ಚ​ಕ್ರ​ತೀರ್ಥ ನೇತೃ​ತ್ವದ ಪಠ್ಯಪುಸ್ತಕ ಪರಿ​ಷ್ಕ​ರಣ ಸಮಿತಿ ವಿಸರ್ಜನೆ ಮಾಡಿರುವ ರಾಜ್ಯ ಸರ್ಕಾ​ರದ ನಿರ್ಧಾರ ಸ್ವಾಗತಾರ್ಹ. ಆದರೆ, ಮುಂದಿನ ಪಠ್ಯ ಪುಸ್ತಕ ರಚನೆಯು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ, ಉತ್ತಮ ರೀತಿಯಲ್ಲಿ ಆಗ​ಬೇ​ಕೆಂದು ವಾಟಾಳ್‌ ನಾಗ​ರಾಜ್‌ ಒತ್ತಾ​ಯಿ​ಸಿ​ದರು.

ರಾಮನಗರ (ಜೂ.05): ರಾಜ್ಯದಲ್ಲಿ ಸಮಗ್ರ ಉದ್ಯೋಗ ಸೃಷ್ಟಿ, ನಿರುದ್ಯೋಗ ಪದವೀಧರರಿಗೆ 10 ಸಾವಿರ ಗೌರವ ಧನ ನೀಡುವ ಜತೆಗೆ, ಸಮಗ್ರ ಚುನಾವಣಾ ಕಾಯ್ದೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿ ಕ​ನ್ನಡ ಚಳ​ವಳಿ ವಾಟಾಳ್‌ ಪಕ್ಷದ ಅ​ಧ್ಯಕ್ಷ ವಾಟಾಳ್‌ ನಾಗರಾಜು ನೇತೃ​ತ್ವ​ದಲ್ಲಿ ಕನ್ನಡಪರ ಹೋರಾಟಗಾರರು ನಗ​ರ​ದಲ್ಲಿ ಶನಿ​ವಾರ ಪ್ರತಿಭಟನೆ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ರಾಜ್ಯ​ಸ​ರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿ​ಭ​ಟ​ನಾ​ಕಾ​ರರು ಬೇಡಿಕೆ ಈಡೇ​ರ​ದಿ​ದ್ದರೆ ರಾಜ್ಯಾ​ದ್ಯಂತ ಹೋರಾಟ ನಡೆ​ಸು​ವು​ದಾಗಿ ಎಚ್ಚ​ರಿಕೆ ನೀಡಿ​ದರು.

ಈ ವೇಳೆ ಮಾತನಾಡಿದ ವಾಟಾಳ್‌ ನಾಗ​ರಾಜ್‌, ಚ​ಕ್ರ​ತೀರ್ಥ ನೇತೃ​ತ್ವದ ಪಠ್ಯಪುಸ್ತಕ ಪರಿ​ಷ್ಕ​ರಣ ಸಮಿತಿ ವಿಸರ್ಜನೆ ಮಾಡಿರುವ ರಾಜ್ಯ ಸರ್ಕಾ​ರದ ನಿರ್ಧಾರ ಸ್ವಾಗತಾರ್ಹ. ಆದರೆ, ಮುಂದಿನ ಪಠ್ಯ ಪುಸ್ತಕ ರಚನೆಯು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ, ಉತ್ತಮ ರೀತಿಯಲ್ಲಿ ಆಗ​ಬೇ​ಕೆಂದು ಒತ್ತಾ​ಯಿ​ಸಿ​ದರು. ಪಠ್ಯಪುಸ್ತಕ ಯಾವಾಗಲು ಪ್ರಾಮಾಣಿಕವಾಗಿರಬೇಕು. ಯಾವುದೇ ಗೊಂದಲಕ್ಕೂ ಅವಕಾಶ ನೀಡಬಾರದು. ರೋಹಿತ್‌ ಚಕ್ರತೀರ್ಥ ಅವರ ಪಠ್ಯಪುಸ್ತಕ ಪರಿ​ಷ್ಕ​ರ​ಣ ಸಮಿತಿಯು ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿತ್ತು. ನಾಡು ಕಂಡಂತ ಮಹನೀಯರು, ಸಾಹಿತ್ಯರ ಬರವಣಿಗೆಗೆ ಅಗೌರವವನ್ನುಂಟು ಮಾಡಿತ್ತು ಎಂದು ಕಿಡಿ​ಕಾ​ರಿ​ದರು.

'ಯಡಿಯೂರಪ್ಪನವರನ್ನು ಮೂಲೆಗುಂಪಾಗಿಸುವ ಯತ್ನ ನಡೆಯುತ್ತಿದೆ'

ರಾಷ್ಟ್ರ ಕವಿ ಕುವೆಂಪು ಅವರ ನಾಡ​ಗೀ​ತೆ​ ಆರೆಸ್ಸೆಸ್‌ ಹಾಗೂ ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತು ಆರೆಸ್ಸೆಸ್‌ ಅವರಿಗೆ ಹಿಡಿಸುವುದಿಲ್ಲ. ನಾಡಗೀತೆಯಲ್ಲಿನ ಹಿಂದೂ, ಕ್ರೈಸ್ತ, ಮುಸಲ್ಮಾನ ಎಂಬ ಸಾಲು ಹಿಂದೂ ಸಂಘಟನೆ ಸಹಿಸುವುದಿಲ್ಲ. ರಾಷ್ಟ್ರ ಗೀತೆಗೆ ನೀ​ಡು​ವಷ್ಟೆಗೌರವ ನಾಡಗೀತೆಗೂ ನೀಡಬೇಕು ಎಂದು ಹೇಳಿದರು. ನಿರುದ್ಯೋಗಿ​ಗಳು, ವಿವಿಧ ಇಲಾಖೆಗಳು, ಅಧ್ಯಾಪಕರು ಸೇರಿ​ದಂತೆ ಎಲ್ಲೆಡೆ ಪದವೀಧರರಿದ್ದು, ಪ್ರಾಮಾಣಿಕವಾಗಿ ಮತಚಲಾವಣೆ ಮಾಡಬೇಕು. ಒಂದೇ ವೋಟು ನೀಡಬೇಕೆಂಬುದು ಏನು ಇಲ್ಲ. ಎಲ್ಲರಿಗೂ ಪ್ರಾಶಸ್ತ್ಯದ ಮೇಲೆ ವೋಟು ನೀಡಬಹುದಾಗಿದೆ.

Vatal Nagaraj: ಹಿಂದಿ ಭಾಷೆ ಹೇರಿಕೆ ವಿರುದ್ಧ ವಾಟಾಳ್‌ ಪ್ರತಿಭಟನೆ

ವಕೀಲರು, ಪದವೀಧರರು ಹಾಗೂ ಶಿಕ್ಷಕರ ಹಲವು ಬೇಡಿಕೆಗಳು ಇವೆ. ಆದರೆ, ಯಾರು ಈಡೇರಿಸಿಯೇ ಇಲ್ಲ. ಈ ಚುನಾವಣೆ ಮುಗಿದ ಬಳಿಕ, ಈ ವರ್ಗದ ಬೇಡಿಕೆ ಈಡೇರಿಸುವ ಸಂಬಂಧ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧನಿದ್ದೇನೆ. ಪದವೀಧರರಿಗೆ ನಿರುದ್ಯೋಗ ಭತ್ಯೆ ತಿಂಗಳಿಗೆ 10 ಸಾವಿರ ರು. ಸರ್ಕಾರ ಕಡ್ಡಾಯ ನೀಡಬೇಕೆಂದು ವಾಟಾಳ್‌ ನಾಗ​ರಾಜ್‌ ಒತ್ತಾ​ಯಿ​ಸಿ​ದರು. ಪ್ರತಿ​ಭ​ಟ​ನೆ​ಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್‌, ಜಿಲ್ಲಾಧ್ಯಕ್ಷೆ ಗಾಯಿತ್ರಿ ಬಾಯಿ, ಸಿ.ಎಸ್‌. ಜಯಕುಮಾರ್‌, ಜಿಲ್ಲಾ ದಲಿತ ಘಟಕದ ಜಿಲ್ಲಾಧ್ಯಕ್ಷ ಕೆ. ಜಯರಾಜು, ಅಲ್ಪ ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಸಮದ್‌, ಪದಾಧಿಕಾರಿಗಳಾದ ಇಮ್ರಾನ್‌ ಬೇಗ್‌, ಹೇಮಾವತಿ, ಮಹೇಂದ್ರಮ್ಮ ಯಶೋಧಾ, ರೇಣುಕಾ, ವರಲಕ್ಷ್ಮಮ್ಮ, ಮರಿಸ್ವಾಮಿ ಭಾಗ​ವ​ಹಿ​ಸಿ​ದ್ದರು.