'ವಿವಾದಾತ್ಮಕ ಹೇಳಿಕೆ ನೀಡುವ ಯತ್ನಾಳ್ ಮುಂದೊಂದಿನ ಸಿಎಂ ಆಗ್ತಾರೆ'

ಒಂದ ಕಾಲಕ್ಕೆ ಯೋಗಿ ಆದಿತ್ಯನಾಥ್ ಮಾತನಾಡಿದ್ರೆ ಬರಿ ವಿವಾದ ಆಗ್ತಿತ್ತು| ಯೋಗಿ ಆದಿತ್ಯನಾಥ್  ಹಿಂದೂ ಬಿಟ್ಟು ಬೇರೆನೂ ಮಾತನಾಡ್ತಿರಲಿಲ್ಲ| ಆದ್ರೆ ಯಾರಿಗೂ ಗೊತ್ತಿರಲಿಲ್ಲ ಅವರು ಮುಂದೆ ಉತ್ತರ ಪ್ರದೇಶ  ರಾಜ್ಯದ ಮುಖ್ಯಮಂತ್ರಿ ಆಗ್ತಾರೆ ಅಂತ ಎಂದ ವಚನಾನಂದ ಶ್ರೀಗಳು| ಇವತ್ತು ಬಹಳಷ್ಟು ಜನ, ಮೀಡಿಯಾದವರು ಬಸವನಗೌಡ ಪಾಟೀಲ್ ಯತ್ನಾಳ ಅವರನ್ನ ವಿವಾದಾತ್ಮಕ ವ್ಯಕ್ತಿ ಎಂದುಕೊಂಡಿದ್ದಾರೆ| ಈ ವ್ಯಕ್ತಿ ಮುಂದೆ ಈ ರಾಜ್ಯದ ಚುಕ್ಕಾಣಿ ಹಿಡಿತಾರೆ ಅಂತಾ ಮಾಧ್ಯಮವರಿಗೆ ಗೊತ್ತಿಲ್ಲ| 

Vachanananda Swamiji Talks About MLA Basanagouda Patil Yatnal

ಬಾಗಲಕೋಟೆ(ನ.25): ವಿವಾದಾತ್ಮಕವಾಗಿ ಹೇಳಿಕೆ ನೀಡುವ ವ್ಯಕ್ತಿ ಮುಂದೊಂದು ದಿನ ರಾಜ್ಯದ ಚುಕ್ಕಾಣಿ ಹಿಡಿತಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದೊಂದಿನ ಮುಖ್ಯಮಂತ್ರಿ ಆಗ್ತಾರೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ  ವಚನಾನಂದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ‌‌

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದ ಕಾಲಕ್ಕೆ ಯೋಗಿ ಆದಿತ್ಯನಾಥ್ ಮಾತನಾಡಿದ್ರೆ ಬರಿ ವಿವಾದ ಆಗ್ತಿತ್ತು, ಯೋಗಿ ಆದಿತ್ಯನಾಥ್  ಹಿಂದೂ ಬಿಟ್ಟು ಬೇರೆನೂ ಮಾತನಾಡ್ತಿರಲಿಲ್ಲ, ಆದ್ರೆ ಯಾರಿಗೂ ಗೊತ್ತಿರಲಿಲ್ಲ ಅವರು ಮುಂದೆ ಉತ್ತರ ಪ್ರದೇಶ  ರಾಜ್ಯದ ಮುಖ್ಯಮಂತ್ರಿ ಆಗ್ತಾರೆ ಅಂತ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇವತ್ತು ಬಹಳಷ್ಟು ಜನ, ಮೀಡಿಯಾದವರು ಬಸವನಗೌಡ ಪಾಟೀಲ್ ಯತ್ನಾಳ ಅವರನ್ನ ವಿವಾದಾತ್ಮಕ ವ್ಯಕ್ತಿ ಎಂದುಕೊಂಡಿದ್ದಾರೆ. ಈ ವ್ಯಕ್ತಿ ಮುಂದೆ ಈ ರಾಜ್ಯದ ಚುಕ್ಕಾಣಿ ಹಿಡಿತಾರೆ ಅಂತಾ ಮಾಧ್ಯಮವರಿಗೆ ಗೊತ್ತಿಲ್ಲ ಎಂದ ಶ್ರೀಗಳು ಹೇಳಿದ್ದಾರೆ. 

ಬಿ.ಎಸ್. ಯಡಿಯೂರಪ್ಪ ಅವರ ನಂತರ ರಾಜ್ಯದಲ್ಲಿ ಲಿಂಗಾಯತ ಸಿಎಂ ಆಗಬೇಕೆಂದ್ರೆ ಅದು ಪಂಚಮಸಾಲಿಯವರೇ ಆಗಬೇಕು. ಸಾಮರಸ್ಯ ಪಂಚಮಸಾಲಿ ಸಮಾಜದಲ್ಲಿದೆ ವೀರಶೈವ, ಲಿಂಗಾಯತ ಎಂದು ನಾವು-ನಾವು ಒಳ ಜಗಳ ಮಾಡ್ತಾ ಹೋದ್ರೆ ಅದು ಆಗಲ್ಲ. ನಮ್ಮ ಸಮುದಾಯದ ನಾಯಕರ ಬೆನ್ನಿಗೆ ನಿಂತುಕೊಳ್ಳೋಣ. ಅದು ಬಸನಗೌಡ ಪಾಟೀಲ್ ಯತ್ನಾಳ್ ಆಗಿರಬಹುದು, ಮುರುಗೇಶ್ ನಿರಾಣಿ ಆಗಿರಬಹುದು. ಪಂಚಮಸಾಲಿ ಅವರೇ ಸಿಎಂ ಆಗಬೇಕು ಅನ್ನೋದು ಕೂಡ ಹರಿಹರ ಪಂಚಮಸಾಲಿ ಪೀಠದ ಆಶಯವಾಗಿದೆ. ಒಟ್ಟಿನಲ್ಲಿ ಪಂಚಮಸಾಲಿ ಸಮುದಾಯದವರೇ ಸಿಎಂ ಆಗಬೇಕು ಎಂದು ತಿಳಿಸಿದ್ದಾರೆ. 

ಶಾಸಕ ಬಸವನಗೌಡ ಪಾಟೀಲ್ ಅವರು ಪ್ರವಾಹ ಸಂತ್ರಸ್ತರ ಬಗ್ಗೆ  ಮಾತನಾಡಿದ್ದಕ್ಕೆ 1200 ಕೋಟಿ ಪರಿಹಾರ ಬಂದಿದೆ. ಪ್ರವಾಹ ಬಂದಾಗ ಸಂತ್ರಸ್ತರ ಪರವಾಗಿ ದ್ವನಿ ಎತ್ತಿದ್ದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತ್ರ. ಆಗ ಅವರ ಹೇಳಿಕೆ ಪಕ್ಷಕ್ಕೆ ಮುಜುಗರ ತಂದಿರಬಹುದು. ಆದ್ರೆ ನಮ್ಮ ಬಸವನಗೌಡರು ಅಧಿಕಾರ ಬಯಸುವ ವ್ಯಕ್ತಿಯಲ್ಲ, ಅಧಿಕಾರಕ್ಕಾಗಿ ಹಿಂದಿನ ಬಾಗಿಲಿಗೆ ಹೋದವರಲ್ಲ. ಉತ್ತರ ಕರ್ನಾಟಕದ ಜನರ ಹಿತ ಬಯಸುವ ಮತ್ತು ನಿಷ್ಠುರ ವ್ಯಕ್ತಿತ್ವ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios