Asianet Suvarna News Asianet Suvarna News

ಸೋಮವಾರಪೇಟೆ: ಒಕ್ಕಲಿಗರ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮ

ಒಕ್ಕಲಿಗರ ಯುವ ವೇದಿಕೆ ವತಿಯಿಂದ ತೋಳೂರುಶೆಟ್ಟಿಯಲ್ಲಿ ಶನಿವಾರ  ನಡೆದ ಕೆಸರುಗದ್ದೆ ಕ್ರೀಡಾಕೂಟದ ಮಹಿಳೆಯರ ಥ್ರೋಬಾಲ್‌ ಪಂದ್ಯಾಟದಲ್ಲಿ ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.

Vakkaligar Kesarugadde Sports Festival at madikeri rav
Author
Mangalore, First Published Jul 25, 2022, 12:14 PM IST

ಸೋಮವಾರಪೇಟೆ (ಜು,25) : ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ತೋಳೂರುಶೆಟ್ಟಿಯಲ್ಲಿ ಶನಿವಾರ ನಡೆದ ಕೆಸರುಗದ್ದೆ ಕ್ರೀಡಾಕೂಟದ ಮಹಿಳೆಯರ ಥ್ರೋಬಾಲ್‌ ಪಂದ್ಯಾಟದಲ್ಲಿ ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು. ನೇಗಳ್ಳೆ ವೀರಭದ್ರೇಶ್ವರ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ವಾಲಿಬಾಲ್‌ ಪಂದ್ಯಾಟದಲ್ಲಿ ಪಂಚಲಿಂಗೇಶ್ವರ ಕೂಗೂರು ಪ್ರಥಮ, ಜಕ್ಕನಳ್ಳಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅಬ್ಬೂರುಕಟ್ಟೆತಂಡ ಪ್ರಥಮ, ಕೂತಿ ಗ್ರಾಮ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ಹಾನಗಲ್ಲುಶೆಟ್ಟಳ್ಳಿ ಗ್ರಾಮ ತಂಡ ಪ್ರಥಮ, ದೊಡ್ಡತೋಳೂರು ಗ್ರಾಮ ತಂಡ ದ್ವಿತೀಯ ಸ್ಥಾನ ಗಳಿಸಿತು.

ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದ ಕ್ರೀಡಾಪಟುಗಳು

ಬಾಲಕರ ಕೆಸರುಗದ್ದೆ ಓಟದಲ್ಲಿ ಲಿಖಿತ್‌ ಕುಡಿಗಾಣ (ಪ್ರಥಮ), ಕಲ್ಕಂದೂರು ವಿಕ್ರಮ್‌ಗೌಡ (ದ್ವಿ), ಹಿರಿಯರ ವಿಭಾಗದಲ್ಲಿ ಸುಖಾಂತ್‌ ತಲ್ತಾರೆ (ಪ್ರ), ರಘು ಗೌಡಳ್ಳಿ(ದ್ವಿ), ಬಾಲಕಿಯರ ವಿಭಾಗದಲ್ಲಿ ಕೀರ್ತನ ದೊಡ್ಡತೋಳೂರು (ಪ್ರ), ರಂಜಿತ್‌ ದೊಡ್ಡತೋಳೂರು (ದ್ವಿ), ಮಹಿಳೆಯರ ವಿಭಾಗದಲ್ಲಿ ಅರ್ಪಿತ ಗೌಡಳ್ಳಿ(ಪ್ರ), ಕಿರಗಂದೂರು ಹರ್ಷಿತ(ದ್ವಿ), ಹಿರಿಯ ಮಹಿಳೆಯರ ವಿಭಾಗದಲ್ಲಿ ದೊಡ್ಡತೋಳೂರು ಶೈಲಾ ದಿನೇಶ್‌(ಪ್ರ), ಮಮತಾ ಮಾದಪ್ಪ ಕಿರಗಂದೂರು(ದ್ವಿ) ಸ್ಥಾನ ಪಡೆದರು.

ಪತ್ನಿಯನ್ನು ಎತ್ತಿಕೊಂಡು ಓಡುವ ಸ್ಪರ್ಧೆಯಲ್ಲಿ ಚಿಕ್ಕತೋಳೂರು ಗ್ರಾಮದ ಮೋಹಿತ್‌ ದಂಪತಿ ಪ್ರಥಮ, ತಲ್ತಾರೆಶೆಟ್ಟಳ್ಳಿ ಶಶಾಂಕ್‌ ದಂಪತಿ ದ್ವಿತೀಯ ಸ್ಥಾನಗಳಿಸಿದರು. ವಿವಿಧ ವಿಭಾಗಗಳಲ್ಲಿ ಮಕ್ಕಳಾದ ಅರೆಯೂರು ಅದ್ವಿತಾ, ಅರಾಧ್ಯ ಕೂತಿ, ವಿಕ್ಕಿ ಚಿಕ್ಕತೋಳೂರು, ಸಾತ್ವಿಕ್‌ ಹೊಸಬೀಡು, ಅದೃಷ್ಟನೇಗಳ್ಳೆ, ಅಂಜನ ತೋಳೂರುಶೆಟ್ಟಳ್ಳಿ, ಚಿರಂತ್‌ಗೌಡ ಮಸಗೋಡು, ಕೀರ್ತನ ಕೋಟೆಯೂರು, ಲಿಖಿತ್‌ ಕುಡಿಗಾಣ, ಪುನಿತ್‌ ಕುಶಾಲನಗರ ಬಹುಮಾನ ಗಿಟ್ಟಿಸಿದರು. ಹಿರಿಯ ನಾಗರಿಕರ ಓಟದಲ್ಲಿ ಲಿಂಗರಾಜು ಹರಪಳ್ಳಿ(ಪ್ರ), ಡಿ.ಎ. ಮಾದಪ್ಪ(ದ್ವಿ) ಸ್ಥಾನ ಗಳಿಸಿದರು.

ಕೆಸರುಗದ್ದೆ ಓಟ: ಮೂರು ಬಾರಿ ಬಿದ್ದರೂ ಗುರಿ ಮುಟ್ಟಿದ ಸಚಿವ ರವಿ!

ಉದ್ಯಮಿ ಅರುಣ್‌ ಕೊತ್ನಳ್ಳಿ, ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್‌, ಉಪಾಧ್ಯಕ್ಷ ನತೀಶ್‌ ಮಂದಣ್ಣ, ಕಾರ್ಯದರ್ಶಿ ಮಸಗೋಡು ದಯಾನಂದ ಬಹುಮಾನ ವಿತರಿಸಿದರು. 24ಎಸ್‌ಪಿಟಿ01: ಸೋಮವಾರಪೇಟೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಲಿಗರ ಯುವವೇದಿಕೆ ವತಿಯಿಂದ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯ ರೋಚಕ ಕ್ಷಣ.

ಕೊಡಗಿನಲ್ಲಿ ಸಾಧಾರಣ ಮಳೆ: ಮುಂಗಾರು ಪ್ರಾರಂಭದಿಂದಲೂ ಕೊಡಗಿನಾದ್ಯಂತ ಭಾರೀ ಮಳೆ ಸುರಿದು ನದಿಗಳೆಲ್ಲ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಜಮೀನು, ಆಸ್ತಿಪಾಸ್ತಿಯೆಲ್ಲ ನೆರೆಯ ಪಾಲಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಇದೀಗ ಕಳೆದ ವಾರದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. 

 ಕೊಡಗು ಜಿಲ್ಲಾದ್ಯಂತ ಭಾನುವಾರ ಸಾಧಾರಣ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಕವು ಕಡೆಗಳಲ್ಲಿ ಬಿಡುವು ನೀಡಿ ಮಳೆ ಸುರಿಯಿತು. ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 14 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ 26 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 7 ಮಿ.ಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 8 ಮಿ.ಮೀ. ಮಳೆಯಾಗಿದೆ.

Follow Us:
Download App:
  • android
  • ios