ಯಲ್ಲಾಪುರ [ಆ.12] : ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭೀಕರ ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. 

ಭಾರೀ ಮಳೆಯಿಂದ ಹಲವು ಅಣೆಕಟ್ಟೆಗಳು ಬಹುತೇಕ ತುಂಬಿದ್ದು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಚಿಗಳ್ಳಿ ಅಣೆಗಟ್ಟು ಒಡೆದು ಅನಾಹುತವಾಗಿದೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೇಡ್ತಿ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟು 20 ಅಡಿ ಎತ್ತರವಿದ್ದು 910 ಮೀಟರ್ ವಿಸ್ತಾರವಾಗಿರುವ ಡ್ಯಾಂ ಒಡೆದು ಸಾವಿರಾರು ಎಕರೆ ಭೂಮಿ ಜಲಾವೃತವಾಗಿದೆ. 

ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ತಂಡ ದೌಡಾಯಿಸಿದ್ದು, ತಗ್ಗು ಪ್ರದೇಶಗಳಲ್ಲಿ ನೂರಾರು ಜನರನ್ನು ತುರ್ತಾಗಿ ಸ್ಥಳಾಂತರ ಮಾಡಲಾಗುತ್ತಿದೆ. 

ಕೃಷಿ ಭೂಮಿಗೂ ನೀರು ನುಗ್ಗುತ್ತಿದ್ದು, ಶಿರಸಿ ಹಾಗೂ ಹುಬ್ಬಳ್ಳಿ ರಸ್ತೆಯೂ ಮುಳುಗುವ ಭೀತಿ ಎದುರಾಗಿದೆ.