ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದ ಕ್ರೀಡಾಪಟುಗಳು
ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ವಿವಿದೆಡೆ ಕೆಸರು ಗದ್ದೆ ಕ್ರೀಡಾಕೂಟ ನಡೆಯುತ್ತಿವೆ. ಆಟಗಾರರು ಕೆಸರುಗದ್ದೆಯಲ್ಲಿ ಮಿಂದೇಳುತ್ತಿದ್ದಾರೆ
ಸೋಮವಾರಪೇಟೆ (ಜು.24(); ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ತೋಳೂರುಶೆಟ್ಟಳ್ಳಿ ಕೆ.ಎಂ. ದಿನೇಶ್ ಅವರ ಗದ್ದೆಯಲ್ಲಿ 7ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಶನಿವಾರ ನಡೆಯಿತು. ಗ್ರಾಮೀಣ ಭಾಗದಿಂದ ಆಗಮಿಸಿದ ಕ್ರೀಡಾಪಟುಗಳು ಕೆಸರಿನಲ್ಲಿ ಬಿದ್ದೆದ್ದು ಆಟವಾಡಿದರು. ಹಗ್ಗಜಗ್ಗಾಟದಲ್ಲಿ ಪುರುಷರು, ಮಹಿಳೆಯರು ತಮ್ಮೂರಿಗೆ ಕೀರ್ತಿ ತರಬೇಕೆಂದು ತಮ್ಮ ಬಲವನ್ನು ಪ್ರದರ್ಶಿಸುತ್ತಿದ್ದರು. ಗದ್ದೆಯಲ್ಲಿ ನಾಟಿ ಮಾಡಿ ಅನುಭವವಿರುವ ರೈತಾಪಿ ಮಹಿಳೆಯರು, ಆಟದಲ್ಲಿ ಮಿಂಚಿದರು. ಮಳೆಯಲ್ಲಿ ನೆನೆಯುತ್ತಲೇ ತಮ್ಮ ಕ್ರೀಡಾಸ್ಪೂರ್ತಿ ತೋರಿಸಿದರು.
ಉದ್ಯಮಿ ಹರಪಳ್ಳಿ ರವೀಂದ್ರ (Harapanahalli raveendra)ಕ್ರೀಡಾಕೂಟ ಉದ್ಘಾಟಿಸಿ, ಒಕ್ಕಲಿಗರಿಗೆ ಮೂಲ ಕಸುಬು ಕೃಷಿಯಾಗಿರುವುದರಿಂದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಪೋ›ತ್ಸಾಹ ನೀಡಲೇಬೇಕಾಗಿದೆ. ಎಲೆ ಮರೆಯ ಗ್ರಾಮೀಣ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಕ್ರೀಡಾಕೂಟಗಳು ಸಹಕಾರಿ ಎಂದು ಹೇಳಿದರು.
ಕಲೆ ಮತ್ತು ಕ್ರೀಡೆಗಳ ಉಳಿವಿಗೆ ಎಲ್ಲರೂ ಶ್ರಮಿಸಿ: ಅಪ್ಪಚ್ಚು ರಂಜನ್
ಯುವ ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್ ಮಾತನಾಡಿ, ಕೋವಿಡ್ ಕಾರಣದಿಂದ ಎರಡು ವರ್ಷ ಕ್ರೀಡಾಕೂಟ ನಡೆಸಲು ಸಾಧ್ಯವಾಗಿರಲಿಲ್ಲ. ಗ್ರಾಮೀಣ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಮ್ಮ ಕರ್ತವ್ಯವಾಗಿದೆ. ಇಂತಹ ಕ್ರೀಡಾಕೂಟಗಳು ನಡೆಯುತ್ತಿದ್ದರೆ ನಮ್ಮ ಸಮುದಾಯದ ಒಗ್ಗಟ್ಟಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಪ್ಪ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಅಖಿಲಾ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಕೆ. ರವಿ, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಉದ್ಯಮಿಗಳಾದ ಅರುಣ್ ಕೊತ್ನಳ್ಳಿ, ಮಂಜೂರು ತಮ್ಮಣ್ಣಿ, ತೋಳೂರುಶೆಟ್ಟಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್, ಮೋಹಿತ್, ದಿವ್ಯ ಇದ್ದರು. ತೀರ್ಪುಗಾರರಾಗಿ ಗೌಡಳಿ ಪ್ರವೀಣ್, ತಾಕೇರಿ ಅಮೃತ್ ಕಾರ್ಯನಿರ್ವಹಿಸಿದರು.
ಕೊಡಗಿನಲ್ಲಿ ಸಾಧಾರಣ ಮಳೆ :
ಕೊಡಗು ಜಿಲ್ಲಾದ್ಯಂತ ಶನಿವಾರ ಸಾಧಾರಣ ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಬಿಡುವು ನೀಡಿ ಆಗಾಗ್ಗೆ ಮಳೆಯಾಯಿತು. ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 15.97 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 97.52 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿ ವರೆಗೆ 1855.76 ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 1513.13 ಮಿ.ಮೀ. ಮಳೆಯಾಗಿತ್ತು.
ರಾಮಕೊಲ್ಲಿಗೆ ಭೂವಿಜ್ಞಾನ ಇಲಾಖೆ, ಎನ್‌ಡಿಆರ್‌ಎಫ್ ತಂಡ ಭೇಟಿ, ಪರಿಶೀಲನೆ
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 23.50 ಮಿ.ಮೀ., ಕಳೆದ ವರ್ಷ ಇದೇ ದಿನ 108.88 ಮಿ.ಮೀ., ಜನವರಿಯಿಂದ ಇಲ್ಲಿ ವರೆಗೆ 2591.26 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2110.37 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 19.81 ಮಿ.ಮೀ., ಕಳೆದ ವರ್ಷ ಇದೇ ದಿನ 97.54 ಮಿ.ಮೀ., ಜನವರಿಯಿಂದ ಇಲ್ಲಿ ವರೆಗೆ 1474.37 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1249.33 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 4.60 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 86.13 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1501.67 ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 1179.70 ಮಿ.ಮೀ. ಮಳೆಯಾಗಿತ್ತು. ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 12.20, ನಾಪೋಕ್ಲು 8.20, ಸಂಪಾಜೆ 44, ಭಾಗಮಂಡಲ 29.60, ವಿರಾಜಪೇಟೆ ಕಸಬಾ 6.80, ಹುದಿಕೇರಿ 29.40, ಶ್ರೀಮಂಗಲ 30.20, ಪೊನ್ನಂಪೇಟೆ 25, ಅಮ್ಮತ್ತಿ 10.50, ಬಾಳೆಲೆ 17, ಸೋಮವಾರಪೇಟೆ ಕಸಬಾ 0.80, ಶನಿವಾರಸಂತೆ 6, ಶಾಂತಳ್ಳಿ 3, ಕೊಡ್ಲಿಪೇಟೆ 11.60, ಕುಶಾಲನಗರ 0.20, ಸುಂಟಿಕೊಪ್ಪ 6 ಮಿ.ಮೀ. ಮಳೆಯಾಗಿದೆ.