ಖಾಲಿ ಸೈಟ್ ಸ್ವಚ್ಛತೆ ಕಾಪಾಡದಿದ್ದರೆ ಮುಟ್ಟುಗೋಲು: ಶಾಸಕ ಪ್ರದೀಪ್ ಈಶ್ವರ್
ಖಾಲಿ ನಿವೇಶನಗಳಲ್ಲಿ ಕಸ ತುಂಬದಂತೆ ನೋಡಿಕೊಳ್ಳೋದು ನಿವೇಶನ ಮಾಲೀಕರ ಜವಾಬ್ದಾರಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ (ಅ.25): ಖಾಲಿ ನಿವೇಶನಗಳಲ್ಲಿ ಕಸ ತುಂಬದಂತೆ ನೋಡಿಕೊಳ್ಳೋದು ನಿವೇಶನ ಮಾಲೀಕರ ಜವಾಬ್ದಾರಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ನಗರದಲ್ಲಿ ಹಮ್ಮಿಕೊಂಡಿದ್ದ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ಕ್ಷೇತ್ರದ ನಗರದ ವಾರ್ಡ್ ಗಳ ಭೇಟಿ ಮಾಡುವ ಮೂಲಕ ಎಲ್ಲ ಮತದಾರರ ಸಮಸ್ಯೆಗಳನ್ನ ಆಲಿಸುವ ಯೋಜನೆಯಡಿ 31 ನೇ ವಾರ್ಡ್ ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಗರ ಭಾಗದಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕಸತುಂಬಿರುವ ಬಗ್ಗೆ ಆಯಾ ಮಾಲೀಕರೆ ಎಚ್ಚರವಹಿಸಬೇಕು ಎಂದರು.
ನಿರ್ಲಕ್ಷ್ಯ ವಹಿಸಿದರೆ ಸೈಟ್ ಮುಟ್ಟುಗೋಲು: ನಿವೇಶನ ಮಾಲೀಕರು ನಿರ್ಲಕ್ಷ್ಯ ವಹಿಸಿದರೆ ನಗರಸಭೆ ವತಿಯಿಂದ ಎರಡು-ಮೂರು ಭಾರಿ ನೋಟಿಸ್ ನೀಡುತ್ತೇವೆ. ಆಗಲೂ ಅವರೇನಾದರೂ ನಿರ್ಲಕ್ಷ್ಯ ಮುಂದುವರಿಸಿದರೆ ನಿವೇಶನ ಮುಟ್ಟುಗೊಲು ಹಾಕಿಕೊಳ್ಳಲಾಗುವುದು. ಇಂದು ಒಂದೇ ದಿನ 10 ವಾರ್ಡುಗಳಲ್ಲಿ ತಾವು ಸಂಚರಿಸಿದ್ದಾಗ ತಿಳಿಸಿದರು. ವಾರ್ಡ್ ನ ನಿವಾಸಿಗಳ ಬೇಟಿ ಮಾಡಿ ಅವರ ಸಮಸ್ಯೆಗಳಾದ ಮನೆ ಹಕ್ಕುಪತ್ರ ,ಮಾಶಾಸನ, ಪಡಿತರ ಚೀಟಿ ಮತ್ತು ಮೂಲಭೂತ ಸೌಕರ್ಯಗಳಾದ ನೀರು,ಚರಂಡಿ, ವಿದ್ಯತ್, ರಸ್ತೆ ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಳೆ ಬಂದರೆ ಮೇಲಿಂದ ಹರಿದು ಬರೋ ನೀರು ಮನೆಗಳಿಗೆ ನುಗ್ಗುತ್ತದೆ.
ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಫೋಟೋ ವೈರಲ್: ಆಧಾರ ಸಹಿತವಾಗಿ ಸ್ಪಷ್ಟನೆ ಕೊಟ್ಟ ಗುರೂಜಿ
ಸುತ್ತಲೂ ಗಿಡಗಂಟಿಗಳು ಎತ್ತರೆತ್ತರಕ್ಕೆ ಬೆಳೆದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ವರ್ಷಾನುಗಟ್ಟಲೆ ಶಾಶ್ವತ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳನ್ನು ನಮ್ಮ ಅಮ್ಮ ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ಕಿದ್ವಾಯಿ ಸೇರಿದಂತೆ ವಿವಿಧ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಏರ್ಪಾಟನ್ನು ಮಾಡಿರುವುದಾಗಿ ಹೇಳಿದರು.
ನ.1ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕನಸು ಮತ್ತು ದೂರ ದೃಷ್ಟಿಯ ಜಲ್ಲೆಯನ್ನಾಗಿಸಲು ಹಸಿರುಯಕ್ತ, ಕಸ ಮುಕ್ತ , ಪ್ಲಾಸ್ಟಿಕ್ ಮುಕ್ತ ಮಾಡಿ ಸ್ವಚ್ಚ ಚಿಕ್ಕಬಳ್ಳಾಪುರ ಮಾಡ ಬೇಕೆನ್ನುವ ಉದ್ದೇಶದಿಂದ ನವೆಂಬರ್ ಒಂದರಿಂದ ಪ್ಲಾಸ್ಟಿಕ್ ನಿಷೇಧ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ಜನತೆಗೆ ಹೋಟೆಲ್ ಮಾಲಿಕರಿಗೆ ಮತ್ತು ವ್ಯಾಪಾರಿಗಳಿಗೂ ಮನವರಿಕೆ ಮಾಡಿ ಕೊಡುತ್ತಿದ್ದು ಜನರು ಆದಷ್ಟು ಮನೆಯಿಂದಲೇ ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ತೆಗೆದು ಕೊಂಡು ಹೋಗಿ ಸರಕು-ಸರಂಜಾಮುಗಳನ್ನು ತರಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು
ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ: ನಗರದ 31,29, 23ನೇ ವಾರ್ಡ್ ಸೇರಿದಂತೆ ಹಲವು ವಾರ್ಡ್ ಗಳಲ್ಲಿ ಮನೆಮನೆಗೂ ತೆರಳಿ ಎಲ್ಲ ಜನರ ಸಮಸ್ಯೆಗಳನ್ನ ಆಲಿಸುತ್ತಾ ಕೆಲವು ಸಮಸ್ಯೆಗಳನ್ನ ಸ್ಥಳದಲ್ಲಿಯೇ ಪರಿಹರಿಸಿದ್ದು, ದೀರ್ಘ ಕಾಲದ ಸಮಸ್ಯೆಗಳ ಪರಿಹಾರಕ್ಕೆ ಕಾಲಾವಕಾಶ ತಗೆದು ಕೊಂಡಿದ್ದೇನೆ. ದಸರಾ ಹಬ್ಬಕ್ಕಾಗಿ ಎಲ್ಲರೂ ಮನೆಗಳಿಲ್ಲಿಯೇ ಇರುತ್ತಾರೆ ಅನ್ನೋ ಕಾರಣಕ್ಕೆ ಬೆಳಿಗ್ಗೆ ಯಿಂದ ಸಂಜೆವರೆಗೂ ಪಾದಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು
'ಸರ್ವರೂ ಎಚ್ಚರದಿಂದ ಇರಬೇಕು': ಇದು ನಾಡಿನ ಸುಪ್ರಸಿದ್ದ ಮೈಲಾರಸ್ವಾಮಿ ಕಾರ್ಣಿಕ ನುಡಿ!
ಈ ವೇಳೆ ಆಹಾರ ನೀರೀಕ್ಷಕ ನಾರಾಯಣಸ್ವಾಮಿ,ನಗರ ಪೋಲಿಸ್ ಠಾಣೆಯ ಪಿಎಸೈ ನಂಜುಂಡಪ್ಪ, ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್, ಮುಖಂಡರಾದ ಕೆ.ಎಲ್.ಶ್ರೀನಿವಾಸ್, ವಿನಯ್ ಬಂಗಾರಿ, ರಾಜಶೇಖರ್(ಬುಜ್ಜಿ) ಎಂ.ವೆಂಕಟೇಶ್, ಡ್ಯಾನ್ಸ್ ಶ್ರೀನಿವಾಸ್, ನಾಗಭೂಷಣ್, ಅಲ್ಲು ಅನಿಲ್,ಇರ್ಫಾನ್, ಕಂಟ್ರಾಕ್ಟರ್ ಮಂಜು, ಜಾಕೀರ್, ಸುರೇಶ್‌ರಾಜ್, ಮಾಜಿ ಜಿ.ಪಂ.ಸದಸ್ಯೆ ನಾರಾಯಣಮ್ಮ, ಮಂಗಳಪ್ರಕಾಶ್ ,ನಗರಸಭೆ, ಕಂದಾಯ,ಆಹಾರ, ಬೆಸ್ಕಾಂ,ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಇದ್ದರು.