ನವದೆಹಲಿ(ಏ.22): ಕೊರೋನಾ ತಡೆಗಾಗಿ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ ಅನ್ನು ಸಡಿಲಿಕೆ ಮಾಡಲು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದ ಕೇಂದ್ರ ಸರ್ಕಾರ ಇದೀಗ, ದೇಶದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತಷ್ಟುವಿನಾಯ್ತಿಗಳನ್ನು ನೀಡಿದೆ.

ಇದರನ್ವಯ ಲಾಕ್‌ಡೌನ್‌ ಹೊರತಾಗಿಯೂ ನಗರ ಪ್ರದೇಶಗಳಲ್ಲಿ ಹಾಲು ಸಂಸ್ಕರಣಾ ಘಟಕಗಳು, ಬ್ರೆಡ್‌ ಪ್ಯಾಕ್ಟರಿ, ಹಿಟ್ಟಿನ ಗಿರಣಿ ಹಾಗೂ ಮೊಬೈಲ್‌ ರೀಚಾಜ್‌ರ್‍ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಕೊರೋನಾ ತಡೆಗಾಗಿ ಕೇಂದ್ರ ಸರ್ಕಾರ ಸೂಚಿಸಿರುವ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ನಿಯಮಾವಳಿಗಳನ್ನು ಪಾಲನೆ ಮಾಡಲೇಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಲಾಕ್‌ಡೌನ್‌ ಎಫೆಕ್ಟ್‌: ಮಂಗಳಮುಖಿಯರ ಅನ್ನಕ್ಕೂ ಕಲ್ಲು ಹಾಕಿದ ಮಹಾಮಾರಿ ಕೊರೋನಾ..!

ಅಲ್ಲದೆ, ಅನಾರೋಗ್ಯ ಸೇರಿ ಇನ್ನಿತರ ಕಾರಣಗಳಿಗಾಗಿ ಹಾಸಿಗೆ ಹಿಡಿದ ಹಾಗೂ ಹಿರಿಯ ನಾಗರಿಕರ ಮನೆಗಳಲ್ಲೇ ಇದ್ದುಕೊಂಡು ಅವರ ಯೋಗಕ್ಷೇಮಗಳನ್ನು ನೋಡಿಕೊಳ್ಳುವ ಕೆಲಸಗಾರರಿಗೂ ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿದೆ.