ಚಾಮರಾಜನಗರ(ಸೆ.30): ಕೇರಳ- ಬಂಡೀಪುರ ರಾತ್ರಿ ಸಂಚಾರ ನಿಷೇಧ ರದ್ದುಪಡಿಸಲು ಕೇರಳಿಗರು ವೈನಾಡ್ ಜಿಲ್ಲೆಯಲ್ಲಿ ಹೋರಾಟ ಆರಂಭಿಸಿದ್ದಾರೆ. ಕೇರಳಿಗರು ಹೋರಾಟ ನಿಲ್ಲಿಸದಿದ್ದಲ್ಲಿ ಹಗಲಿನಲ್ಲಿ ರಸ್ತೆ ಮುಚ್ಚುತ್ತೇವೆ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜು ಎಚ್ಚರಿಕೆ ನೀಡಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್‌ಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಬಂಡೀಪುರ ಕಾಡಲ್ಲಿ ಮೇಲ್ಸೇತುವೆ ಹಾಗೂ ಅಂಡರ್ ಗ್ರೌಂಡ್ ರಸ್ತೆ ಕೇರಳ ಬೇಡಿಕೆ ಇಟ್ಟಿದೆ. ಕೇರಳದ ವೈನಾಡ್‌ನಲ್ಲಿ ಪ್ರತಿಭಟನೆ ಆರಂಭವಾಗಿ ಗಲಾಟೆ ನಡೆಯುತ್ತಿವೆ. ಮೇಲ್ಸೇತುವೆಗಿಂತಲೂ ಅಂಡರ್ ಗ್ರೌಂಡ್ ರಸ್ತೆ ಅಪಾಯಕಾರಿಯಾಗಿದೆ.

ರಾತ್ರಿ ಸಂಚಾರ ತೆರವಿನ ಹಿಂದೆ ಮರದ ಮಾಫಿಯಾ ತುಂಬಾ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಗಂಭೀರತೆ ಇಲ್ಲ. ಆದರೂ ಅರಣ್ಯ ಇಲಾಖೆ ಮಾತ್ರ ಪಾರದರ್ಶಕವಾಗಿದೆ ಎಂದಿದ್ದಾರೆ.

ಕಾಡು ಉಳಿಸುವ ಜವಾಬ್ದಾರಿ: ಕೇರಳಿಗರಿಗೆ ಕಾಡಿನಲ್ಲಿರುವ ಪ್ರಾಣಿ, ಪಕ್ಷಿಗಳು ಬೇಕಾಗಿಲ್ಲ ಎಂದು ತಿಳಿದಿದೆ. ನೂರಾರು ಹುಲಿ, ಚಿರತೆ, ಸಾವಿರಾರು ಆನೆಗಳಿವೆ. ಹೀಗಿರುವ ಕಾಡು ಸಾಕಾಗುತ್ತಿಲ್ಲ. ಮತ್ತಷ್ಟು ಕಾಡು ಬೇಕು. ಬೆಂಕಿಗೆ ಕಾಡು ಆಹುತಿಯಾಗಿ ವನ್ಯಜೀವಿಗಳು ಸಾವಿಗೀಡಾಗಿವೆ. ಹಾಗಾಗಿ ಹುಲಿ ಯೋಜನೆ ಬಹಳ ಮುಖ್ಯ ಹಾಗೂ ಕಾಡು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ.

ಚಾಮರಾಜನಗರ: ಶ್ರೀರಾಮುಲು ಆಸ್ಪತ್ರೆ ವಾಸ್ತವ್ಯ ಆರಂಭ

ಕೇರಳದ ರಾತ್ರಿ ತೆರವು ಗೊಳಿಸುವ ಸಂಬಂಧ ರಸ್ತೆತಡೆ ನಡೆಸುತ್ತಿದ್ದ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಕೇರಳ ರಸ್ತೆಯ ಮದ್ದೂರು ಚೆಕ್‌ಪೋಸ್ಟ್ ಬಳಿ ಹೆದ್ದಾರಿಯಲ್ಲಿ ವಾಟಾಳ್ ನಾಗರಾಜ್ ಮಲಗಿ ಪ್ರತಿಭಟನೆ ಆರಂಭಿಸಿ ಕೇರಳ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ರಾತ್ರಿ ಸಂಚಾರ ನಿಷೇಧ ಮುಂದುವರಿಯಲಿ. ಬಂಡೀಪುರ ಕಾಡಲ್ಲಿ ರಸ್ತೆ ನಿರ್ಮಾಣ ಬೇಡ ಎಂದು ಕೇರಳ ರಾಜ್ಯದ ಮುಖ್ಯ ಮಂತ್ರಿಗೆ ಧಿಕ್ಕಾರ ಕೂಗಿದ್ದಾರೆ.

ಜೀವಮಾನದಲ್ಲಿ ಸರ್ಕಾರಿ ನೌಕರಿಯನ್ನು ಕುಟುಂಬದವ್ರೂ ಕೇಳ್ಬಾರದು, ಆ ರೀತಿ ಮಾಡ್ತೀನಿ’

ವಾಟಾಳ್ ನಾಗರಾಜ್ ಹೆದ್ದಾರಿ ತಡೆದು ರಸ್ತೆತಡೆ ನಡೆಸಿದ ಪರಿಣಾಮ ನೂರಾರು ವಾಹನಗಳು ಸಾಲುಗಟ್ಟಿ ನಿಂತವು. ಸಬ್‌ಇನ್ಸ್‌ಪೆಕ್ಟರ್ ಲತೇಶ್ ಕುಮಾರ್ ಹೆದ್ದಾರಿ ತಡೆಬೇಡ ಎಂದು ಸಲಹೆ ನೀಡಿದರು. ಬಂಧನ, ಬಿಡುಗಡೆ: ರಸ್ತೆ ತಡೆ ಹಿಂಪಡೆಯಲು ಒಪ್ಪದ ವಾಟಾಳ್ ನಾಗರಾಜ್‌ರನ್ನು ಸಬ್‌ಇನ್ಸ್‌ಪೆಕ್ಟರ್ ಲತೇಶ್‌ಕುಮಾರ್ ಹಾಗೂ ಸಿಬ್ಬಂದಿ ಅಂಗಾತ ಮೇಲೆತ್ತಿಕೊಂಡು ಬಂಧಿಸಿ ಪೊಲೀಸ್ ವ್ಯಾನ್‌ಗೆ ಹತ್ತಿಸಿದರು. ಬಂಧಿತ ವಾಟಾಳ್ ನಾಗರಾಜ್‌ರನ್ನು ಗುಂಡ್ಲುಪೇಟೆ ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ಕೆಲ ಕಾಲ ಠಾಣೆಯಲ್ಲಿ ಇರಿಸಿಕೊಂಡು ನಂತರ ಬಿಡುಗಡೆ ಮಾಡಿದರು.