Asianet Suvarna News Asianet Suvarna News

ಶಾಲೆ ಮುಗಿಯುವ ಹೊತ್ತಿಗೆ ಯುನಿಫಾರ್ಮ್ ಅನುದಾನ ಬಂತು..!

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಇನ್ನೂ ಶಾಲಾಮಕ್ಕಳ ಸಿದ್ಧಸಮವಸ್ತ್ರದ ಅನುದಾನ ಸಿಕ್ಕಿಲ್ಲ ಎಂದು ನಿನ್ನೆ ಮೊನ್ನೆವರೆಗೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅನುದಾನ ಶಾಲೆಗೆ ತಲುಪಿದ್ದರೂ ಶಿಕ್ಷಕರಿಗೆ ಹೊಸ ತಲೆನೋವು ತಂದಿದೆ. ಪಾಠ ಮುಗಿಸಿ, ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸಬೇಕಾಗಿರುವ ಶಿಕ್ಷಕರಿಗೆ ಮಕ್ಕಳಿಗೆ ಸಿದ್ಧ ಸಮವಸ್ತ್ರಗಳನ್ನು ವಿತರಿಸುವುದೇ ದೊಡ್ಡ ಅಗ್ನಿಪರೀಕ್ಷೆಯಾಗಿದೆ.

 

Uniform fund received by schools at academic year end
Author
Bangalore, First Published Mar 4, 2020, 10:45 AM IST

ಮಂಗಳೂರು(ಮಾ.04): ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಇನ್ನೂ ಶಾಲಾಮಕ್ಕಳ ಸಿದ್ಧಸಮವಸ್ತ್ರದ ಅನುದಾನ ಸಿಕ್ಕಿಲ್ಲ ಎಂದು ನಿನ್ನೆ ಮೊನ್ನೆವರೆಗೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅನುದಾನ ಶಾಲೆಗೆ ತಲುಪಿದ್ದರೂ ಶಿಕ್ಷಕರಿಗೆ ಹೊಸ ತಲೆನೋವು ತಂದಿದೆ. ಪಾಠ ಮುಗಿಸಿ, ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸಬೇಕಾಗಿರುವ ಶಿಕ್ಷಕರಿಗೆ ಮಕ್ಕಳಿಗೆ ಸಿದ್ಧ ಸಮವಸ್ತ್ರಗಳನ್ನು ವಿತರಿಸುವುದೇ ದೊಡ್ಡ ಅಗ್ನಿಪರೀಕ್ಷೆಯಾಗಿದೆ.

ಮೊದಲ ಜೊತೆ ಸಮವಸ್ತ್ರವನ್ನು ಬಟ್ಟೆಯ ರೂಪದಲ್ಲಿ ನೀಡಿದ್ದ ಇಲಾಖೆ, ಶಾಲಾ ಶೈಕ್ಷಣಿಕ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳಿರುವಾಗ ಎರಡನೇ ಜೊತೆ ಸಮವಸ್ತ್ರ ವಿತರಣೆಗೆ ಮುಂದಾಗಿದೆ. ಈ ಬಾರಿ ಒಂದು ಸಮವಸ್ತ್ರಕ್ಕೆ 250 ರು. ನಿಗದಿಪಡಿಸಿರುವ ಇಲಾಖೆ ಶಾಲಾ ಎಸ್‌ಡಿಎಂಸಿ ಮೂಲಕ ಮಕ್ಕಳಿಗೆ ಸಿದ್ಧಸಮವಸ್ತ್ರದ ವಿತರಣೆಗೆ ಅನುದಾನ ಬಿಡುಗಡೆಗೊಳಿಸಿದೆ.

ಚಾಲಕನಿಗೆ ನಿದ್ದೆ ಮಂಪರು: ಪಿಕಪ್ ಸೇತುವೆಗೆ ಡಿಕ್ಕಿ

ಅಳತೆ ನೋಡುವುದೇ ತಲೆನೋವು: ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಆರ್ಥಿಕವಾಗಿ ಸಂಕಷ್ಟಒದಗಬಾರದು ಎಂಬ ಕಾರಣಕ್ಕೆ ದರ ನಿಗದಿ ಪಡಿಸಿ, ಸಿದ್ಧಸಮವಸ್ತ್ರ ವಿತರಣೆಗೆ ಕ್ರಮಕೈಗೊಂಡಿದೆ. ಅದರಂತೆ ಶಾಲಾ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಮುತುವರ್ಜಿ ವಹಿಸಿ ವಿತರಣೆಗೆ ಮುಂದಾಗಿದೆ. ಸಿದ್ಧ ಸಮವಸ್ತ್ರ ನೀಡಬೇಕಾದ ಹಿನ್ನೆಲೆಯಲ್ಲಿ ಪಾವತಿಸುವ ಮೊತ್ತಕ್ಕೆ ಅನುಗುಣವಾಗಿ ತರಗತಿವಾರು ಸಿದ್ಧ ಸಮವಸ್ತ್ರ ಗಳನ್ನು ಜವುಳಿ ವ್ಯಾಪಾರಿಗಳು ಶಾಲೆಗಳಿಗೆ ನೀಡುತ್ತಿದ್ದಾರೆ. ಆದರೆ ಶಾಲೆಯಲ್ಲಿ ಕೆಲವು ಮಕ್ಕಳ ಅಳತೆಗೆ ಸಿದ್ಧ ಸಮವಸ್ತ್ರ ಗಳು ಹೊಂದಿಕೊಳ್ಳದೆ ಇರುವುದೇ ಸಮಸ್ಯೆಗೆ ಕಾರಣವಾಗಿದೆ. ಶಾಲೆಯಲ್ಲಿ ಸಮವಸ್ತ್ರ ಗಳು ಸರಿಯಾಗುತ್ತದೆಯೇ ಎಂದು ಅಳತೆ ನೋಡುವುದು ಒಂದು ಕೆಲಸವಾದರೆ, ಅದು ಹೊಂದಿಕೆಯಾಗದೆ ಇದ್ದಾಗ ಮತ್ತೊಂದನ್ನು ಹಾಕಿ ಪರಿಶೀಲಿಸಬೇಕಾಗಿದೆ. ಎಸ್‌ಡಿಎಂಸಿಗಳು ವಿಶೇಷ ಮುತುವರ್ಜಿ ವಹಿಸಿ ದರ್ಜಿಗಳನ್ನು ನಿಗದಿಪಡಿಸಿ, ಮಕ್ಕಳ ಅಳತೆ ಪಡೆದೆ ಸಮವಸ್ತ್ರಗಳನ್ನು ಸಿದ್ಧಪಡಿಸಿ ವಿತರಿಸಬಹುದು. ಆದರೆ ಇಲಾಖೆ ನಿಗದಿ ಪಡಿಸಿರುವ ಮೊತ್ತ ಹಾಗೂ ಸಮಯದ ಕೊರೆತೆಯೂ ಕಾಡುತ್ತಿದೆ.

ಪಾದ ಮುಚ್ಚುವ ಶೂಗೆ 295, ಮೈ ಮುಚ್ಚುವ ಸಮವಸ್ತ್ರ ಕ್ಕೆ 250..!: ಸರ್ಕಾರ, ಇಲಾಖೆ ಯಾವ ಮಾನದಂಡದಲ್ಲಿ ಸಮವಸ್ತ್ರ ಹಾಗೂ ಶೂಗೆ ಹಣವನ್ನು ನಿಗದಿ ಪಡಿಸುತ್ತದೆಯೋ ಗೊತ್ತಿಲ್ಲ, ಆದರೆ ಪಾದ ಮುಚ್ಚುವ ಶೂಗೆ 1- 5ನೇ ತರಗತಿ ವರೆಗಿನ ಮಕ್ಕಳಿಗೆ 265 ರು. 6-8 ನೇ ತರಗತಿ ಮಕ್ಕಳಿಗೆ 295 ನಿಗದಿ ಪಡಿಸಿರುವ ಇಲಾಖೆ ಎರಡನೇ ಜತೆಯಾಗಿ ವಿತರಿಸುತ್ತಿರುವ ಸಿದ್ಧ ಸಮವಸ್ತ್ರಕ್ಕೆ ನಿಗದಿಪಡಿಸಿರುವುದು ಕೇವಲ 250 ರುಪಾಯಿ ಮಾತ್ರ. ಕನಿಷ್ಠ ಬೆಲೆಯಾಗಿರುವ ಹಿನ್ನೆಲೆಯಲ್ಲಿ ಕೆಲವೇ ಕೆಲವು ಜವುಳಿ ವ್ಯಾಪಾರಿಗಳು ಸಿದ್ಧ ಸಮವಸ್ತ್ರ ಗಳ ವಿತರಣೆಗೆ ಮುಂದಾಗಿದ್ದಾರೆ. ಹೀಗಾಗಿ ಈ ಕನಿಷ್ಠ ದರಕ್ಕೆ ಯಾರು ಒಪ್ಪುತ್ತಾರೋ ಅವರಿಗೇ ಜೈ ಎನ್ನಬೇಕಾದ ಸ್ಥಿತಿ ಎದುರಾಗಿದೆ.

ಶಾಲೆಯಲ್ಲಿ ಉಚಿತವಾಗಿ ಸಿಗುವ ಕಾರಣಕ್ಕೆ ಕೆಲ ಪೋಷಕರು ತಮ್ಮ ಮಕ್ಕಳ ಸಮವಸ್ತ್ರದ ಗುಣಮಟ್ಟದ ಬಗ್ಗೆ ಚಕಾರ ಎತ್ತುತ್ತಿಲ್ಲ. ಬಟ್ಟೆಕೊಟ್ಟರೆ, ಹೊಲಿಸುವುದಕ್ಕೆ ನಾವೇ ಹಣ ಕೊಡಬೇಕಲ್ಲ..ಎರಡು ಮೂರು ಬಾರಿ ಅಳತೆ ನೋಡಿದರೂ ಪರವಾಗಿಲ್ಲ ಎನ್ನುವ ಮನಸ್ಥಿತಿಯಲ್ಲೂ ಕೆಲವರಿದ್ದಾರೆ. ಇವೆಲ್ಲದರ ನಡುವೆ

ಕೊರೋನಾ ವೈರಸ್, ಕರಾವಳಿ ಏರ್‌ಪೋರ್ಟ್‌, ಬಂದರಿನಲ್ಲಿ ಸ್ರ್ಕೀನಿಂಗ್

ಎರಡನೇ ಜೊತೆ ಸಿದ್ಧಸಮವಸ್ತ್ರ ವಿತರಣೆಗೆ ಸಂಬಂಧಿಸಿ ಶಾಲೆಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಎಸ್‌ಡಿಎಂಸಿ ಹಾಗೂ ಶಿಕ್ಷಕರ ಮುತುವರ್ಜಿಯಲ್ಲಿ ಸಿದ್ಧಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್‌ ಎಂ.ಪಿ ಹೇಳಿದ್ದಾರೆ.

ಬಟ್ಟೆಹಾಗೂ ಹೊಲಿಗೆ ವೆಚ್ಚ ಸೇರಿ ಕೇವಲ 250 ರು. ನಿಗದಿ ಪಡಿಸಿರುವುದರಿಂದ, ಜವುಳಿ ವ್ಯಾಪಾರಿಗಳೂ ಉತ್ತಮ ಗುಣಮಟ್ಟದ ಸಮವಸ್ತ್ರ ಪೂರೈಸಲು ಅಸಾಧ್ಯ, ಮಕ್ಕಳ ಅಳತೆ ನೋಡುವುದೂ ತ್ರಾಸದ ಕೆಲಸ, ಈ ಬಗ್ಗೆ ಇಲಾಖೆಯವರು ಗಮನಹರಿಸಬೇಕು ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios