Asianet Suvarna News Asianet Suvarna News

ವಾಸ್ತು ದೋಷಕ್ಕೆ ಬಲಿಯಾದ ಗ್ರಂಥಾಲಯ! ದಿಕ್ಕು ತಪ್ಪಿಸಿದ ಇಂಜಿನಿಯರ್ ಸುರೇಂದ್ರಕುಮಾರ!

ವಾಸ್ತುದೋಷಕ್ಕೆ ಇನ್ನುವರೆಗೆ ಜನರ ಉಪಯೋಗಕ್ಕೆ ಬಾರದ ಸಾರ್ವಜನಿಕ ಗ್ರಂಥಾಲಯ. ವಿದ್ಯಾಕಾಶಿ ಧಾರವಾಡದಲ್ಲಿ ಸರಕಾರಿ ಇಲಾಖೆಯ ಅದಿಕಾರಿಯೊಬ್ಬರ ಆಡಿದ್ದೇ ಆಟವಾಗಿದೆ  ಕಳಪೆ ಕಾಮಗಾರಿ, ವಿಳಂಬ ಈ ಬಗ್ಗೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ದೂರು ಕೊಟ್ಟರೂ ಯಾವುದೇ ಅಧಿಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇಡೀ ಬಡಾವಣೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Vastu Dosha issue A useless library at dharawad public outraged agains delay work rav
Author
First Published Dec 21, 2023, 3:35 PM IST

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಡಿ.21) : ಅಂದುಕೊಂಡಂತೆ ಕಾಮಗಾರಿ ಮುಗಿದಿದ್ದರೆ ಆ ಜಿಲ್ಲೆಯ ಓದುಗರಿಗೆ ಗ್ರಂಥಾಲಯದ ಕಟ್ಟಡ ಸಜ್ಜಾಗಿ ಮೂರು ವರ್ಷ ಕಳೆದು ಹೋಗ್ತಿತ್ತು. ಧಾರವಾಡ ಜಿಲ್ಲೆ ವಿದ್ಯಾಕಾಶಿ, ಶಿಕ್ಷಣ ಕಾಶಿ ಎಂದೆಲ್ಲ ಪ್ರಸಿದ್ದವಾಗಿದೆ ಅದರಲ್ಲೂ ಧಾರವಾಡದಲ್ಲಿ ಒಂದು ಕಲ್ಲನ್ನ ಎಸೆದರೆ ಆಕಲ್ಲು ಹೋಗಿ ಬಿಳೋದು ಸಾಹಿತಿಗಳ ಮನೆಯ ಮೆಲೆ‌ ಅಂದ್ರೆ‌ ಅಷ್ಟೊಂದು ಸಾಹಿತಿಗಳ, ಕವಿಗಳ ಜಿಲ್ಲೆಯಾಗಿದೆ ಧಾರವಾಡ ಜಿಲ್ಲೆ ಸದ್ಯ ವಿದ್ಯಾಕಾಶಿ ಧಾರವಾಡದಲ್ಲಿ ಸರಕಾರಿ ಇಲಾಖೆಯ ಅದಿಕಾರಿಯೊಬ್ಬರ ಮಾಡಿದ್ದ ಆಟವಾಗಿದೆ ಎಂದು ಇಡೀ ಬಡಾವಣೆಯ ಜನರು ಕಾಮಗಾರಿಯ ಬಗ್ಗೆ ದೂರು ಕೊಟ್ಟಿದ್ದರೂ, ಅಧಿಕಾರಿ ವಿರುದ್ದ ಯಾವ ಅಧಿಕಾರಿಗಳು ಕ್ರಮ ಕೈ ಗೊಳ್ಳಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಆರೋಪಗಳು ಸದ್ಯ ಸ್ಥಳಿಯ ವಲಯದಲ್ಲಿ ಕೇಳಿ ಬರುತ್ತಿದೆ..

ಹೀಗೆ ನಿರ್ಮಾಣವಾಗುತ್ತಿರುವ ಕಟ್ಟಡ, ಕಳಪೆ ಸಾಮಗ್ರಿಗಳನ್ನ ಬಳಸಿ ಕಟ್ಟಡದ ಕಾಮಗಾರಿ ಮಾಡುತ್ತಿರುವ ಕಾರ್ಮಿಕರು, ಇನ್ನು ಇಡೀ ಕಟ್ಟಡ ಸದ್ಯ ವಾಸ್ತು ದೋಷಕ್ಕೆ ಬಲಿಯಾಗಿದೆ. ಈ ಗ್ರಂಥಾಲಯದ ಕಟ್ಟಡ..ಧಾರವಾಡದ ನಾರಾಯಣಪುರ ಬಡಾವಣೆಯಲ್ಲಿ ನಿರ್ಮಿತಿ ಇಲಾಖೆಯಿಂದ ನಿರ್ಮಾಣವಾಗುತ್ತಿರುವ  ಒಂದು ಕೋಟಿ ಮೂವತ್ತು ಲಕ್ಷ ಮೌಲ್ಯದ ಖರ್ಚು ಮಾಡಿ ನಿರ್ಮಿತಿ ಇಲಾಖೆಯಿಂದ ಬೃಹದಾಕಾರದ ಕಟ್ಟಡದ ಕಾಮಗಾರಿ ಕಳೆದ 2020 ರಿಂದ ನಿರ್ಮಾಣ ವಾಗುತ್ತಿದೆ. ಆದರೆ ಸದ್ಯ ನಾಲ್ಕು ವರ್ಷ ಕಳೆದರೂ ಕಾಮಗಾರಿಯ ಇನ್ನು ಮುಕ್ತಾಯವಾಗಿಲ್ಲ. ಜೊತೆಗೆ ಇಂಜಿನಿಯರ್ ಸುರೇಂದ್ರ ಕುಮಾರ ಕಟ್ಟಡದ ನಕ್ಷೆಯನ್ನೆ ಚೇಂಜ್ ಮಾಡಿ ವಾಸ್ತು ದೋಷಕ್ಕ ಅಂಟಿಕ್ಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ. ಇನ್ನು ನಿರ್ಮಿತಿ ಇಲಾಖೆಯಿಂದ ನಕ್ಷೆಯಲ್ಲಿ ಕಟ್ಟಡದ ಪ್ರಮುಖ ದ್ವಾರವನ್ನ ದಕ್ಷಿಣ ಭಾಗಕ್ಕೆ ನಿರ್ಮಾಣ ಆಗಬೇಕಿತ್ತು. ಆದರೆ ಇಲಾಖೆಯ ನಕ್ಷೆಯನ್ನೆ ಚೇಂಜ್ ಮಾಡಿ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ನಿರ್ಮಾಣ ಮಾಡಿದ್ದಾನೆ ,ಕಳಪೆ ಕಾಮಗಾರಿಯಿಂದ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ಈ ಕುರಿತು ನಾರಾಯಣ ಪೂರ ಬಡಾವಣೆಯ ಜನರು ಇಗಾಗಲೆ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ಶಿಕ್ಷಣ ಸಚಿವ ಕುಮಾರ ಬಂಗಾರಪ್ಪ ಅವರಿಗೆ ಪತ್ರವನ್ನು ಬರೆದಿದ್ದಾರೆ.

 

ಲೋಕಸಭೆ ಟಿಕೆಟ್‌ ಆಕಾಂಕ್ಷಿ ನಾನಲ್ಲ, ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆ ಮಾಡುವೆ: ಜಗದೀಶ್‌ ಶೆಟ್ಟರ್

ಇನ್ನು ಕಳೆದ ನಾಲ್ಕು ವರ್ಷ ಗಳಿಂದ ಈ ಕಾಮಗಾರಿ ನಡೆಯುತ್ತಿದೆ ಅದರಲ್ಲೂ ಮಂದಗತಿಯಲ್ಲಿ ಕಾಮಗಾರಿಯನ್ನ ಮಾಡಿಸುತ್ತಿದ್ದಾರೆ ಇಂಜಿನಿಯರ್ ಸುರೇಂದ್ರ ಕುಮಾರ, ಆದರೆ ಈ ಕುರಿತು ಸ್ಥಳಿಯರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಎನೋ ಪ್ರಯೋಜನೆಯಾಗಿಲ್ಲ. ಇನ್ನು ಈ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕಳೆದ ಜುಲೈ 2023 ರಲ್ಲಿ ಅಂದ್ರೆ ಜುಲೈ ತಿಂಗಳಲ್ಲಿ ಎರಡು ಭಾರಿ ನೋಟಿಸ್ ಜಾರಿ ಮಾಡಿದ್ದಾರೆ ಕಾಮಗಾರಿಯನ್ನ ಆದಷ್ಟು ಬೇಗ ಮುಗಿಸಕೊಡಬೇಕು ಎಂದು ಪತ್ರ ಬರೆದರು ಕಟ್ಟಡದ ಇಂಜಿನಿಯರ್ ಸರ್ವಾಧಿಕಾರಿಯಂತೆ ಜಿಲ್ಲಾಧಿಕಾರಿಗಳ ಆದೇಶ ಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಅನ್ನೋದು ಅಷ್ಟೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ಇನ್ನು ಈ ಕುರಿತು ಇಂಜಿನಿಯರ್ ಗೆ ದಾಖಲಾತಿಗಳನ್ನ ಕೇಳಿದ್ರೆ ಹರಕೆ ಉತ್ತರ ಕೊಡುತ್ತಾರೆ ಸುರೇಂದ್ರಕುಮಾರ.

ಧಾರವಾಡದಲ್ಲಿ ಕಾರ್ಮಿಕ ಇಲಾಖೆ ಐತಿಹಾಸಿಕ ಕಾರ್ಯಕ್ರಮ: 550 ತ್ರಿಚಕ್ರ ವಾಹನ ನೀಡಿದ ಸಚಿವ ಸಂತೋಷ್ ಲಾಡ್..!

ಸದ್ಯ ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದಿಂದ ಸಾಕಷ್ಟು ಕಾಮಗಾರಿಗಳು ನಡೆಯುತ್ತಲೆ ಇವೆ. ಇನ್ನು ನಿರ್ಮಿತಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಇಂಜಿನಿಯರ್ ಕಳಪೆ ಕಾಮಗಾರಿಯನ್ನ ಮಾಡಿಸತ್ತಿದ್ದಾರೆ. ಇನ್ನು ನಡೆಯುತ್ತಿರುವ ಕಾಮಗಾರಿಗಳು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲೆ ಕಾಮಗಾರಿಗಳು ನಡೆಯುತ್ತದೆ. ಆದರೆ ಈ ಇಂಜಿನಿಯರ್ ಮಾತ್ರ ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಗ್ರಂಥಾಲಯದ ಮುಖ್ಯ ದ್ವಾರವನ್ನೆ ಚೇಂಜ್ ಮಾಡಿದಲ್ಲದೆ ಕಾಮಗಾರಿ ಮುಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳೆ ಎರಡು ಭಾರಿ ನೋಟಿಸ್ ಜಾರಿ ಮಾಡಿದ್ರು ಇನ್ನು ವರೆಗೂ ಕಾಮಗಾರಿ ಮುಗಿಸದೆ ಇರುವದು ದುರಾದೃಷ್ಠಕರ ಸಂಗತಿಯಾಗಿದೆ ಇನ್ನು ಕಟ್ಟಡ ಗ್ರಂತಾಲಯ ಕಟ್ಟಡದ ಆರಂಭದಲ್ಲೆ ವಾಸ್ರುದೋಷಕ್ಕೆ‌ ಬಲಿಯಾಗಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ಈ ವರದಿ ನೋಡಿ ಕಾರಣವಾದ ಇಂಜಿನಿಯರ್ ಮೆಲೆ ಕ್ರಮ ಕೈಗೊಳ್ತಾರಾ ಎಂಬುದನ್ನ ಕಾಯ್ಸು ನೋಡಬೇಕಿದೆ....

Follow Us:
Download App:
  • android
  • ios