ಹೊಸ ಇತಿಹಾಸ ಬರೆದ ಪ್ರಧಾನಿ ಮೋದಿ: ಕೇಂದ್ರ ಸಚಿವ ಖೂಬಾ

*  ಕರ್ನಾಟಕದಲ್ಲಿ 6 ಮಂದಿ ಕೇಂದ್ರ ಸಚಿವರು
*  ಜನರಿಂದ ತಿರಸ್ಕೃತಗೊಂಡ ಕಾಂಗ್ರೆಸ್‌ನಿಂದ ಸದನಕ್ಕೆ ಅಡ್ಡಿಗೆ ಟೀಕೆ
*  ಒಬ್ಬ ಸಾಧಾರಣ ಕಾರ್ಯಕರ್ತನಿಗೆ ಟಿಕೆಟ್‌ ಕೊಟ್ಟು ಸಂಸದರನ್ನಾಗಿ ಮಾಡಿದ ಬಿಜೆಪಿ
 

Union Minister Bhagwanth Khuba Talks Over PM Narendra Modi grg

ಕಲಬುರಗಿ(ಆ.19): 70 ವರ್ಷಗಳಲ್ಲಿ ತೆಗೆದುಕೊಳ್ಳದ ನಿರ್ಣಯಗಳನ್ನು ಕಳೆದ 7 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ದಲಿತರಿಗೆ, ಮಹಿಳೆಯರಿಗೆ, ಆದಿವಾಸಿಗಳಿಗೆ, ಹಿಂದುಳಿದ ವರ್ಗಗಳಿಗೆ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಂದ ತಿರಸ್ಕೃತಗೊಂಡ ಕಾಂಗ್ರೆಸ್‌ ಸದನಕ್ಕೆ ಅಡ್ಡಿಪಡಿಸೋಕೆ ಮುಂದಾಗಿದೆ. ಕಾಂಗ್ರೆಸ್‌ನವರು ವೋಟ್‌ ಬ್ಯಾಂಕ್‌ ಕೈ ತಪ್ಪಿ ಹೋಗುವ ಭಯದಿಂದ ಪಾರ್ಲಿಮೆಂಚ್‌ಗೆ ಅಡ್ಡಿ ಪಡಿಸೋಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್‌ಗೆ 1,000 ಕೋಟಿ: ಕೇಂದ್ರ ಸಚಿವ ಖೂಬಾ

ರಾಜ್ಯಕ್ಕೆ ಈ ಹಿಂದೆ ಒಂದೂ ಸ್ಥಾನವನ್ನು ನೀಡಿರಲಿಲ್ಲ. ಸದ್ಯ ಇಡೀ ದೇಶದಲ್ಲಿ ಆರು ಜನ ಸಚಿವರು ಇರುವ ರಾಜ್ಯ ಕರ್ನಾಟಕ. ಒಬ್ಬ ಸಾಧಾರಣ ಕಾರ್ಯಕರ್ತನಿಗೆ ಟಿಕೆಟ್‌ ಕೊಟ್ಟು ಸಂಸದರನ್ನಾಗಿ ಮಾಡಿದೆ. ಇವಾಗ ಮತ್ತೆ ಸಚಿವರನ್ನಾಗಿ ಮಾಡಿದೆ ಎಂದರು.

ಇನ್ನು ಸದನದಲ್ಲಿ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯ ಮಾಡಿಸಿಕೊಡುವ ಪರಂಪರೆ ಇದೆ. ಆದರೆ, ಸದನದ ಮೊದಲ ದಿನ ಮೋದಿ ಅವರು ಪರಿಚಯ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಮಿತ್ರಪಕ್ಷದವರು ಅಡ್ಡಿಪಡಿಸಿ ಸದನದಲ್ಲಿ ಗೊಂದಲ ಉಂಟು ಮಾಡಿದರು. ಹೀಗಾಗಿ ಬಿಜೆಪಿಯ 39 ಹೊಸ ಸದಸ್ಯರು ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿ ನೇರವಾಗಿ ಜನರ ಮುಂದೆ ಬರಲು ನಿರ್ಧರಿಸಿದ್ದಾರೆಂದರು.
 

Latest Videos
Follow Us:
Download App:
  • android
  • ios