ಬೆಳಗಾವಿಯ 5 ವರ್ಷದ ಮಗುವಿಗೆ ಪುಣೆಯಿಂದ ಗೂಡ್ಸ್‌ ರೈಲ್ವೆಯ ಮೂಲಕ ಮಾತ್ರೆ ತರಿಸಿಕೊಟ್ಟ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ| ವೈದ್ಯಕೀಯ ಚಿಕಿತ್ಸೆ ಮೇಲಿರುವ ಮಗುವಿಗೆ ಪುಣೆಯಿಂದ ಮಾತ್ರೆ ತರಿಸಿಕೊಳ್ಳಬೇಕಿತ್ತು| ಲಾಕ್‌ಡೌನ್‌ ಪರಿಣಾಮ ಪಾಲಕರು ರೈಲ್ವೆ ಸಚಿವರ ಕಚೇರಿಗೆ ಪತ್ರ ಬರೆದು ಮಗುವಿಗೆ ಮಾತ್ರೆ ತರಿಸಿಕೊಡುವಂತೆ ಮನವಿ ಮಾಡಿದ್ದರು| ಇದಕ್ಕೆ ಸ್ಪಂದಿಸಿದ ಸುರೇಶ ಅಂಗಡಿ ಪುಣೆಯ ತಮ್ಮ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಮಾತ್ರೆ ತರಿಸಿದ್ದಾರೆ|

ಬೆಳಗಾವಿ(ಏ.22): ಪುಣೆಯ ವೈದ್ಯರಿಂದ ಚಿಕಿತ್ಸೆಗೊಳಪಟ್ಟಿರುವ ಬೆಳಗಾವಿಯ 5 ವರ್ಷದ ಮಗುವಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಪುಣೆಯಿಂದ ಗೂಡ್ಸ್‌ ರೈಲ್ವೆಯ ಮೂಲಕ ಮಾತ್ರೆ ತರಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವೈದ್ಯಕೀಯ ಚಿಕಿತ್ಸೆ ಮೇಲಿರುವ ಮಗುವಿಗೆ ಪುಣೆಯಿಂದ ಮಾತ್ರೆ ತರಿಸಿಕೊಳ್ಳಬೇಕಿತ್ತು. ಆದರೆ, ಲಾಕ್‌ಡೌನ್‌ ಪರಿಣಾಮ ಪಾಲಕರು ರೈಲ್ವೆ ಸಚಿವರ ಕಚೇರಿಗೆ ಪತ್ರ ಬರೆದು ಮಗುವಿಗೆ ಮಾತ್ರೆ ತರಿಸಿಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸುರೇಶ ಅಂಗಡಿ ಪುಣೆಯ ತಮ್ಮ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಮಾತ್ರೆ ಖರೀದಿಸಿ ಬೆಳಗಾವಿಗೆ ಕಳಿಸುವಂತೆ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಜನತೆಗೆ ಮತ್ತಷ್ಟು ರಿಲೀಫ್‌!

Scroll to load tweet…

ಪುಣೆಯ ಅಧಿಕಾರಿಗಳು ಮಾತ್ರೆ ಖರೀದಿಸಿ, ಗೂಡ್ಸ್‌ ರೈಲಿನಲ್ಲಿ ಬೆಳಗಾವಿಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಮಾತ್ರೆಯನ್ನು ಸ್ಥಳೀಯ ಅಧಿಕಾರಿಗಳು ಮಗುವಿನ ಮನೆಗೆ ತಲುಪಿಸಿದ್ದಾರೆ. ಮಗುವಿನ ಪೋಷಕರು ಸಚಿವರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.

Scroll to load tweet…

ಈ ಸಂಬಂಧ ಟ್ವೀಟ್‌ ಮಾಡಿರುವ ಸಚಿವ ಅಂಗಡಿ ಅವರು, ಈ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.