ಟೀಕೆ ಮಾಡೋರನ್ನ ಉದಾಸೀನ ಮಾಡಬೇಕು: ಕಾಂತಾರ ಬಗ್ಗೆ ಅಪಸ್ವರ ಎತ್ತಿದ ನಟ ಚೇತನ್‌ಗೆ ವಚನಾನಂದ ಶ್ರೀ ಕೌಂಟರ್
ಕೋಲ, ಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ ಎನ್ನುವ ವಾದಕ್ಕೆ ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ: ವಚನಾನಂದ ಸ್ವಾಮೀಜಿ
ಗದಗ(ಅ.21): ಕಾಂತಾರ ಚಿತ್ರ ನೋಡಿಲ್ಲ. ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೊಗಳಿಗೆ ಕೇಳಿ ಬರುತ್ತಿದೆ. ಹಿಂದೂ ಸಂಸ್ಕೃತಿಯನ್ನ ಎತ್ತಿ ಹಿಡಿದಿದ್ದರಿಂದ ಕಾಂತಾರ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಜನರ ಭಾವನೆಗೆ ಗೌರವ ಕೊಡಬೇಕು. ನಮ್ಮ ಸಂಸ್ಕೃತಿಯನ್ನ ಟೀಕೆ ಮಾಡಬಾರದು ಅಂತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ನಟ ಚೇತನ್‌ಗೆ ಕೌಂಟರ್ ಕೊಟ್ಟಿದ್ದಾರೆ. ದೈವಾರಾಧನೆ, ಕೋಲ ಸಂಸ್ಕೃತಿ ಹಿಂದೂ ಧರ್ಮಕ್ಕೆ ಸೇರಿಲ್ಲ ಎಂಬ ನಟ ಚೇತನ್ ಹೇಳಿಕೆಗೆ ನಿನ್ನೆ(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಕೋಲ, ಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ ಎನ್ನುವ ವಾದಕ್ಕೆ ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ. ಹಿಂದೂ ಅನ್ನೋದು ದೊಡ್ಡ ಸನಾತನ ಪರಂಪರೆ. ಹಿಂದೂ ಸಂಸ್ಕೃತಿ ವಿಶಾಲ ಆಲದ ಮರ ಇದ್ದ ಹಾಗೆ. ಇಲ್ಲಿಯ ಮತ ಪಂಥಗಳು ಆಲದ ಮರದ ರೆಂಬೆ, ಟೊಂಗೆ ಇದ್ದ ಹಾಗೆ ಎಂದರು.
ನಾವು ಹಾಕುವ ರುದ್ರಾಕ್ಷಿ, ವಿಭೂತಿ ಎಲ್ಲವೂ ಸನಾತನ ಸಂಸ್ಕೃತಿಯ ಭಾಗ. ನಮ್ಮ ಸಂಸ್ಕೃತಿ ಪರಂಪರೆ ಬೆಳಸಬೇಕು. ಟೀಕೆ ಮಾಡುವವರು, ಆಕಾಶಕ್ಕೆ ಉಗುಳಿದಂತೆ, ವಾಪಾಸ್ ಅವರ ಮೇಲೆ ಬೀಳುತ್ತದೆ ಎನ್ನುವ ಮೂಲಕ ಚೇತನ್ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಕಾಂತಾರ ಚಿತ್ರ ವಿವಾದ: ನಟ ಚೇತನ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ
ಜಯಮೃತ್ಯುಂಜಯ ಸ್ವಾಮಿಗಳ ವಿಡಿಯೋ ಇದೆ ಎಂಬ ವದಂತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡೋದಕ್ಕೆ ನಿರಾಕರಿಸಿದ ಶ್ರೀಗಳು, ನಮ್ಮ ಬಗ್ಗೆ ಪ್ರಶ್ನೆಗಳಿದ್ದರೇ ಕೇಳಿ. ಊಹಾಪೋಹಗಳಿಗೆ ಉತ್ತರಿಸಲ್ಲ. ಜಯಮೃತ್ಯುಂಜಯ ಸ್ವಾಮಿಗಳು ಹೋರಾಟಕ್ಕೆ ಕರೆದ್ರೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಕರೆದ್ರೆ ಹೇಳ್ತೀನಿ..ಮಾಧ್ಯಮದವರನ್ನ ಕರೆದು ಹೇಳುತ್ತೇನೆ ಅಂತ ತಿಳಿಸಿದ್ದಾರೆ.
ರಾಮ ಮಂದಿರ ಧ್ವಸಗೊಳಿಸಲು ಪಿಎಫ್‌ಐ ಸಂಚು ವಿಚಾರಕ್ಕೆ ಉತ್ತರಿಸಿ, ರಾಷ್ಟ್ರದ ವಿಷಯ ಬಂದಾಗ ರಾಷ್ಟ್ರದ ಜೊತೆಗೆ ಇರುತ್ತೇನೆ. ರಾಷ್ಟ್ರಕ್ಕೆ ಧಕ್ಕೆ ತರುವ ಯಾವುದೇ ಮನಸ್ಸುಗಳನ್ನ ಸಹಿಸಬಾರದು. ಬಲಿಷ್ಠ ಪ್ರಧಾನಿ ಕೈಯಲ್ಲಿ ಭಾರತ ಇದೆ. ಕಳೆದ ಎಂಟು ವರ್ಷದಲ್ಲಿ ಭಾರತ ಬಹಳಷ್ಟು ಬಲಿಷ್ಠವಾಗಿದೆ. ಇವತ್ತು ವಿದೇಶಕ್ಕೆ ಹೋದಾಗ ಅಲ್ಲಿ ಸಿಗುವ ಗೌರವ ಬೇರೆಯದ್ದೇ ಇದೆ. ಯಾವುದೇ ಸಂಚಿಗೆ ಭಾರತ ಸರ್ಕಾರ ಸುಮ್ಮನೆ ಕೂರುವುದಿಲ್ಲ. ನಮ್ಮ ದೇಶದ ಎನ್ ಐಎ ತುಂಬ ಬಲಿಷ್ಠವಾಗಿದೆ ಅಂತ ಹೇಳಿದ್ದಾರೆ.
ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ; ಸುದ್ದಿಗೋಷ್ಠಿಯಲ್ಲಿ ನಟ ಚೇತನ್ ಹೇಳಿಕೆ
17 ಜನ ಶಾಸಕರು ಸರ್ಕಾರ ಒಳಗೆ ಇದ್ದು ಮೀಸಲಾತಿಗೆ ಪ್ರಯತ್ನ ನಡೆಸಿದ್ದಾರೆ. ಸಮುದಾಯಕ್ಕೆ ಸೇರಿದ 17 ಸಚಿವ ಶಾಸಕರು ಸರ್ಕಾರದಲ್ಲಿ ಇದ್ದು ಪಂಚಮಸಾಲಿ ವಿಷಯಕ್ಕೆ ಹೋರಾಟ ನಡೆಸಿದ್ದಾರೆ. ನಾವು ಹೊರಗಡೆ ಇದ್ದು, ಮೀಸಲಾತಿಗೆ ಪ್ರಯತ್ನಿಸುತ್ತಿದ್ದೇವೆ. ಪೀಠಕ್ಕೆ ಬಂದು ನಾಲ್ಕು ವರ್ಷ ಆಗಿದೆ. ಎರಡು ವರ್ಷ ಕೋವಿಡ್ ನಲ್ಲಿ ಹೋಗಿದೆ. ಹರಿಹರಕ್ಕೆ ಹತ್ತಿರದಲ್ಲಿರುವ ಗದಗ ಜಿಲ್ಲೆಯಾದ್ಯಂತ ಸಂಚಾರ ಮಾಡಿ ಜನಜಾಗೃತಿ ಮಾಡುತ್ತಿದ್ದೇನೆ ಅಂತ ಹೇಳಿದ್ದಾರೆ.
ಚುನಾವಣೆಗೂ ಮುನ್ನ ಮೀಸಲಾತಿ ಪ್ರಕಟಿಸದಿದ್ದರೆ ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಆ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಜಯಮೃತ್ಯುಂಜಯ ಸ್ವಾಮಿಗಳು ಹಾಗೂ ನಮ್ಮ ದಾರಿ ಬೇರೆ ಇರಬಹುದು. ಉದ್ದೇಶ ಒಂದೇಯಾಗಿದೆ. ಗಂಗಾನದಿ ಗಂಗೋತ್ರಿಯಲ್ಲಿ ಉದ್ಭವಿಸುತ್ತದೆ. ಯಮುನಾ, ಯಮನೋತ್ರಿಯಲ್ಲಿ ಉದ್ಭವಿಸುತ್ತದೆ. ಪ್ರಯಾಗರಾಜದಲ್ಲಿ ಎರಡು ನದಿಗಳು ಸೇರೇ ಸೇರುತ್ತವೆ ಹಾಗೆಯೇ ಉದ್ದೇಶ ಒಂದೇ ಇದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಹೋರಾಟ ಕಾನೂನಾತ್ಮಕವಾಗಿದೆ. ಪಾದಯಾತ್ರೆ ಮುಗಿನ ನಂತರ ಕುಲಶಾಸ್ತ್ರ ಅಧ್ಯಯನಕ್ಕೆ ಆಗ್ರಹಿಸಿದ್ವಿ. ಮಹಾರಾಷ್ಟ್ರದಲ್ಲಿ ಮರಾಠರಿಗೆ ಕುಲಶಾಸ್ತ್ರ ಅಧ್ಯಯನ ಮಾಡದೇ ಮೀಸಲಾತಿ ಘೋಷಣೆ ಮಾಡಿದ್ರು. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ಮೀಸಲಾತಿ ರಿಜೆಕ್ಟ್ ಆಯ್ತು. ಗೌಡ ಲಿಂಗಾಯತ, ದೀಕ್ಷಾ ಗೌಡರು, ಮಲೆ ಗೌಡರು ಅಂತಾ ಹೋರಾಟ ಮಾಡ್ತಿಲ್ಲ. ಅವುಗಳು ಗೆಜೆಟ್ ನ ಜಾತಿ ಪಟ್ಟಿಯಲ್ಲಿ ಇಲ್ಲ. ಶುದ್ಧ ಪಂಚಮಸಾಲಿಗೆ ಮೀಸಲಾತಿ ಕೇಳಿದ್ದೇವೆ. ಈಗಾಗಲೇ 18 ಜಿಲ್ಲೆಯಲ್ಲಿ ಅಧ್ಯಯನ ಮುಗಿದಿದೆ. ಮಲೆಗೌಡರು, ದೀಕ್ಷಾ ಲಿಂಗಾಯತರಿಗಾಗೆ ಕಲ್ಯಾಣ ಕರ್ನಾಟಕ, ಮೈಸೂರು ಭಾಗಕ್ಕೆ ಹೋಗಬೇಕೆ ಅಂತಾ ಹೇಳುತ್ತಿದ್ದಾರೆ. ಆದಷ್ಟು ಬೇಗ ಅಧ್ಯಯನ ವರದಿಯನ್ನ ಸಲ್ಲಿಸಬೇಕಿದೆ. ಈ ಬಗ್ಗೆ ಜಯಪ್ರಕಾಶ ಹೆಗಡೆ, ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದೇವೆ. ಸರ್ಕಾರವನ್ನ ಬೈಕೊಂಡು, ಗಡುವು ಕೊಟ್ಕೊಂಡು ಮಾಡುತ್ತಿಲ್ಲ. ಗಡುವು ಕೊಟ್ಟರೇ ಗಟ್ಟಿಯಾಗಿ ನಿಲ್ಲಬೇಕೆ, ಗಡುವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು 15 ದಿನಕ್ಕೆ ಒಮ್ಮೆ ಗಡುವು ಕೊಡುವುದು ಆಗಕೂಡದು ಎಂದು ಮೃತ್ಯುಂಜಯ ಸ್ವಾಮಿಗಳಿಗೆ ಟಾಂಗ್ ನೀಡಿದ್ರು.
ಪಂಚಮಸಾಲಿಗರಿಗೆ 2ಎ ಬೇಡ ಅಂತಾ ಕೆಲವರು ಹೋರಾಟ ಮಾಡ್ತಿದಾರೆ. ನಾಳೆ ಅವರು ಚಾಲೆಂಜ್ ಮಾಡಿದ್ರೂ ಮೀಸಲಾತಿ ಸಿಗಬೇಕು ಆ ರೀತಿ ಮೀಸಲಾತಿ ಸಿಗುವ ಹಾಗೆ ಆಗಬೇಕು ಅಂತ ತಿಳಿಸಿದ್ದಾರೆ.