ಮಂಗಳೂರು(ಮಾ.03): ಕರ್ನಾಟಕದಲ್ಲಿ ಕೊಎರೋನಾ ವೈರಸ್ ಹೈ ಅಲರ್ಟ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಂದರು, ಹಾಗೂ ವಿಮಾನ ನಿಲ್ದಾಣಗಳಲ್ಲಲಿ ಎಚ್ಚರಿಕೆಯಿಂದ ಸ್ಕ್ರೀನಿಂಗ್ ಮಾಡಲಾಗುತ್ತಿದೆ.

"

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಸಿಕಂದರ್ ಪಾಷಾ ಈ ಸಂಬಂಧ ಪ್ರತಿಕ್ರಿಯಿಸಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಏರ್ ಪೋರ್ಟ್ ಮತ್ತು ಬಂದರು ಪ್ರದೇಶದಲ್ಲಿ ಸ್ಕ್ರೀನಿಂಗ್ ಮಾಡುತ್ತಿದ್ದೇವೆ. ಹೊರದೇಶದಿಂದ ಬರುವ ಪ್ರತೀ ಪ್ರಯಾಣಿಕರನ್ನ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದಿದ್ದಾರೆ.

ಮೈಸೂರು ಅರಮನೆಯಲ್ಲೂ ಕೊರೋನಾ ವೈರಸ್ ಭೀತಿ..!

ಕೊಂಚ ಅನಾರೋಗ್ಯ ಕಂಡು ಬಂದರೂ ಏರ್ ಪೋರ್ಟ್ ಮತ್ತು ಹಡಗಿನಿಂದ ಹೊರಬರಲು ಅವಕಾಶ ಕೊಡುತ್ತಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ 5 ಬೆಡ್ ಗಳನ್ನ ಕೊರೋನಾ ಪ್ರಕರಣಗಳಿಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದ್ದು, ನಿಗಾ ಇಡಲು ಹೇಳಿದ್ದೇವೆ. ಸಾರ್ವಜನಿಕರು ಆತಂಕ ಪಡದೇ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.