ಬೆಳಗಾವಿ(ಜೂ.19): ನಗರದಲ್ಲಿ ನಿರ್ಮಿಸಿರುವ ಸುವರ್ಣ ಸೌಧ ಕೋಮಾ ಸ್ಥಿತಿಯಲ್ಲಿದೆ, ಸಂಪೂರ್ಣ ಜೀವವೇ ಇಲ್ಲ. ಸರ್ಕಾರ ಯಾವ ಉದ್ದೇಶಕ್ಕಾಗಿ ಸುವರ್ಣ ಸೌಧ ಕಟ್ಟಿದ್ರೋ ಅದು ಈಡೇರುತ್ತಿಲ್ಲ. ಸರ್ಕಾರ ಬರೀ ನಾಟಕ ಆಡುತ್ತಿದೆ ಎಂದು ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಆರೋಪಿಸಿದ್ದಾರೆ.

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮವರ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಸಂಪೂರ್ಣವಾಗಿ ಹಿಂದೆ ಉಳಿದಿದೆ. ಜಿಲ್ಲೆಯ ರಾಜಕಾರಣಿಗಳು ಬರೀ ಅಧಿಕಾರಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ಗುಡುಗಿದ್ದಾರೆ.

ದ್ವಿತೀಯ PUC ಪರೀಕ್ಷೆ: ಮಾಸ್ಕ್‌ ಧರಿಸದ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಬೇಜವಾಬ್ದಾರಿ

ನಗರದ ಸುವರ್ಣ ವಿಧಾನಸೌಧ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ವಾಟಾಳ್‌ ನಾಗರಾಜ್‌ರನ್ನು ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.