'ಸರ್ವರೂ ಎಚ್ಚರದಿಂದ ಇರಬೇಕು': ಇದು ನಾಡಿನ ಸುಪ್ರಸಿದ್ದ ಮೈಲಾರಸ್ವಾಮಿ ಕಾರ್ಣಿಕ ನುಡಿ!

ಕಾಫಿನಾಡಿನ ಮೈಲಾರಲಿಂಗ ಸ್ವಾಮಿಯ ಕಾಲ  ಕಾರ್ಣಿಕದ ನುಡಿಯ ಕ್ಷಣಕ್ಕಾಗಿ ಕಾತುರದಿಂದ ಕಾಯ್ತಾರೆ..ಆ ನುಡಿ ದೇಶದ ಅಗುಹೋಗುಗಳಿಗೆ  ಸಾಕ್ಷಿಯಾಗುತ್ತೇ ಅನ್ನೋ ನಂಬಿಕೆಯು ಇದೆ..ಈ ವರ್ಷವೂ ಅಂತಹದ್ದೇ ಕಾರ್ಣಿಕ ನುಡಿಯೋದನ್ನು ನುಡಿದಿದ್ದೆ..ನುಡಿಯಾಗುತ್ತಿದ್ದಂತೆ ಭಕ್ತರು ಜೈಘೋಷ ಹಾಕಿ ಸಂಭ್ರಮಿಸಿದ್ರು.
 

Karnika Of Mailaralinga Swamy In Chikkamagaluru District Biruru Cautions People To Careful In Near Future gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.25): ಕಾಫಿನಾಡಿನ ಮೈಲಾರಲಿಂಗ ಸ್ವಾಮಿಯ ಕಾಲ  ಕಾರ್ಣಿಕದ ನುಡಿಯ ಕ್ಷಣಕ್ಕಾಗಿ ಕಾತುರದಿಂದ ಕಾಯ್ತಾರೆ..ಆ ನುಡಿ ದೇಶದ ಅಗುಹೋಗುಗಳಿಗೆ  ಸಾಕ್ಷಿಯಾಗುತ್ತೇ ಅನ್ನೋ ನಂಬಿಕೆಯು ಇದೆ .ಈ ವರ್ಷವೂ ಅಂತಹದ್ದೇ ಕಾರ್ಣಿಕ ನುಡಿಯೋದನ್ನು ನುಡಿದಿದ್ದೆ..ನುಡಿಯಾಗುತ್ತಿದ್ದಂತೆ ಭಕ್ತರು ಜೈಘೋಷ ಹಾಕಿ ಸಂಭ್ರಮಿಸಿದ್ರು.

ಸರ್ವರು ಎಚ್ಚರದಿಂದಿರಬೇಕು ಎಂದು ಭವಿಷ್ಯವಾಣಿ: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮೈಲಾರಲಿಂಗ ಸ್ವಾಮಿ ಕಾರ್ಣಿಕದ ನುಡಿಮುತ್ತುಗಳನ್ನ ನುಡಿದಿದ್ದು ಜಗತ್ತು ಶಾಂತಿ ಭಯಸಲಿದೆ ಎಂದು ಹೇಳಿದೆ. ವಿಜಯದಶಮಿಯ ಮರುದಿನವಾದ ಇಂದು ಬೆಳಗ್ಗಿನ ಜಾವ 4.42 ಕಾರ್ಣಿಕದ ನುಡಿಮುತ್ತುಗಳನ್ನ ನುಡಿದಿದೆ. ಇಡೀ ದಿನ ಉಪವಾಸವಿದ್ದು ಬೆಳಗ್ಗಿನದ ಪೂಜೆ ಬಳಿಕ ಬಿಲ್ಲನ್ನೇರಿ ಭವಿಷ್ಯವಾಣಿ ನುಡಿದಿದ್ದಾರೆ.ಇಟ್ಟ ರಾಮನ ಬಾಣ ಹುಸಿಯಿಲ್ಲ. ಸುರರು-ಅಸುರರು ಕಾದಾಡಿದರು. ಭಕ್ತಕೋಟಿಗೆ ಮಂಗಳವಾಯಿತು. ಶಾಂತಿ ಮಂತ್ರ ಪಠಿಸಿದರು. ಸರ್ವರು ಎಚ್ಚರದಿಂದಿರಬೇಕು ಎಂದು ಭವಿಷ್ಯವಾಣಿ ನುಡಿದಿದ್ದಾರೆ.

ನಿಖಿಲ್‌ಗೆ ಗಿಫ್ಟ್ ಬಂದಿರೋದು ಎಂದು ಅರಣ್ಯಾಧಿಕಾರಿಗಳಿಗೆ ಹುಲಿ ಉಗುರಿನ ಪೆಂಡೆಂಟ್ ಒಪ್ಪಿಸಿದ ಎಚ್‌ಡಿಕೆ!

ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ: ರಾಮ ಇಟ್ಟ ಬಾಣ ಹೇಗೆ ಗುರಿ ತಪ್ಪುವುದಿಲ್ಲವೋ ಅದೇ ರೀತಿ ಮೈಲಾರಲಿಂಗ ಹೇಳುವ ಮಾತು ತಪ್ಪುವುದಿಲ್ಲ. 

ಸುರರು-ಅಸುರರು ಕಾದಾಡಿದರು: ಈಗಾಗಲೇ ಜಗತ್ತಿನಲ್ಲಿ ಯುದ್ಧಗಳು ಆರಂಭವಾಗಿವೆ. ಉಕ್ರೇನ್-ರಷ್ಯಾದ ಬಳಿಕ ಹಮಾಸ್-ಇಸ್ರೇಲ್ ಮಧ್ಯೆ ಯುದ್ಧವಾಗುತ್ತಿದೆ. ಸುರರು-ಹಮಾಸ್, ಅಸುರರು-ಇಸ್ರೇಲ್ ಮಧ್ಯೆ ಯುದ್ಧವಾಗುತ್ತಿದೆ. ಮುಂದೆಯೂ ಇಂತಹಾ ಸನ್ನಿವೇಶ ನಿರ್ಮಾಣವಾಗಬಹುದು. 

ಶಾಂತಿ-ಮಂತ್ರ ಪಠಿಸಿದರು: ಜಗತ್ತಿನ ಮೇಲಿಂದ ಮೇಲೆ ಯುದ್ಧಗಳಾಗುತ್ತಿವೆ. ದೇಶಗಳು ಸೇರಿ ಜನ ಶಾಂತಿ ಮಂತ್ರ ಪಠಿಸುವ ಸ್ಥಿತಿ ನಿರ್ಮಾಣವಾಗಿದೆ. ಜಗತ್ತು ಶಾಂತಿ ಬಯಸಿದೆ. 

ಸರ್ವರು ಎಚ್ಚರದಿಂದ ಇರಬೇಕು: ವಿಶ್ವದಲ್ಲಿ ಸಿದ್ಧಾಂತ ಸೇರಿದಂತೆ ನಾನಾ ಕಾರಣಗಳಿಂದಾಗಿ ಯುದ್ಧಗಳು ನಡೆಯುತ್ತಿವೆ. ಮುಂದೆಯೂ ನಡೆಯಬಹುದು. ದೇಶಗಳು ಸೇರಿದಂತೆ ಜನರು ಎಚ್ಚರದಿಂದ ಇರಬೇಕು ಎಂದು ಮೈಲಾರಲಿಂಗ ಸ್ವಾಮಿಯ ನುಡುಮುತ್ತಿಗಳನ್ನ ಹಿರಿಯರು ವಿಶ್ಲೇಷಿಸಿದ್ದಾರೆ. 

Jailer ನರಸಿಂಹನ ಪಾತ್ರವೇ ಸಿನಿಮಾ ಆಗುತ್ತಾ?: ಶಿವಣ್ಣನ ಹೊಸ ಸಿನಿಮಾ ಟೈಟಲ್ ಏನು ಗೊತ್ತಾ?

ರೈತ ಸಮುದಾಯದಲ್ಲಿ ಬೇಸರ: ಕಳೆದ ಎರಡ್ಮೂರು ವರ್ಷಗಳಿಂದ ಮೈಲಾರಲಿಂಗಸ್ವಾಮಿ ಭವಿಷ್ಯವಾಣಿಯಲ್ಲಿ ಮಳೆ ಬಗ್ಗೆ ಹೇಳುತ್ತಿತ್ತು. ಆದರೆ, ಈ ವರ್ಷ ಮಳೆ ಬಗ್ಗೆ ಯಾವುದೇ ಭವಿಷ್ಯವಾಣಿ ಹೇಳದಿರೋದು ರೈತ ಸಮುದಾಯದಲ್ಲಿ ಬೇಸರ ಹಾಗೂ ಆತಂಕ ಹುಟ್ಟಿಸಿದೆಒಟ್ಟಾರೆ, ನಾಲ್ಕೈದು ಶತಮಾನಗಳಿಂದ ಸುಳ್ಳಾಗದಂತಹ ಕಾರ್ಣಿಕ ಭವಿಷ್ಯ ಕಳೆದ ವರ್ಷವೂ ಸತ್ಯವಾಗಿತ್ತು.ಮಳೆ ಕಡಿಮೆ ಎನ್ನುವ ಭವಿಷ್ಯ ವಾಣಿ ಇತ್ತು. ಈ ವರ್ಷ ಸುರರು-ಅಸುರರು ಕಾದಾಡಿದರು ಎನ್ನುವ ಭವಿಷ್ಯದ ಜೊತೆಗೆ ಮಳೆ ಬಗ್ಗೆ ಭವಿಷ್ಯ ಹೊರಬಾರದೇ ಇರುವುದು ಆತಂಕ ಮೂಡಿಸಿದೆ.

Latest Videos
Follow Us:
Download App:
  • android
  • ios