Bengaluru: ಬಿಬಿಎಂಪಿ ಮೇಲೆ ಉಪಲೋಕಾಯುಕ್ತ ದಿಢೀರ್ ದಾಳಿ; ಅಮ್ಮನ ಬದಲು ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಗ!
ಉಪಲೋಕಾಯುಕ್ತ ಬಿ.ವೀರಪ್ಪ ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅಧಿಕಾರಿಗಳ ಗೈರುಹಾಜರಿ ಮತ್ತು ಕೆಲಸದಲ್ಲಿ ಲೋಪಗಳು ಬೆಳಕಿಗೆ ಬಂದಿವೆ. ಅಮ್ಮನ ಬದಲು ಮಗ ಕೆಲಸ ಮಾಡುತ್ತಿದ್ದ ವಿಚಾರವೂ ಬಹಿರಂಗವಾಗಿದೆ.
ಬೆಂಗಳೂರು (ಜ.10): ಉಪಲೋಕಾಯುಕ್ತ ಬಿ.ವೀರಪ್ಪ ಇಂದು ರಾಜಧಾನಿಯ ಲಾಲ್‌ಭಾಗ್ ರಸ್ತೆಯಲ್ಲಿರುವ ಬಿಬಿಎಂಪಿ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಿಬಿಎಂಪಿ ಅಧಿಕಾರಿಗಳ ಕೆಲಸದ ವೈಖರಿ ಕಂಡು ಬೆಚ್ಚಿಬಿದ್ದಿದ್ದಾರೆ. ದಾಳಿ ಮಾಡುವ ವೇಳೆಯಲ್ಲಿಯೇ ಬಿಬಿಎಂಪಿ ಕಚೇರಿಯಲ್ಲಿ ಅಮ್ಮನ ಬದಲು ಆಕೆಯ ಪುತ್ರ ಸರ್ಕಾರಿ ಕೆಲಸ ಮಾಡುತ್ತಿದ್ದ ವಿಚಾರ ಬಹಿರಂಗವಾಗಿದೆ. ಕಚೇರಿಗೆ ಉಪಲೋಕಾಯುಕ್ತರು ಭೇಟಿ ನೀಡಿದ ವೇಳೆ ಅಧಿಕಾರಿಗಳೇ ಇದ್ದಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ, ಅಧಿಕಾರಿಗಳೆಲ್ಲ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಅಸಿಸ್ಟೆಂಟ್‌ಗಳು ತಿಳಿಸಿದ್ದಾರೆ. ಏಕಾದಶಿ ಮಾಡಲು ದೇವಸ್ಥಾನಕ್ಕೆ ಹೋದರೆ, ಇಲ್ಲಿ ಕೆಲಸ ಮಾಡೋರು ಯಾರು ಎಂದು ಆಕ್ರೋಸ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ಮೇಲೆ ಉಪಲೋಕಾಯುಕ್ತರು ಗರಂ ಆಗಿದ್ದು. ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ತೆರವು ಎಷ್ಟಾಗಿದೆ? ಲೆಕ್ಕ ಕೊಡಿ ಎಂದಿದ್ದಾರೆ. ಜಯನಗರ ಸೌತ್ ಝೋನ್ ಬಿಬಿಎಂಪಿ ಕಚೇರಿಗೂ ಭೇಟಿ ನೀಡಿ ಪರಿಶೀಲನೆ ಮಾಡಿದ್ದು. ಡೆಮಾಲಿಷನ್ ಆರ್ಡರ್ ಲಿಸ್ಟ್ ಕೊಡಿ ಎಂದಿದ್ದಾರೆ. ಈ ವೇಳೆ ಅಧಿಕಾರಿ ಮಾಹಿತಿ ನೀಡಲು ತಡಬಡಾಯಿಸಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಏನು ಕೆಲಸ ಮಾಡ್ತಿದ್ದೀರಿ ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಅನುಷಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರ.ೆ ಅಧಿಕಾರಿಗಳ ಫೋನ್ ಹಾಗೂ ಕಾರ್‌ಅನ್ನೂ ಚೆಕ್ ಮಾಡಿದ್ದಾರೆ.
ಸೌತ್ ಎಂಡ್ ಸರ್ಕಲ್ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿದ ಉಪಲೋಕಾಯುಕ್ತರು, ಕಚೇರಿಯ ರಿಜಿಸ್ಟರ್ ಬುಕ್ ಅನ್ನೂ ಚೆಕ್ ಮಾಡಿದ್ದಾರೆ. ಈ ವೇಳೆ ನಿತ್ಯ ಹಾಜರಾತಿ ಹಾಕದೆ ಇರೋದು ಬೆಳಕಿಗೆ ಬಂದಿದೆ. ಹಾಜರಾತಿ ಬುಕ್ ಯಾಕೆ ಮೆಂಟೇನ್ ಮಾಡ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳೆಲ್ಲ ಎಲ್ಲಿಗೆ ಹೋಗಿದ್ದಾರೆ? ಐದು ಗಂಟೆ ಆದ್ರು ಸರ್ವೆ ಆಫಿಸರ್ ಕಚೇರಿಗೆ ಯಾಕೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ದಾಳಿಯ ಬಳಿಕ ಮಾತನಾಡಿದ ಉಪಲೋಕಾಯುಕ್ತ ಬಿ.ವೀರಪ್ಪ, 'ಬಿಬಿಎಂಪಿ ಬಗ್ಗೆ ಹಲವು ದೂರುಗಳು ಬಂದಿದ್ದವು. ಬೆಂಗಳೂರಿನಾದ್ಯಂತ 60 ಬಿಬಿಎಂಪಿ ಆಫೀಸ್ ಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಬಹುತೇಕ ಬಿಬಿಎಂಪಿ ಆಫೀಸ್ ಗಳಲ್ಲಿ ಅಧಿಕಾರಿಗಳೇ ಇಲ್ಲ. ಎಲ್ಲಿ ಹೋಗಿದ್ದಾರೆ ಅಂತಾ ಕೇಳಿದ್ರೆ, ಇವತ್ತು ವೈಕುಂಠ ಏಕಾದಶಿ ಪೂಜೆಗೆ ಹೋಗಿದ್ದಾರಂತೆ. ಅಟೆಂಡೆನ್ಸ್ ರಿಜಿಸ್ಟರ್ ಬುಕ್ ನಲ್ಲಿ ಎಂಟ್ರಿ ಇಲ್ಲ, ಯಾರು ಯಾವಾಗ ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು. ಏನೇ ಕೇಳಿದ್ರು, ಫುಲ್ ಸೈಲೆಂಟ್ ಆಗಿ ನಿಂತುಕೊಳ್ತಾರೆ ಎಂದಿದ್ದಾರೆ.
ಅಮ್ಮನ ಬದಲು ಮಗನ ಕೆಲಸ: ಬಿಬಿಎಂಪಿ ಕಚೇರಿಯಲ್ಲಿ ಶಾಕಿಂಗ್ ವಿಚಾರ ಅಂದರೆ ಅಮ್ಮನ ಬದಲಿಗೆ ಮಗ ಕೆಲಸಕ್ಕೆ ಬಂದಿದ್ದಾನೆ. ಕೇಸ್ ವರ್ಕರ್ ಕವಿತಾ ಬದಲಿಗೆ ಮಗ ನವೀನ್ ಕೆಲಸಕ್ಕೆ ಬಂದಿದ್ದಾನೆ. ನಿಮ್ ಅಮ್ಮ ಎಲ್ಲಿಗೆ ಹೋಗಿದ್ದಾರೆ ಅಂದರೆ, ಅಮ್ಮ ಅಡುಗೆ ಮಾಡುತ್ತಿದ್ದಾರೆ ಅಂತಾನೆ. ನೀನ್ ಯಾಕ್ ಬಂದೆ ಅಂದರೆ, ಜನಕ್ಕೆ ತೊಂದರೆ ಆಗುತ್ತೆ ಅಂತಾ ನಾನು ಬಂದಿದ್ದೀನಿ ಅಂತಾನೆ.
ಕಾಪಿ-ಪೇಸ್ಟ್ ಅವಾಂತರ; ಬೆಂಗಳೂರು ಬಿಟ್ಟು ಮಹಾರಾಷ್ಟ್ರದಲ್ಲಿ ಸುರಂಗ ಮಾರ್ಗ ಕೊರೆಯಲು ಹೊರಟ ಬಿಬಿಎಂಪಿ!
ಎಆರ್ ಓ ಸುಜಾತ ಅನ್ನೋರು ಮೂರುವರೆಗೆ ಆಫೀಸ್ ಗೆ ಬಂದಿದ್ದಾರೆ. ಬಿಬಿಎಂಪಿ ಆಫೀಸ್ ಗಳಿಗೆ ಅಪ್ಪ ಅಮ್ಮ ಯಾರು ಇಲ್ಲ. ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು. ಬಿಬಿಎಂಪಿ ಆಫೀಸ್ ನ ಸ್ವಂತ ಆಸ್ತಿ ಮಾಡ್ಕೊಂಡಿದ್ದಾರೆ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನ ಕರೆಸುತ್ತೇವೆ. ಅವ್ಯವಸ್ಥೆ ಬಗ್ಗೆ ಕಮೀಷನರ್ ಜೊತೆಯಲ್ಲೇ ಮಾತನಾಡುತ್ತೇವೆ. ಸುಮೊಟೋ ಕೇಸ್ ದಾಖಲು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ, ಕಿಂಗ್ ಕೊಹ್ಲಿಗೆ ಶಾಕ್ ನೀಡಿದ ಬಿಬಿಎಂಪಿ!