರು ಯಮಧರ್ಮ. ಅವರನ್ನ ಕೇಳಂಗೇ ಇಲ್ಲ. ಇನ್ನೂ ಖಾಸಗಿ ಆಸ್ಪತ್ರೆಯವರು ಲೂಟಿಗಿಳಿದಿದ್ದಾರೆ. ಇದೆಲ್ಲವನ್ನೂ ಯಾರು ತಡೆಯೋರು ಎಂದು ವಾಟಾಳ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದರು.