ಕಾಂಗ್ರೆಸ್‌ಗೆ ಸೇರುವೆ ಎಂದು ಅರ್ಜಿ ಕೊಟ್ಟಿಲ್ಲ: ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌

ನಾನು ಯಾರ ಪರ ಕೆಲಸ ಮಾಡುತ್ತೇನೆ ಎಂದು ನಿರ್ಣಯಿಸಿ ಹೇಳುತ್ತೇನೆ. ಯಾರ ಸಮಾಧಾನ, ಅಸಮಾಧಾನವನ್ನು ಹೈಕಮಾಂಡ್ ಕೇಳುವುದಿಲ್ಲ. ಅವರ ಸಮಾಧಾನ ಹೇಗಿದೆಯೋ ಹಾಗೆ ನಿರ್ಣಯ ಮಾಡುತ್ತಾರೆ. ನನಗೆ ಸಮಾಧಾನ ಆಗಿಲ್ಲ ಎಂದರೆ ಅವರು ಅಭ್ಯರ್ಥಿ ಬದಲಿಸುತ್ತಾರಾ?. ಅವರ ಸಮಾಧಾನಕ್ಕೆ ಮಾಡಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ 

BJP MLA Shivaram Hebbar React to Join Congress grg

ಶಿರಸಿ(ಮಾ.27):  ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತೇನೆ ಎಂದು ಅವರಿಗೆ ನಾನು ಅರ್ಜಿ ನೀಡಲು ಹೋಗಿಲ್ಲ. ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತೇನೋ, ಇಲ್ಲವೋ ಎಂಬುದನ್ನು ನಾನೇ ಹೇಳುತ್ತೇನೆ. ಆದರೆ, ನನ್ನ ಬೆಂಬಲಿಗರು ಕಾಂಗ್ರೆಸ್ ಸೇರುವ ನಿರ್ಣಯ ಶೀಘ್ರದಲ್ಲಿ ಆಗಲಿದೆ ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ತಿಳಿಸಿದರು.

ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಸಂದರ್ಭ ಬಂದಾಗ ಕಾಯ್ದುಕೊಳ್ಳಲೇಬೇಕು. ಯಾವ ರಾಜಕೀಯ ಪಕ್ಷಗಳನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲೂ ವಲಸೆ ಇದೆ. ಗುಜರಾತ್, ಹಿಮಾಚಲಪ್ರದೇಶದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ನಾನು ಒಂದು ಮತ ಹಾಕದಿದ್ದಕ್ಕೆ ಮಾತನಾಡುತ್ತಾರೆ, ಅವರು 6 ಮತ ಹಾಕಿ ಸಸ್ಪೆಂಡ್ ಆಗಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ನೀತಿ ಎಂದರೆ ಕರ್ನಾಟಕಕ್ಕೂ ಒಂದೇ ಇರಬೇಕು. ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶಕ್ಕೂ ಒಂದೇ ಇರಬೇಕು ಎಂದರು.

ನಾವು ಬಿಜೆಪಿಗೆ ಬಂದಾಗ ಈಶ್ವರಪ್ಪ ಎಷ್ಟು ಕೋಟಿ ಕೊಟ್ಟಿದ್ದರು: ಮಾಜಿ ಸಚಿವ ಶಿವರಾಮ ಹೆಬ್ಬಾರ್‌

ಬಿಜೆಪಿ ಅಭ್ಯರ್ಥಿ ಕಾಗೇರಿ ಕುರಿತು ಪ್ರತಿಕ್ರಿಯಿಸಿ, ನಾನು ಯಾರ ಪರ ಕೆಲಸ ಮಾಡುತ್ತೇನೆ ಎಂದು ನಿರ್ಣಯಿಸಿ ಹೇಳುತ್ತೇನೆ. ಯಾರ ಸಮಾಧಾನ, ಅಸಮಾಧಾನವನ್ನು ಹೈಕಮಾಂಡ್ ಕೇಳುವುದಿಲ್ಲ. ಅವರ ಸಮಾಧಾನ ಹೇಗಿದೆಯೋ ಹಾಗೆ ನಿರ್ಣಯ ಮಾಡುತ್ತಾರೆ. ನನಗೆ ಸಮಾಧಾನ ಆಗಿಲ್ಲ ಎಂದರೆ ಅವರು ಅಭ್ಯರ್ಥಿ ಬದಲಿಸುತ್ತಾರಾ?. ಅವರ ಸಮಾಧಾನಕ್ಕೆ ಮಾಡಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios