Hijab Verdict: ಮಕ್ಕಳಿಗೆ ವಿದ್ಯೆಗಿಂತ ಮುಖ್ಯ ಯಾವುದೂ ಇಲ್ಲ: ಕೇಂದ್ರ ಸಚಿವ ಜೋಶಿ

*   ಹೈಕೋರ್ಟ್‌ ಆದೇಶ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಬೇಕು
*   ಈ ಆದೇಶ ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಬೇಕು
*   ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಎಲ್ಲರೂ ಸಹಕಾರ ನೀಡಬೇಕು

Union Minister Pralhad Joshi React on Hijab Row in Karnataka grg

ಹುಬ್ಬಳ್ಳಿ(ಮಾ.16):  ಹೈಕೋರ್ಟ್‌(High Court) ತೀರ್ಪನ್ನು ಸ್ವಾಗತಿಸುತ್ತೇನೆ, ಎಲ್ಲರೂ ತೀರ್ಪು ಪಾಲಿಸಬೇಕು. ಮಕ್ಕಳಿಗೆ ವಿದ್ಯೆಗಿಂತ ಮುಖ್ಯ ಯಾವುದೂ ಇಲ್ಲ. ಹೈಕೋರ್ಟ್‌ ತ್ರಿಸದಸ್ಯ ಪೀಠದ ಆದೇಶ ನಾವೆಲ್ಲರೂ ಪಾಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಹೇಳಿದ್ದಾರೆ.

ಹಿಜಾಬ್‌(Hijab) ಕುರಿತ ತೀರ್ಪಿನ ಬಳಿಕ ಪ್ರಕಟಣೆ ನೀಡಿರುವ ಅವರು, ಹೈಕೋರ್ಟ್‌ ಆದೇಶ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಬೇಕು, ಸಮಾಜದಲ್ಲಿ ಶಾಂತಿ ಕಾಪಾಡಬೇಕು. ಎಲ್ಲ ಪಾಲಕರು, ವಿದ್ಯಾರ್ಥಿಗಳು(Students), ಸಮುದಾಯದ ಮುಖಂಡರಿಗೆ ಕಳಕಳಿಯ ವಿನಂತಿ ಮಾಡುತ್ತೇನೆ. ಈ ಆದೇಶ ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಎಲ್ಲರೂ ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಹೈಕೋರ್ಟ್‌ ಆದೇಶ ಪಾಲನೆ ಮಾಡಿ, ನಿಮಗೆ ಶಿಕ್ಷಣ(Education) ಬಹಳ ಮುಖ್ಯವಾಗಿದೆ. ತರಗತಿ, ಪರೀಕ್ಷೆಗಳಿಂದ ಹೊರಗೆ ಉಳಿಯುವ ನಿರ್ಧಾರ ಬಿಟ್ಟು ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗಿಯಾಗಬೇಕು ಎಂದು ಜೋಶಿ ಮನವಿ ಮಾಡಿದ್ದಾರೆ. ಹೈಕೋರ್ಟ್‌ ತೀರ್ಪು ಎಲ್ಲರೂ ಪಾಲಿಸಬೇಕು. ಒಂದು ವೇಳೆ ಎಲ್ಲಿಯಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಯುಪಿಯಲ್ಲಿ ಒಳ್ಳೆ ಕೆಲಸ ಮಾಡಿದ್ರೆ ಕಮ್ಮಿ ಸೀಟ್‌ ಯಾಕೆ ಬಂದ್ವು?: ಮೋದಿಗೆ ಸಲಿಂ ಅಹ್ಮದ್ ಪ್ರಶ್ನೆ

ದಿ ಕಾಶ್ಮೀರಿ ಫೈಲ್ಸ್‌ ಉಚಿತ ವೀಕ್ಷಣೆಗೆ ಸಚಿವ ಜೋಶಿ ವ್ಯವಸ್ಥೆ

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ನೈಜ ಘಟನೆಗಳನ್ನು ಆಧರಿಸಿರುವ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್‌ ಫೈಲ್ಸ್‌’(The Kashmir Files) ಸಿನಿಮಾವನ್ನು ಮಾ. 16ರಿಂದ ಫೆ. 20ರ ವರೆಗೆ ದಿನಕ್ಕೆ ಎರಡು ಶೋಗಳಂತೆ ಇಲ್ಲಿನ ರೂಪಂ ಚಿತ್ರಮಂದಿರದಲ್ಲಿ ಹಾಗೂ ಧಾರವಾಡದ(Dharwad) ಶ್ರೀನಿವಾಸ ಚಿತ್ರಮಂದಿರದಲ್ಲಿ ಸಾರ್ವಜನಿಕರಿಗಾಗಿ ಉಚಿತ ವೀಕ್ಷಣೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಅವಕಾಶ ಕಲ್ಪಿಸಿದ್ದಾರೆ.

ಮಧ್ಯಾಹ್ನ 3 ಹಾಗೂ ಸಂಜೆ 6 ಗಂಟೆಗೆ ಎರಡು ಪ್ರದರ್ಶನಗಳಲ್ಲಿ ಸಿನಿಮಾ(Movie) ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇಂದಿನ ಪೀಳಿಗೆಯ ಜನ ಹಿಂದೆ ಜರುಗಿದ ಕಾಶ್ಮೀರಿ ಪಂಡಿತರ ಇತಿಹಾಸ ಮರೆಯಬಾರದು. ಇಂತಹ ಧಾರುಣ ಇತಿಹಾಸ ಭವಿಷ್ಯದಲ್ಲಿ ಮತ್ತೊಮ್ಮೆ ಬರಲೂಬಾರದು ಎಂಬ ದೃಷ್ಟಿಯಿಂದ ನಿರ್ಮಿಸಿದ ಅಸಾಧಾರಣ ಚಿತ್ರ. ಇದರ ಉದ್ದೇಶ ಮನರಂಜನೆಯಾಗಿರದೇ ಸತ್ಯವನ್ನು ಜನರಿಗೆ ನೇರವಾಗಿ ತಲುಪಿಸುವುದಾಗಿದೆ. ನಾನು ಈಗಾಗಲೇ ಚಿತ್ರ ವೀಕ್ಷಿಸಿದ್ದೇನೆ ಎಂದಿರುವ ಜೋಶಿ, ಈ ಚಲನಚಿತ್ರದ ಶೋಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ತೋರಿಸುವ ವ್ಯವಸ್ಥೆ ಮಾಡಿದ್ದೇನೆ ಎಂದರು.

Ukraine Crisis ಇತರ ದೇಶದಂತೆ ಭಾರತ ಮಾಡಿದ್ದರೆ ಅಲ್ಲೆ ಸುತ್ತು ಹೋಗ್ತಿದ್ವಿ, ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳ ಕಣ್ಣೀರು!

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜೇಂದ್ರ ಮಹಾಸ್ವಾಮಿಗಳು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಈ ಸಮಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು, ನಾಯಕರು, ಪಕ್ಷದ ಮುಖಂಡರು, ಪದಾಧಿಕಾರಿಗಳು ‘ದಿ ಕಾಶ್ಮೀರಿ ಫೈಲ್ಸ್‌’ ಪೋಸ್ಟರ್‌ಗೆ ಮಾಲಾರ್ಪಣೆ ಮಾಡಲಿದ್ದಾರೆ.

ಕಾಶ್ಮೀರದಲ್ಲಿ ಪಂಡಿತರ ಮಾರಣಹೋಮದ ಕುರಿತ ‘ದಿ ಕಾಶ್ಮೀರಿ ಫೈಲ್ಸ್‌’ ಕಾಶ್ಮೀರದಲ್ಲಿರುವ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ ಇದಾಗಿದೆ. ಕಾಶ್ಮೀರದಲ್ಲಿ ಉಗ್ರರು ನಡೆಸಿದ ಅಟ್ಟಹಾಸದ ಬಗ್ಗೆ ಸಿನಿಮಾದ ಮೂಲಕ ತೆರೆದಿಡಲಾಗಿರುವ ಈ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ. ಸಿನಿಮಾಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
 

Latest Videos
Follow Us:
Download App:
  • android
  • ios