Asianet Suvarna News Asianet Suvarna News

Dharwad; ರಸ್ತೆ ಅಪಘಾತವಾದ್ರೆ ಅಧಿಕಾರಿ‌ ವಿರುದ್ಧ ಕ್ರಿಮಿನಲ್ ಕೇಸ್, ಪ್ರಹ್ಲಾದ್ ಜೋಶಿ ವಾರ್ನಿಂಗ್

ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ, ರಸ್ತೆಯಲ್ಲಿ ಅಪಘಾತವಾದ್ರೆ ಅಧಿಕಾರಿಗಳ ವಿರುದ್ಧ‌ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇನೆಂದು ವಾರ್ನಿಂಗ್ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಒಂದು ತಿಂಗಳಲ್ಲಿ ಕಂಫ್ಲೀಟ್ ಮಾಡುವಂತೆ ಖಡಕ್ ಎಚ್ಚರಿಕೆ.

union minister pralhad joshi take class to national highway authority officer in dharwad gow
Author
First Published Oct 1, 2022, 5:16 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಅ.1): ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ ಪ್ರಗತಿ ಪರಿಶಿಲನಾ ಸಭೆಯು ಜಿಲ್ಲಾ ಪಂಚಾಯತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಧ್ಯಕ್ಷತೆಯಲ್ಲಿ ನಡೆಯಿತು.   ಸಭೆಯಲ್ಲಿ ಅಧಿಕಾರಿಗಳನ್ನು ಕೇಂದ್ರ ಸಚಿವ  ಜೋಶಿ ತರಾಟೆಗೆತ್ತಿಕೊಂಡರು. ನಾನು ಕೇಂದ್ರ ಸರಕಾರದಿಂದ ಹಣವನ್ನ ಬಿಡುಗಡೆ ಮಾಡಿಕ್ಕೊಂಡು ಬರುತ್ತೇನೆ ಅಧಿಕಾರಿಗಳು ಯಾಕೆ ಕೆಲಸವನ್ನ ಮಾಡುತ್ತಿಲ್ಲ. ನಾನು ಹೇಳಿದ ಹಾಗೆ ಕೆಲಸವನ್ನ ಅಧಿಕಾರಿಗಳು ಮಾಡಬೇಕು ಎಂದು ಜೋಶಿ ಕಿಡಿಕಾರಿದರು. 2014 ರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಹಿತಿಯನ್ನ ಕೇಳಿದ್ರೆ ಅಧಿಕಾರಿಗಳು ಉತ್ತರವನ್ನ‌ ಕೊಡದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣ ವಾಗಿದೆ. ಧಾರವಾಡದ ಜ್ಯೂಬಲಿ ಸರ್ಕಲ್ ನಿಂದ ನರೇಂದ್ರ ಬೈಪಾಸ್ ಅವರೆಗೂ ಐದು ಕೀಮಿ‌ ಸಿಸಿ ರಸ್ತೆಯನ್ನ ನಿರ್ಮಾಣ ಮಾಡಲು  2014 ರಲ್ಲಿ 86 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿತ್ತು.  ಆದರೆ 7 ವರ್ಷ ಕಳೆದರೂ ಇನ್ನು ರಸ್ತೆ ಮುಕ್ತಾಯ ವಾಗದ ಕಾರಣಕ್ಕೆ  ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. 

ಇನ್ನು ಜ್ಯೂಬಲಿ‌ ಸರ್ಕಲ್ ನಿಂದ ನರೇಂದ್ರ ಬೈಪಾಸ್ ವರೆಗೂ ಅಪಘಾತಗಳು ಆದ್ರೆ ಸಂಭಂದಪಟ್ಟ ಅಧಿಕಾರಿಗಳ ಮೇಲೆ ನಾನೇ  ಕ್ರಿಮಿನಲ್ ಕೇಸು ದಾಖಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಡಕ್ ಎಚ್ಚರಿಕೆ‌ ನೀಡಿದರು. ಇನ್ನು ಒಂದು ತಿಂಗಳಲ್ಲಿ ಉಳಿದಿರುವ ಕಾಮಗಾರಿಯನ್ನ ಮುಗಿಸಿ ಕೊಡಬೇಕು ಇಲ್ಲದಿದ್ದರೆ ಕಠಿಣ ಕ್ರಮವನ್ನ ನಾನೆ ತೆಗೆದುಕ್ಕೊಳ್ಳುತ್ತೆನೆ ಎಂದು ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಯಾದ ಹುರಕಡ್ಲಿಗೆ ಖಡಕ್ ವಾರ್ನಿಂಗ್  ನೀಡಿದರು.

ಇನ್ನು ಕೇವಲ ಧಾರವಾಡ ಜ್ಯೂಬಲಿ ಸರ್ಕಲ್ ನಿಂದ ಅಷ್ಟೆ ಅಲ್ಲ, ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ರಸ್ತೆ ಗಳನ್ನ ಆದಷ್ಟು ಬೇಗ ಮುಗಿಸಿ ಕೊಡಬೇಕು ಇಲ್ಲದಿದ್ರೆ. ನಾನು ನಿಮ್ಮ‌ ಮೆಲೆ ಕ್ರಮವನ್ನ ತೆಗೆದುಕ್ಕೊಳ್ಳಬೇಕಾಗುತ್ತೆ ಎಂದು ಸಭೆಯಲ್ಲಿ ಬಾಗಿಯಾಗಿದ್ದ ಎಲ್ಲ ಅಧಿಕಾರಿಗಳಿಗಳಿಗೆ ಎಚ್ಚರಿಕೆ ಕೊಟ್ಟರು.

ಧಾರವಾಡ: ಶೀಘ್ರದಲ್ಲೇ  IIT Campus ಉದ್ಘಾಟನೆ - ಪ್ರಲ್ಹಾದ್ ಜೋಶಿ

ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ  ಕೆಲ ವಿಭಾಗದ ಅಧಿಕಾರಗಳು ಕೆಲಸ ಮಾಡಲು ಆಸಕ್ತಿ ತೋರಿಸದೆ ಇರುವುದರಿಂದ ಕೆಲಸಗಳು ಆಗ್ತಾ ಇಲ್ಲ.  ಯಾವ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲ ಅಂತವರನ್ನ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಕೂಡ ಇದೇ ವೇಳೆ ಕೊಟ್ಟಿದ್ದಾರೆ.

NHAI Guinness Record 108 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಾಣ,ಗಿನ್ನಿಸ್ ದಾಖಲೆ ಬರೆದ ಭಾರತ!

ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೇಗಡೆ, ಜಿಲ್ಲಾ ಪಂಚಾಯತ ಸಿಇಓ ಸುರೇ ಶ ಇಟ್ನಾಳ್, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಎಸ್ಪಿ ಲೋಕೇಶ ಜಗಲಾಸರ್, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಕಮಿಷನರ್ ಗೋಪಾಲಕೃಷ್ಟ ಅವರು ಸಭೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios