ಸಮುದ್ರದ ಈಜಾಡಲು ತೆರಳಿದ್ದ ಕಾರ್ಮಿಕ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ವೇಳೆ ಲೈಫ್‌ಗಾರ್ಡ್, ವಾಟರ್‌ ಸ್ಫೋರ್ಟ್ ಸಿಬ್ಬಂದಿಯಿಂದ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆದಿದೆ.

ಕಾರವಾರ, ಉತ್ತರಕನ್ನಡ (ಮೇ.12): ಸಮುದ್ರದ ಈಜಾಡಲು ತೆರಳಿದ್ದ ಕಾರ್ಮಿಕ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ವೇಳೆ ಲೈಫ್‌ಗಾರ್ಡ್, ವಾಟರ್‌ ಸ್ಫೋರ್ಟ್ ಸಿಬ್ಬಂದಿಯಿಂದ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆದಿದೆ.

ಬಬ್ಲು ಶೇನ್(34), ಮುಳುಗುತ್ತಿದ್ದ ಕಾರ್ಮಿಕ. ಪಶ್ಚಿಮ ಬಂಗಾಳ ಮೂಲದವನಾಗಿರುವ ಬಬ್ಲು, ಕಾರವಾರದ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಇಂದು ರಜಾದಿನ ಹಿನ್ನೆಲೆ ಸಮುದ್ರದಲ್ಲಿ ಈಜಾಡಲು ಕಡಲತೀರಕ್ಕೆ ಬಂದಿದ್ದ. ಸಮುದ್ರಕ್ಕೆ ಇಳಿದು ಕೆಲ ಸಮಯ ಈಜಾಡುತ್ತಲೇ ನಿತ್ರಾಣಗೊಂಡು ಮುಳುಗುತ್ತಿದ್ದ ಕಾರ್ಮಿಕ. ಇದನ್ನ ಗಮನಿಸಿದ ಲೈಫ್ ಗಾರ್ಡ್ ಹಾಗೂ ವಾಟರ್ ಸ್ಫೋರ್ಟ್ ಸಿಬ್ಬಂದಿ ತಕ್ಷಣ ಜೆಟ್‌ಸ್ಕೀ ಮೂಲಕ ತೆರಳಿ ಮುಳುಗುತ್ತಿದ್ದ ಕಾರ್ಮಿಕನ ರಕ್ಷಣೆ ಮಾಡಿರುವ ಸಿಬ್ಬಂದಿ. ಲೈಫ್‌ಗಾರ್ಡ್ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ಬದುಕುಳಿದ ಕಾರ್ಮಿಕ.

ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು; ಮಕ್ಕಳಿಗೆ ಸೊಪ್ಪು ಕಟ್ಟಿ ವಿಶೇಷ ಪೂಜೆ

ಮಳೆಗಾಲ ಹಿನ್ನೆಲೆ ಸಮುದ್ರದಲ್ಲಿ ಬಿರುಗಾಳಿಯಿಂದ ಬೃಹತ್ ಅಲೆಗಳು ಏಳುತ್ತಿವೆ ಸಮುದ್ರಕ್ಕೆ ತೆರಳದಂತೆ ಸೂಚಿಸಿದರೂ ಪ್ರವಾಸಿಗರು ಮೋಜು ಮಸ್ತಿಗಾಗಿ ನಿಯಮಗಳನ್ನು ಗಾಳಿಗೆ ತೂರಿ ಈಜಾಡಲು ತೆರಳಿ ಜೀವ ತೆತ್ತುತ್ತಲೇ ಇದ್ದಾರೆ. ಸಮುದ್ರದ ಬಳಿಕ ತೆರಳಿದಾಗ ಪ್ರವಾಸಿಗರು ಎಚ್ಚರಿಕೆಯಿಂದ ಇರುವುದು ಒಳಿತು.