ನಿಯಮ ಉಲ್ಲಂಘನೆ, ಕಿಂಗ್‌ ಕೊಹ್ಲಿಗೆ ಶಾಕ್‌ ನೀಡಿದ ಬಿಬಿಎಂಪಿ!

ವಿರಾಟ್ ಕೊಹ್ಲಿ ಸಹ-ಮಾಲೀಕತ್ವದ ಒನ್ 8 ಬಾರ್ & ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್ ನೀಡಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಇರುವ ಈ ಪಬ್‌ಗೆ ಫೈರ್ ಸೇಫ್ಟಿ ಅಳವಡಿಸದ ಕಾರಣಕ್ಕೆ ನೋಟಿಸ್ ನೀಡಲಾಗಿದೆ. 7 ದಿನಗಳಲ್ಲಿ ಸಮಜಾಯಿಷಿ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.

Notice issued BY BBMP to bar and pub co owned by Virat Kohli san

ಬೆಂಗಳೂರು (ಡಿ.21):  ವಿರಾಟ್ ಕೊಹ್ಲಿ ಸಹಮಾಲೀಕತ್ವದ ಬಾರ್ & ಅಂಡ್ ಪಬ್‌ಗೆ ನೋಟಿಸ್‌ ನೀಡಲಾಗಿದೆ. ನಿಯಮ ಉಲ್ಲಂಘನೆ ಆರೋಪದಲ್ಲಿ ಬಿಬಿಎಂಪಿ ನೋಟಿಸ್ ನೀಡಿದೆ. ಬಾರ್‌ & ಪಬ್‌ಗೆ ಫೈರ್‌ ಸೇಫ್ಟಿ ಅಳವಡಿಸಿಲ್ಲ ಎಂದು ಬಿಬಿಎಂಪಿ ನೋಟಿಸ್‌ ಜಾರಿ ಮಾಡಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಇರೋ ಒನ್ 8 ಬಾರ್ ಅಂಡ್ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌ ಜಾರಿ ಮಾಡಿದೆ. ಅಗ್ನಿಶಾಮಕ ದಳದ ಎನ್‌ಓಸಿ ಪಡೆಯದೇ ಬಾರ್‌ & ಪಬ್‌ ನಿರ್ವಹಣೆ ಮಾಡಲಾಗುತ್ತಿದೆ ಎಂದು ದೂರು ದಾಖಲಾಗಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಬಿಬಿಎಂಪಿಗೆ ದೂರು ನಿಡಿದ್ದರು. ಇದನ್ನು ಆಧರಿಸಿ ಶಾಂತಿನಗರ ಪಾಲಿಕೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಈ ಹಿಂದೆಯೂ ನೋಟಿಸ್‌ ನೀಡಲಾಗುತ್ತಾದರೂ, ಅದಕ್ಕೆ ಉತ್ತರ ನೀಡದೇ ನಿರ್ಲಕ್ಷ್ಯ ತೋರಿದ್ದರು ಎಂದು ಆರೋಪಿಸಲಾಗಿದೆ.

ಇದೀಗ 7 ದಿನದೊಳಗೆ ಸಮಜಾಯಿಸಿ ನೀಡದೇ ಇದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ವೆಂಕಟೇಶ್‌, ' ಬೆಂಗಳೂರು ನಗರದಲ್ಲಿ ಇರುವಂತಹ ಹಲವಾರು ರೆಸ್ಟೋರೆಂಟ್ ಬಾರ್ ಹಾಗೂ ಪಬ್‌ಗಳು ಹೈ ರೈಸ್‌ ಬಿಲ್ಡಿಂಗ್‌ನಲ್ಲಿದೆ. ಅಗ್ನಿಶಾಮಕ ದಳದ ಯಾವುದೇ ಸುರಕ್ಷತೆ ಇಲ್ಲದೆ ಇವುಗಳು ಕಾರ್ಯ ನಿರ್ವಹಿಸುತ್ತಿವೆ. ಈ ಹಿಂದೆ ಬೆಂಗಳೂರಿನಲ್ಲಿ ಅಗ್ನಿ ಅವಘಡಗಳು ನಡೆದಾಗ ಹಲವಾರು ಜನ ಸಾವು ನೋವು ಅನುಭವಿಸಿದ್ದಾರೆ. ಕಾರ್ಲ್ಟನ್ ಭವನದಲ್ಲಿ ಶಾರ್ಟ್ ಸರ್ಕ್ಯೂಟ್ ಆದಾಗ ಅಗ್ನಿ ಅವಘಡದಿಂದ ಜೀವ ಉಳಿಸಿಕೊಳ್ಳಲು ಮಹಡಿಯಿಂದ ಜನ ಜಿಗಿದಿದ್ದರು. ಇಂಥ ಸಂದರ್ಭಗಳು ಬರಬಾರದು ಎಂದು ಬಿಬಿಎಂಪಿ ಹಾಗೂ ಅಗ್ನಿ ಶಾಮಕ ದಳ  ಆಡಿಟ್‌ ಮಾಡುತ್ತವೆ.

ಯೂಟ್ಯೂಬ್‌ ಕ್ಲಿಕ್‌ಗೆ ಮಿಸ್‌ಲೀಡ್‌ ಟೈಟಲ್‌, ಥಂಬ್‌ನೇಲ್‌ ಹಾಕ್ತೀರಾ? ಕಂಟೆಂಟ್‌ ಡಿಲೀಟ್‌ ಶುರು ಮಾಡಿದ ಕಂಪನಿ!

ಸುಮಾರು ಕಟ್ಟಡಗಳಲ್ಲಿ ಅಗ್ನಿ ಶಾಮಕ ಸುರಕ್ಷಿತೆ ಕ್ರಮಗಳು ಇಲ್ಲದೇ ಇರುವ ಕಾರಣ, ಅಂಥ ಕಟ್ಟಡಗಳಿಗೆ ಲೈಸೆನ್ಸ್ ಕೊಡಬಾರದು. ಅಲ್ಲಿ ಕಾರ್ಯನಿರ್ವಹಣೆ ಮಾಡದಂತೆ ರೂಲ್ಸ್‌ ತರಲಾಗಿದೆ. ಈ ರೂಲ್ಸ್ ಇದ್ದರು ಸಹಿತ ನಿರಂತರವಾಗಿ ನಿಯಮ ಉಲ್ಲಂಘನೆ ನಡೆಯುತ್ತಿದೆ. ಇದೇ ರೀತಿಯಾಗಿ ಎಂಜಿ ರಸ್ತೆಯ ರತ್ನ ಸಂಕೀರ್ಣದಲ್ಲಿರುವ ಇರುವ ಹೈ ರೈಸ್ ಬಿಲ್ಡಿಂಗ್‌ನಲ್ಲಿ ರೆಸ್ಟೋರೆಂಟ್‌ ಕೆಲಸ ಮಾಡುತ್ತಿದೆ. ಅಲ್ಲಿ ಯಾವುದೇ ಅಗ್ನಿ ಶಾಮಕ ದಳದ  ಸುರಕ್ಷಿತ ಕ್ರಮ ತರಗೆದುಕೊಂಡಿಲ್ಲ. ಈ ವಿಚಾರವಾಗಿ ನಾವು ಹೋರಾಟ ನಡೆಸಿದ್ದೆವು. ಬಿಬಿಎಂಪಿಗೆ ದೂರು ನೀಡುವ ಮೂಲಕ  ಗಮನಕ್ಕೆ ತಂದಿದ್ದೆವು. ಇದೀಗ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸುರಕ್ಷಿತೆ ಕಾಪಾಡುವಲ್ಲಿ ಬಿಬಿಎಂಪಿ ಹಾಗೂ ಅಗ್ನಿ ಶಾಮಕ ದಳ ಮುಂದಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

'ನನ್ನ ಗರ್ಲ್‌ಫ್ರೆಂಡ್‌ ನಿಂಗೆ, ನಿಂದು ನನಗೆ..' ಬೆಂಗ್ಳೂರಲ್ಲಿ ಹೊಸ ವರ್ಷಕ್ಕೆ ನಡೀತಾ ಇದೆ ಸ್ವ್ಯಾಪಿಂಗ್ ದಂಧೆ!

Latest Videos
Follow Us:
Download App:
  • android
  • ios