Sirsi Family Dispute: ಖಾಸಗಿ ಜಮೀನಿನಲ್ಲಿ ಯಕ್ಷಗಾನ ಮಾಡುವ ಬಗ್ಗೆ ದಾಯಾದಿಗಳು ಜಗಳ ಆಡಿಕೊಂಡಿದ್ದಾರೆ. ಚಪ್ಪಲಿಯಲ್ಲಿ, ಕೋಲಿನಲ್ಲಿ ಹೊಡೆದುಕೊಳ್ಳುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

ಖಾಸಗಿ ಜಮೀನಿನಲ್ಲಿ ಯಕ್ಷಗಾನ ನಡೆಸುವ ವಿಚಾರವಾಗಿ ಘರ್ಷಣೆಯಾಗಿದ್ದು, ಈಗ ಆಸ್ಪತ್ರೆ ಸೇರುವ ಹಾಗೆ ಆಗಿದೆ. ಹೌದು, ದಾಯಾದಿಗಳಿಬ್ಬರು ಕಲಹ ಮಾಡಿಕೊಂಡಿದ್ದಾರೆ. ಪೊರಕೆ, ಚಪ್ಪಲಿಯಿಂದ, ಕೋಲಿನಿಂದ ಹಲ್ಲೆ ಮಾಡಿರುವ ವಿಡಿಯೋ ವೈರಲ್‌ ಆಗ್ತಿದೆ.

ಎಲ್ಲಿ? ಏನಾಯ್ತು?

ಚಂದ್ರಶೇಖರ ಹಾಗೂ ನೇತ್ರವತಿ ಅವರು ಮಂಜುನಾಥ್ ಹಾಗೂ ಭಾರತಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಶಿರಸಿಯ ಕಲಗಾರ ಒಡ್ಡು ಬಳಿ ಈ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಘಟನೆ ನಡೆದಿದೆ.

ಯಕ್ಷಗಾನ ಪ್ರಿಯರಿದ್ದಾರೆ

ಉತ್ತರ ಕನ್ನಡ ಹಾಗೂ ಮಂಗಳೂರು ಬಳಿ ಯಕ್ಷಗಾನ ಪ್ರಿಯರು ಹೆಚ್ಚಿದ್ದಾರೆ. ಹಾಗೆಯೇ ಶಿರಸಿಯಲ್ಲಿಯೂ ಕೂಡ ಯಕ್ಷಗಾನ ಮಾಡಲು ಯೋಜನೆ ಹಾಕಲಾಗಿತ್ತು. ಈಗ ಜಾಗದ ವಿಚಾರವಾಗಿ ಜಗಳ ಆಗಿದೆ.

ಆಸ್ಪತ್ರೆ ದಾಖಲಾಗಿದ್ದಾರೆ

ಹಲ್ಲೆಗೊಳಗಾದ ಮಂಜುನಾಥ್ ಹಾಗೂ ಭಾರತಿ ಶಿರಸಿ ತಾಲೂಕು ಆಸ್ಪತ್ರೆಗೆ ದಾಖಲಾಗಿದೆ. ಈ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಕೇಸ್‌ ದಾಖಲಾಗಿದೆಯಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.