Davanagere: ಅಕಾಲಿಕ ಮಳೆ ಅವಾಂತರ: ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತವಾಗಿ ಸಂಚಾರಕ್ಕೆ ಪರದಾಟ
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಜನತೆ ಕಂಗಲಾಗಿದ್ದಾರೆ. ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದ ಬಳಿ ಹರಿದ್ರಾವತಿ ಹಳ್ಳ ತುಂಬಿ ಹರಿದಿದ್ದು ಗ್ರಾಮದ ಸಂಪರ್ಕ ರಸ್ತೆ ಕಡಿತವಾಗಿದೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಏ.22): ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಅಕಾಲಿಕ ಮಳೆ (Rain) ಸುರಿಯುತ್ತಿದೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಜನತೆ ಕಂಗಲಾಗಿದ್ದಾರೆ. ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದ ಬಳಿ ಹರಿದ್ರಾವತಿ ಹಳ್ಳ ತುಂಬಿ ಹರಿದಿದ್ದು ಗ್ರಾಮದ ಸಂಪರ್ಕ ರಸ್ತೆ ಕಡಿತವಾಗಿದೆ. ಹರಿದ್ರಾವತಿ ಹಳ್ಳ ಪಕ್ಕದಲ್ಲಿಯೇ ಹರನಹಳ್ಳಿ ಶ್ರೀ ರಾಮಲಿಂಗೇಶ್ವರ ಮಠ ವಿದ್ದು ಮಠದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ (Students) ಸಂಚಾರಕ್ಕೆ ಅಡಚಣೆಯಾಗಿದೆ.
ರಾಮಲಿಂಗೇಶ್ವರ ಮಠಕ್ಕೆ ಭೇಟಿ ನೀಡುವ ಭಕ್ತರಿಗೂ ತೊಂದರೆ: ಪ್ರತಿ ಮಳೆಗಾಲದಲ್ಲಿ ಹರಿದ್ರಾವತಿ ಹಳ್ಳ ತುಂಬಿ ಹರಿಯುತ್ತದೆ. ಇದರಿಂದ 100 ಮೀಟರ್ ತಗ್ಗು ಪ್ರದೇಶದಲ್ಲಿ ಎದೆಮಟ್ಟದ ನೀರು ನಿಲ್ಲುತ್ತದೆ. ಈ ನೀರಿನಲ್ಲಿ ಟ್ರಾಕ್ಟರ್ ಹೋಗುವುದೇ ಕಷ್ಟವಾಗಿರುವಾಗ ಬೈಕ್ ಸೇರಿದಂತೆ ಇತರೇ ವಾಹನಗಳು ಕಷ್ಟ. ವರ್ಷದ ಆರು ತಿಂಗಳು ಇದೇ ರೀತಿ ನೀರು ನಿಲ್ಲುವುದರಿಂದ ಬಸ್ ಸೇರಿದಂತೆ ಎಲ್ಲಾ ಮಾದರಿ ವಾಹನ ಓಡಾಟಕ್ಕೆ ಬ್ರೇಕ್ ಬೀಳುತ್ತದೆ. ಮಠಕ್ಕೆ ಬರುವ ಭಕ್ತರು, ಕೆಂಗಾಪುರ ಗ್ರಾಮಸ್ಥರು, ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಶ್ರೀಮಠದ ಸುತ್ತಮುತ್ತ ಜಮೀನು ಹೊಂದಿರುವ ರೈತರು, ವ್ಯಾಪಾರಿಗಳು ಹೀಗೆ ಹಲವು ವರ್ಗಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ.
Madrasa Row: ಮತ್ತೊಮ್ಮೆ ಮದರಸಗಳ ಬಗ್ಗೆ ಮಾತನಾಡಿದ ರೇಣುಕಾಚಾರ್ಯ
ಸೇತುವೆ ಬೇಡಿಕೆ ಇಟ್ಟು ಹಲವು ವರ್ಷಗಳೇ ಕಳೆದಿವೆ: ಹರನಹಳ್ಳಿ ಮಠವಿರುವ ಕೆಂಗಾಪುರ ಗ್ರಾಮ ಚನ್ನಗಿರಿ ತಾಲ್ಲೂಕಿಗೆ ಸೇರಿದ್ದು, ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಯಕೊಂಡ ಶಾಸಕ ಪ್ರೋ ಲಿಂಗಣ್ಣನಿಗೆ ಹಲವು ಬಾರಿ ಮನವಿ ಮಾಡಿ ಸೇತುವೆಗೆ ಅನುದಾನ ನೀಡಿ ಎಂದು ರಾಮಲಿಂಗೇಶ್ವರ ಶ್ರೀಗಳು ಮನವಿ ಮಾಡಿದ್ದಾರೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ. ಕೆಂಗಾಪುರ ಮುಳ್ಳುಗದ್ದುಗೆ ಉತ್ಸವಕ್ಕೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಪ್ರತಿವರ್ಷ ಭೇಟಿ ನೀಡುತ್ತಾರೆ. ಸ್ವಾಮೀಜಿಗೆ ಆಪ್ತರಿರುವ ಕಾರಣ ಸಂಪ್ರದಾಯವೆಂಬಂತೆ ಕಾರ್ಯಕ್ರಮಕ್ಕೆ ಬರುತ್ತಾರೆ. ಅವರಿಗೂ ಹಲವು ಬಾರಿ ಹೇಳಿದರೂ ಒಂದು ಸೇತುವೆ ನುದಾನ ಇದುವರೆಗೂ ಸಿಕ್ಕಿಲ್ಲ.
Davanagere: ಬೆಟ್ಟದ ಮೇಲಿಂದ ಕೆಳಕ್ಕೆ ಇಳಿಯುವ ರಥೋತ್ಸವ: ಇದು ಭಾರತ ದೇಶದಲ್ಲಿಯೇ ಅಪರೂಪ
ಪ್ರತಿ ವರ್ಷದ ಮಳೆಗಾಲದಲ್ಲಿ ಮಾತ್ರವಲ್ಲದೇ ಈ ಹಿಂದೆ ಸೂಳೆಕೆರೆ ಹಳ್ಳ ಕೊಡಿ ಬಿದ್ದು ಸುಮಾರು ಇಪ್ಪತ್ತು ದಿನಗಳ ಕಾಲ ನೀರು ಹರಿದು ರಸ್ತೆ ಬಂದ್ ಆಗಿತ್ತು. ಚನ್ನಗಿರಿ ತಹಶೀಲ್ದಾರರು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ಶಾಶ್ವತ ಮೇಲ್ ಸೇತುವೆ ನಿರ್ಮಾಣ ಮಾಡಿಸಿ ಎಂದು ಮಠದ ಶ್ರೀ ರಾಮಲಿಂಗೇಶ್ವರ ಸ್ವಾಮಿಜೀಗಳು, ಗ್ರಾಮಸ್ಥರು ಪಂಚಾಯಿತಿಯ ಸದಸ್ಯರುಗಳು ಮನವಿ ಮಾಡಿದರೂ ಇವರ ಕೂಗು ಅರಣ್ಯರೋಧನವಾಗಿದೆ. ಇನ್ನು ಮುಂದೆ ಆಳುವ ಸರ್ಕಾರ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.