ತುಮಕೂರು, [ಜ.17]: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಾಣುತ್ತಿದೆ. ಅವರೇ ಉಸಿರಾಡುತ್ತಿದ್ದು, ವಿಶೇಷ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. 

ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡಲು ಅವರ ಅಚ್ಚುಮೆಚ್ಚಿನ ಶಿಷ್ಯ ಡಾ. ನಾಗಣ್ಣ ಅಮೆರಿಕಾದಿಂದ ರಜೆ ಹಾಕಿ ಬಂದಿದ್ದಾರೆ. 

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಮನದಲ್ಲಿ ಏನಿದೆ..?

ಈಗ ಶ್ರೀಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಸ್ವಂತವಾಗಿ ಉಸಿರಾಟ ನಡೆಸಿದ್ದಾರೆ. ಶ್ರೀಗಳು ಸ್ವಂತವಾಗಿ ಉಸಿರಾಟ ನಡೆಸ್ತಿರೋದು ಒಳ್ಳೆಯ ಸೂಚನೆ. 

ಸಿದ್ಧಗಂಗಾ ಶ್ರೀ ಆರೋಗ್ಯ ಯಥಾಸ್ಥಿತಿ: ಯಡಿಯೂರಪ್ಪ

ಚಿಕಿತ್ಸೆ , ನ್ಯೂಟ್ರಿಷಿಯನ್ ಮುಂದುವರೆಯುತ್ತಿದೆ. ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡಿದೆ ಎಂದು ಡಾ.ಪರಮೇಶ್ ತಿಳಿಸಿದರು.