Breaking: ಕುಮಟಾ ಬಳಿ ಅಘನಾಶಿನಿ ನದಿಗೆ ನಿರ್ಮಿಲಾಗುತ್ತಿದ್ದ ಸೇತುವೆ ಕುಸಿತ

ಕುಮಟಾ ತಾಲ್ಲೂಕು ತಾರೀಬಾಗಿಲಿನ ಬಳಿ ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್‌ ಕುಸಿದು ಬಿದ್ದಿದೆ.

Uttara Kannada Kumta near aghanashini river under construction bridge collapsed sat

ಉತ್ತರ ಕನ್ನಡ (ಮಾ.27): ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕು ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತವಾಗಿದೆ. ಇನ್ನು ಸೇತುವೆಯ ಸ್ಲ್ಯಾಬ್ ಕುಸಿದ ವೇಳೆ ಸೇತುವೆ ಕೆಳಗಿದ್ದ ಟ್ರಕ್ ಹಾಗೂ ಜೆಸಿಬಿ ಜಖಂ ಆಗಿದೆ. ಇನ್ನು ಕಳಪೆ ಕಾಮಗಾರಿಯಿಂದಲೇ ಸೇತುವೆ ಕುಸಿತವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕುಮಟಾದ ಹೆಗಡೆಯ ತಾರೀಬಾಗಿಲಿನಲ್ಲಿ ನಡೆದ ಘಟನೆ ನಡೆದಿದೆ. ಕುಮಟಾದ ಹೆಗಡೆ ಮತ್ತು ಮಿರ್ಜಾನ್ ಸಂಪರ್ಕಿಸುವ ಸೇತುವೆ ಇದಾಗಿದೆ. ಪಿಲ್ಲರ್‌ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲ್ಯಾಬ್‌ಗಳು ಕುಸಿತವಾಗಿವೆ. ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆಯೇ ಕುಸಿದುಬಿದ್ದ ಪರಿಣಾಮ ಸೇತುವೆ ಕೆಳಗಿದ್ದ ಟ್ರಕ್, ಜೆಸಿಬಿ ಹಾಗೂ ಕಾರು ಜಖಂ ಆಗಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸೇತುವೆಯ ಕಳಪೆ ಕಾಮಗಾರಿಯಿಂದಲೇ ಸೇತುವೆ ಕುಸಿತಗೊಂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲೆ ಮಾದಪ್ಪನಿಗೆ 25 ದಿನದಲ್ಲಿ 3.13 ಕೋಟಿ ರೂ. ಕಾಣಿಕೆ ಕೊಟ್ಟ ಭಕ್ತರು; ಅಮೇರಿಕಾ, ನೇಪಾಳ, ಬಾಂಗ್ಲಾ ಕರೆನ್ಸಿ ಪತ್ತೆ

ಇನ್ನು ಸೇತುವೆ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಕಳಪೆ ಕಾಮಗಾರಿ ಮಾಡಿ ಸೇತುವೆ ನಿರ್ಮಿಸಿ ಹೋದರೆ, ನಮ್ಮ ಗ್ರಾಮದ ಜನರು ಜೀವ ತೆರಬೇಕಿತ್ತು. ಪುಣ್ಯಕ್ಕೆ ನಿಮ್ಮ ಕರ್ಮದ ಕಳಪೆ ಕೆಲಸದಿಂದ ನಿರ್ಮಾಣ ಹಂತದಲ್ಲಿರುವಾಗಲೇ ಸೇತುವೆ ಕುಸಿತವಾಗಿದೆ. ನಿಮ್ಮ ವಿರುದ್ಧ ದೂರು ದಾಖಲಿಸುತ್ತೇವೆ. ಜೊತೆಗೆ, ಗುಣಮಟ್ಟ ಪರಿಶೀಲನೆ ಮಾಡುವುದಕ್ಕೆ ದೂರು ನೀಡುತ್ತೇವೆ. ಕಳಪೆ ಕಾಮಗಾರಿ ನಡೆದಿದ್ದು, ಸಾಬೀತಾದಲ್ಲಿ ನಿಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಲು ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟನೆ ಮಾಡುತ್ತೇನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ್‌ಗೆ ಸೇರುವೆ ಎಂದು ಅರ್ಜಿ ಕೊಟ್ಟಿಲ್ಲ: ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌

ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ನಿರ್ಮಾಣ ಹಂತದ ಸೇತುವೆ ಕುಸಿತದಿಂದ ಆತಂಕಕ್ಕೆ ಒಳಗಾಗಿರು ಗುತ್ತಿಗೆದಾರರನಿಗೆ ಇಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುದನ್ನು ಕೇಳಿ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಗ್ರಾಮಸ್ಥರ ತರಾಟೆಯಿಂದ ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ, ಬೃಹತ್ ಪ್ರಮಾಣದ ಸ್ಲ್ಯಾಬ್‌ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಕೆಳಗೆ ಬಿದ್ದ ಸ್ಲ್ಯಾಬ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ.

Latest Videos
Follow Us:
Download App:
  • android
  • ios