ಮಂಡ್ಯ[ಡಿ.02]: ಮಂಡ್ಯದಲ್ಲಿ ಬಸ್‌ ನಾಲೆಗೆ ಉರುಳಿ 30 ಮಂದಿ ಮೃತಪಟ್ಟದುರಂತಕ್ಕೆ ಬಸ್‌ ಚಾಲನೆ ವೇಳೆ ಚಾಲಕ ಮೊಬೈಲ್‌ ಬಳಸಿದ್ದೂ ಕಾರಣವಾಗಿರಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಾಥಮಿಕ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಮುಳುಗಿದ ಬಸ್ ನಿಂದ ಪಾರಾದವನ ಸಾಹಸಗಾ

ನ.24ರಂದು ಮಂಡ್ಯದ ಕನಗನಮರಡಿಯಲ್ಲಿ ಖಾಸಗಿ ಬಸ್ಸೊಂದು ವಿ.ಸಿ.ನಾಲೆಗೆ ಬಿದ್ದು 30 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.

ಅಪಘಾತ ನಡೆದ ರಸ್ತೆ ಕೇವಲ 18 ಅಡಿಗಳಷ್ಟುಅಗಲವಾಗಿತ್ತು. ಜತೆಗೆ, ರಸ್ತೆಯಲ್ಲಿ ಗುಂಡಿಗಳೂ ಬಿದ್ದಿದ್ದವು ಎಂದು ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ನಾಲೆ ಮತ್ತು ರಸ್ತೆ ನಡುವೆ ಯಾವುದೇ ತಡೆಗೋಡೆಯೂ ಇರಲಿಲ್ಲ, ಅಲ್ಲದೆ, ರಸ್ತೆಯಿಂದ ನಾಲೆವರೆಗೆ ಇಳಿಜಾರು ಇತ್ತು. ಈ ವೇಳೆ ಚಾಲಕನ ಅಜಾಗರೂಕತೆ ಹಾಗೂ ಮೊಬೈಲ್‌ ಬಳಸಿದ್ದೂ ಕೂಡ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಮಂಡ್ಯ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಾವಿನ ಶನಿವಾರ: ನಾಲೆ ಬಳಿ ಹೆಣಗಳ ರಾಶಿ!

ಅಪಘಾತಕ್ಕೆ ಸಂಬಂಧಿಸಿದ ಅಂತಿಮ ವರದಿಯಲ್ಲಿ ಅಧಿಕಾರಿಗಳು ಇನ್ನಷ್ಟೇ ಸರ್ಕಾರಕ್ಕೆ ಸಲ್ಲಿಸಬೇಕಿದೆ.