ಚಾಮರಾಜನಗರ(ಸೆ.30): ಮೈಸೂರು ಸಂಸದ ಪ್ರತಾಪ್ ಸಿಂಹಗೆ ನಾಲಿಗೆ ಭದ್ರವಿಲ್ಲ. ಏನಂದ್ಕೊಂಡಿದ್ದಾರೆ ಬೈಯ್ಯೋದೇ ತರವಲ್ಲ. ಸಂಸದ ಸ್ಥಾನಕ್ಕೆ ಅಗೌರವ ಅವರು ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್‌ಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧಿಸುವುದನ್ನು ಪ್ರತಿಭಟಿಸುತ್ತಿರುವ ಕೇರಳಿಯರ ಕ್ರಮಕ್ಕೆ ವಿರೋಧಿಸಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ್ದಾರೆ.

'ಬಿಎಸ್‌ವೈ ಶತ್ರು ಆಗಿದ್ರೂ ಅವರು ಪಕ್ಷದಲ್ಲಿರದಿದ್ರೆ ರಾಜ್ಯದಲ್ಲಿ ಬಿಜೆಪಿ ಇರಲ್ಲ

ಮೈಸೂರಲ್ಲಿ ಮಹಿಷಾಚರಣೆ ವೇಳೆ ಸಂಸದ ಆಡಿದ ಮಾತಿನ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿ, ಮೈಸೂರಲ್ಲಿ ಗುರುಪಾ ದಸ್ವಾಮಿ, ದಾಸಪ್ಪ, ಸಿದ್ದಯ್ಯ ಹಾಗೂ ವಿ.ಶ್ರೀ ನಿವಾಸ್‌ಪ್ರಸಾದ್ ಸಂಸದ ಸ್ಥಾನಕ್ಕೆ ಗೌರವ ತಂದವರು ಎಂದಿದ್ದಾರೆ.

ಹಗಲು ಹೆದ್ದಾರಿ ಮುಚ್ತೀವಿ: ವಾಟಾಳ್ ಎಚ್ಚರಿಕೆ

 ಸಂಸದನಾದವರು ನಾಲಿಗೆ ಭದ್ರವಾಗಿ ಇಟ್ಟುಕೊಳ್ಳಬೇಕು. ಹೋರಾಟಗಾರರಿಗೆ ಸಿದ್ಧಾಂತದವಿದೆ. ಸಂಸದನಾಗಿ ಬೈಯ್ಯೋದು ನಾನು ಒಪ್ಪಲ್ಲ ಮತ್ತು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.