ರಾಜ್ಯದಲ್ಲಿ ವರುಣನ ಅಬ್ಬರ : ಉಡುಪಿಯಲ್ಲಿ ಭಾರೀ ಮಳೆ

ರಾಜ್ಯದ ವಿವಿಧ ಪ್ರದೇಶಗಳಲ್ಲಿ  ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ವರುಣ ಅಬ್ಬರಿಸಲಾರಂಭಿಸಿದ್ದಾನೆ. ಇತ್ತ ಬೆಂಗಳೂರಿನಲ್ಲಿಯೂ ಪಂಚಮಸಾಲಿ ಸಮಾವೇಶಕ್ಕೆ ವರುಣ ಅಡ್ಡಿ ಮಾಡಿದ್ದಾನೆ

Untimely Rain Lashes Parts of Karnataka snr

ಉಡುಪಿ (ಫೆ.21): ಉಡುಪಿ ಜಿಲ್ಲೆಯ ಹಲವೆಡೆ ಏಕಾಏಕಿ ಭಾರೀ ಮಳೆ ಸುರಿದಿದೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಸೇರಿದಂತೆ ಮಧ್ಯಾಹ್ನ ವೇಳೆ ಹೆಚ್ಚು ಮಳೆಯಾಗಿದೆ. 

ಉಡುಪಿ ಜಿಲ್ಲೆಯ ಹೆಬ್ರಿ, ಉಡುಪಿ, ಅಮಾಸೆ ಬೈಲು ಪ್ರದೇಶದಲ್ಲಿ  ಮಳೆಯಾಗಿದೆ.  ಜಿಲ್ಲೆಯಾದ್ಯಂತ   ಮದುವೆ, ಸೇರಿ ಇತರೆ ಶುಭ ಕಾರ್ಯಗಳು ನಡೆಯುತ್ತಿದ್ದು, ತೊಡಕುಂಟಾಗಿದೆ. 

ಬೆಂಗಳೂರಲ್ಲೂ ಮಳೆ : ಇತ್ತ ಬೆಂಗಳೂರಿನಲ್ಲಿಯೂ ಕೂಡ ಮಳೆ ಆರಂಭವಾಗಿದೆ. ಹಲವು ದಿನಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿಗಳ ಸಮಾವೇಶ ನಡೆಯುತ್ತಿದ್ದು, ಸಮಾವೇಶಕ್ಕೆ ಮಳೆ ಅಡ್ಡಿ ಮಾಡಿದೆ. 

ಕೊಡಗಿನಲ್ಲಿ ಸುರಿದ ಆಲಿಕಲ್ಲು ಮಳೆ: ದಕ್ಷಿಣ ಕಾಶ್ಮೀರದಲ್ಲಿ ಸ್ನೋ ಫಾಲ್ ರೀತಿ

ಮಳೆ ನಡುವೆಯೂ ಜನರು ಸೇರಿದ್ದು, ಕುರ್ಚಿಗಳನ್ನು ತಲೆಯ ಮೇಲಿಟ್ಟುಕೊಂಡು ಕುಳಿತಿದ್ದರು. 

ಕಳೆದ ಎರಡು ದಿನಗಳಿಂದಲೂ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ. ರೈತರು ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುತ್ತಿದೆ. 

Latest Videos
Follow Us:
Download App:
  • android
  • ios