ಜ್ಞಾನದ ಮೂಲಕ ಎಲ್ಲರ ಮನಗೆದ್ದ ಮಹಾನ್ ಸಂತ ವಾಲ್ಮೀಕಿ
ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಸುಜ್ಞಾನದ ಬೆಳಕು ಹರಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ತಮ್ಮ ಜ್ಞಾನದ ಮೂಲಕ ಸರ್ವರ ಮನಗೆದ್ದ ಮಹಾನ್ ಸಂತ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಕೆ.ಆರ್. ನಗರ (ಅ.10): ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಸುಜ್ಞಾನದ ಬೆಳಕು ಹರಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ತಮ್ಮ ಜ್ಞಾನದ ಮೂಲಕ ಸರ್ವರ ಮನಗೆದ್ದ ಮಹಾನ್ ಸಂತ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದ ಆಡಳಿತ ಸೌಧದ ಕಚೇರಿಯಲ್ಲಿ ತಾಲೂಕು ನಾಡ ಹಬ್ಬಗಳ ಸಮಿತಿ ಮತ್ತು ನಾಯಕರ ಸಂಘದ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ (Valmiki Jayanthi) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹನೀಯರ ತತ್ವ ಮತ್ತು ಆದರ್ಶಗಳನ್ನು ಪಾಲಿಸಿದರೆ ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂದರು.
ವಾಲ್ಮೀಕಿ ಅವರ ಜೀವನ ಮತ್ತು ಸಾಧನೆ ಎಲ್ಲರಿಗೂ ಮಾದರಿಯಾಗಿದ್ದು ಬೇಡನಾಗಿ ಹುಟ್ಟಿದರೂ ಪರಿವರ್ತನೆಯ ಕುಲುಮೆಯಲ್ಲಿ ಉರಿದು ಜ್ಞಾನದ ಅಗ್ನಿಯಲ್ಲಿ ಮಿಂದೆದ್ದ ಅವರು ಮಹರ್ಷಿಯ ಪಟ್ಟಕ್ಕೇರಿ ಭರತ ಭೂಮಿಯ ಶ್ರೆಷ್ಠ ಋುಷಿಯಾಗಿದ್ದಾರೆ ಎಂದು ತಿಳಿಸಿದರು.
ಮನುಕುಲದ ಉದ್ಧಾರಕ್ಕೆ ತಮ್ಮ ಜೀವನವನ್ನೇ (Life) ತ್ಯಾಗ ಮಾಡುವ ಜ್ಞಾನಿಗಳು ಮತ್ತು ಮಹಾನ್ ಪುರುಷರನ್ನು ಪೂಜ್ಯ ಭಾವನೆಯಿಂದ ಕಾಣುವುದರ ಜತೆಗೆ ಅವರ ಆದೇಶಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನಾಗಮೋಹನ್ ದಾಸ್ ಸಮಿತಿ ರಚಿಸಿ ಪರಿಶಿಷ್ಟಸಮುದಾಯದವರಿಗೆ ಮೀಸಲಾತಿ ನೀಡುವ ಸಂಬಂಧ ಮಹತ್ವದ ನಿರ್ಧಾರ ಕೈಗೊಂಡಿದ್ದ ಫಲವಾಗಿ ಈಗ ಮೀಸಲಾತಿ ದೊರೆತಿರುವುದು ಸಂತಸದ ವಿಚಾರವಾಗಿದ್ದು ಇದರ ಹಿಂದೆ ಪ್ರಸನ್ನಾನಂದಪುರಿ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಹಲವರ ಹೋರಾಟ ಮತ್ತು ಶ್ರಮದ ಫಲವಾಗಿ ಮೀಸಲಾತಿ ದೊರಕಿದ್ದು ಇದರ ಅನುಕೂಲ ಅರ್ಹರಿಗೆ ದೊರಕುವಂತೆ ಮಾಡುವ ಜವಾಬ್ದಾರಿ ಸಮಾಜದ ಮೇಲಿದ್ದು ಎಲ್ಲರೂ ಈ ವಿಚಾರದಲ್ಲಿ ಅತ್ಯಂತ ಜಾಗರೂಕತೆಯಿಂದ ವರ್ತಿಸಬೇಕು. ಇಂದು ಸರ್ಕಾರದ ವತಿಯಿಂದ ಸಾಂಕೇತಕವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿದ್ದು ಮುಂದಿನ ದಿನಗಳಲ್ಲಿ ತಾಲೂಕು ನಾಯಕರ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರ ಜತೆ ಚರ್ಚಿಸಿ ಅದ್ದೂರಿಯಾಗಿ ಜಯಂತಿ ಕಾರ್ಯಕ್ರಮ ಮಾಡೋಣ ಎಂದು ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಎಚ್.ಸಿ. ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಾಲೂಕು ನಾಯಕರ ಸಂಘದ ಅಧ್ಯಕ್ಷ ನರಸಿಂಹ ನಾಯಕ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಅರುಣ್‌ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ವಿ. ರಮೇಶ್, ಜಿಲ್ಲಾಯುವ ಜೆಡಿಎಸ್ ಉಪಾಧ್ಯಕ್ಷ ಕೆಗ್ಗೆರೆ ಕುಚೇಲ, ಮುಂಜನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅನೀಫ್‌ಗೌಡ, ಸದಸ್ಯರಾದ ಬಾಲಾಜಿ ಗಣೇಶ್, ವಸಂತಶಂಕರ್, ತಹಸೀಲ್ದಾರ್ ಎಸ್. ಸಂತೋಷ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ. ಅಶೋಕ್, ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಬಿಇಒ ಟಿ.ಎನ್. ಗಾಯತ್ರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ನಾಯಕ ಸಮಾಜದ ಮುಖಂಡರು ಇದ್ದರು.
ವಾಲ್ಮೀಕಿ ತತ್ವಾದರ್ಶ ಒಳಪಡಿಸಿಕೊಳ್ಳಲಿ
ಶ್ರೀಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳನ್ನು ಇಂದಿನ ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು. ಅವರು ಕಿತ್ತೂರ ಮತಕ್ಷೇತ್ರದ ನೇಸರಗಿ ಭರಮಪ್ಪನ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ನಿಂಗಪ್ಪ ಅರಕೇರಿ ಮಾತನಾಡಿ, ಸರ್ಕಾರ ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಿದ್ದು ಸ್ವಾಗತಾರ್ಹ. ಸರಕಾರದ ಸೌಲತ್ತು ಪಡೆದು ಜನಾಂಗದವರು ಅಭಿವೃದ್ಧಿ ಹೊಂದಬೇಕೆಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಭರಮಪ್ಪ ಸತ್ಯೆನ್ನವರ, ಗ್ರಾಪಂ ಅಧ್ಯಕ್ಷೆ ಸುಶೀಲಾ ತುಬಾಕಿ, ಸದಸ್ಯರಾದ ನಿಂಗಪ್ಪ ತಳವಾರ, ಯಮನಪ್ಪ ಪೂಜೇರಿ, ಅಡಿವೆಪ್ಪ ಚಿಗರಿ, ಪತ್ರಕರ್ತ ಸಿ.ವೈ.ಮೆಣಸಿನಕಾಯಿ ಮುಂತಾದವರು ಇದ್ದರು. ಶಿಕ್ಷಕ ಸುನೀಲ ಕೊಳದೂರ ನಿರೂಪಿಸಿ ವಂದಿಸಿದರು.