ಸಾರಿಗೆ ಸಚಿವರು ಬನ್ನಿ ಮಾತನಾಡೋಣ ಎಂದು ಹೇಳಿದರೂ ನೌಕರರು ಬರುತ್ತಿಲ್ಲ| ನಮಗೆ ಉಪಚುನಾವಣೆಯೂ ಮುಖ್ಯ, ಸಾರಿಗೆ ನೌಕರರೂ ಮುಖ್ಯ. ಹಾಗೆಯೇ ರಾಜ್ಯದ ಜನರ ಹಿತವೂ ಬಹುಮುಖ್ಯ| ಕಾಂಗ್ರೆಸ್‌ ನಾಯಕರ ಮಾತಿಗೆ ಸಾರಿಗೆ ನೌಕರರು ಮರಳಾಗುತ್ತಿದ್ದಾರೆ| ಡಿಕೆಶಿ ಹಾಕಿರುವ ಬೇಲಿಯಲ್ಲಿ ಎಷ್ಟು ದಿನ ಸಾರಿಗೆ ನೌಕರರು ಇರುತ್ತಾರೋ ನೋಡೋಣ ಎಂದು ಸವಾಲು ಹಾಕಿದ ಸದಾನಂದ ಗೌಡ| 

ಬೀದರ್‌(ಏ.12): ಸಾರಿಗೆ ನೌಕರರು ಎಷ್ಟು ದಿನ ಮುಷ್ಕರ ಮಾಡುತ್ತಾರೋ ನೋಡೋಣ. ನಾವೇನು ತಾಕತ್ತು ಇಲ್ಲದವರೆಂದು ತಿಳಿದುಕೊಂಡಿದ್ದಾರಾ ಎಂದು ಸಾರಿಗೆ ನೌಕರರ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ಬಸವಕಲ್ಯಾಣದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಸಾರಿಗೆ ಸಚಿವರು ಬನ್ನಿ ಮಾತನಾಡೋಣ ಎಂದು ಹೇಳಿದರೂ ನೌಕರರು ಬರುತ್ತಿಲ್ಲ. ನಮಗೆ ಉಪಚುನಾವಣೆಯೂ ಮುಖ್ಯ, ಸಾರಿಗೆ ನೌಕರರೂ ಮುಖ್ಯ. ಹಾಗೆಯೇ ರಾಜ್ಯದ ಜನರ ಹಿತವೂ ಬಹುಮುಖ್ಯ ಎಂದು ತಿಳಿಸಿದ್ದಾರೆ.

ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗೆ ಮಾರ್ಚ್ ಸಂಬಳ ಇಲ್ಲ!

ಕಾಂಗ್ರೆಸ್‌ ನಾಯಕರ ಮಾತಿಗೆ ಸಾರಿಗೆ ನೌಕರರು ಮರಳಾಗುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಹಾಕಿರುವ ಬೇಲಿಯಲ್ಲಿ ಎಷ್ಟುದಿನ ಸಾರಿಗೆ ನೌಕರರು ಇರುತ್ತಾರೋ ನೋಡೋಣ ಎಂದು ಸವಾಲು ಹಾಕಿದ್ದಾರೆ.