ಬೆಳಗಾವಿ(ಮಾ.31): ಮಾಜಿ ಸಚಿವರ ಸೀಡಿ ಬಹಿರಂಗ ಪ್ರಕರಣದಲ್ಲಿ ಯುವತಿ ಒಂದು ಹೇಳಿಕೆ ನೀಡುತ್ತಿದ್ದರೆ, ಪೋಷಕರು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಮತ್ತು ಗಣಿ, ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಮಂಗಳವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ಮತ್ತು ಸಹೋದರ ನಡುವಿನ ಮೊಬೈಲ್‌ ಸಂಭಾಷಣೆ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪಗೊಂಡಿದೆ. ಅಷ್ಟಕ್ಕೆ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಸೀಡಿ ಪ್ರಕರಣದ ಕುರಿತು ಎಸ್‌ಐಟಿ ಉತ್ತಮವಾಗಿ ತನಿಖೆ ನಡೆಸುತ್ತಿದೆ. ಅದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕಿದೆ ಎಂದು ತಿಳಿಸಿದ್ದಾರೆ. 

ಬೆಳಗಾವಿ ಬೈಎಲೆಕ್ಷನ್‌: 'ಜಾರಕಿಹೊಳಿ ಬ್ರದರ್ಸ್‌ ಪ್ರಚಾರಕ್ಕೆ ಬಂದೇ ಬರ್ತಾರೆ'

ಸೈಡ್‌ ಆ್ಯಕ್ಟರ್‌ ಯಾರು ಎನ್ನುವುದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. 60 ವರ್ಷಕ್ಕಿಂತ ಹೆಚ್ಚಿನ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಮುಂದೆ ಹೇಗೆ ನಿಲ್ಲುತ್ತಾರೆ ಎಂಬುದು ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.