ಮಂಗಳೂರು(ಜ.10): ಮೀನುಗಾರಿಕಾ ಬೋಟ್‌ಗಳ ತಳದಲ್ಲಿ ತೊಂದರೆಯಾದಾಗ ಬೋಟ್‌ನ್ನು ದಡಕ್ಕೆ ತಂದು ಸರಿಪಡಿಸಿ ಮತ್ತೆ ನೀರಿಗೆ ಇಳಿಸುವುದು ಈವರೆಗಿನ ಕ್ರಮ. ಆದರೆ ಈಗ ಬೋಟ್‌ ನೀರಿನಲ್ಲಿದ್ದಾಗಲೇ ಸ್ಕೂಬಾ ಡೈವ್‌ ಮೂಲಕ ದುರಸ್ತಿ ಸಾಹ​ಸ​ಕ್ಕೆ ಕೈಹಾಕಿ ಮಂಗಳೂರಿನ ಬೋಟ್‌ ಮಾಲೀಕರೊಬ್ಬರು ಯಶಸ್ಸು ದಾಖಲಿಸಿದ್ದಾರೆ. ರಾಜ್ಯದಲ್ಲೇ ಮೊದಲ ಬಾರಿಗೆ ಕರಾವಳಿಯಲ್ಲಿ ಅಂಡರ್‌ ವಾಟರ್‌ ಗ್ಯಾರೇಜ್‌ ಆರಂಭಿಸಿದ್ದಾರೆ!

ಮಂಗಳೂರಿನ ಬೋಟ್‌ ಮಾಲೀಕ ರಾಜರತ್ನ ಸನಿಲ್‌ ಎಂಬವರೇ ಈ ಸಾಹಸಕ್ಕೆ ಕೈಹಾಕಿದವರು. ಈ ಅಂಡರ್‌ ವಾಟರ್‌ ಗ್ಯಾರೇಜ್‌ ಮಂಗಳೂರಿನ ಹಳೆ ಬಂದರಿನಲ್ಲಿ ಶನಿವಾರದಿಂದ ಅಧಿಕೃತವಾಗಿ ಕಾರ್ಯಾರಂಭಿಸಿದೆ. ಮೊದಲ ದಿನವೇ ತಾಂತ್ರಿಕವಾಗಿ ತೊಂದರೆಗೊಳಗಾಗಿದ್ದ ಬೋಟ್‌ವೊಂದನ್ನು 7 ಗಂಟೆ ಕಾಲ ಶ್ರಮಿಸಿ ದುರಸ್ತಿಪಡಿಸಿದ್ದಾರೆ. ರಾಜರತ್ನ ಸನಿಲ್‌ ಅವರೇ ಸ್ವತಃ ತಾಂತ್ರಿಕ ಪರಿಣತಿ ಹೊಂದಿದ್ದು, ಇವರ ಜೊತೆ ಇನ್ನಿಬ್ಬರು ನುರಿತ ತಂತ್ರಜ್ಞರ ತಂಡ ಇದೆ. ಕಳೆದ ವರ್ಷ ಈ ತಂಡ ಮುಂಬೈನಲ್ಲಿ ತರಬೇತಿಯನ್ನೂ ಪಡೆದಿದೆ.

ಉಳ್ಳಾಲದಲ್ಲಿ ಮೂರು ಬೀಫ್‌ ಅಂಗಡಿಗಳಿಗೆ ಬೆಂಕಿ

ಕಡಿಮ ವೆಚ್ಚ: ಸಾಮಾನ್ಯವಾಗಿ ಬೋಟ್‌ಗಳಿಗೆ ತೊಂದರೆಯಾದಾಗ ಅದನ್ನು ದಡಕ್ಕೆ ತಂದು ಸರಿಪಡಿಸಬೇಕು. ಇದಕ್ಕೆಲ್ಲ ಬರೋಬ್ಬರಿ .70 ಸಾವಿರದಿಂದ .1 ಲಕ್ಷ ವರೆಗೆ ವೆಚ್ಚ ತಗಲುತ್ತದೆ, ಜತೆಗೆ ದುರಸ್ತಿಗೆ ವಾರಗಟ್ಟಲೆ ಸಮಯ ಹಿಡಿಯುವುದೂ ಇದೆ. ಆದರೆ ಸ್ಕೂಬಾ ಡೈವಿಂಗ್‌ ವಿಧಾನದಲ್ಲಿ ಇಂಥ ಯಾವುದೇ ತಾಪತ್ರಯ ಇಲ್ಲ.

ಸ್ಕೂಬಾ ಡೈವಿಂಗ್‌ ಧಿರಿಸಿನಲ್ಲಿ ತಜ್ಞರ ತಂಡ ನೀರಿನಲ್ಲಿ ಬೋಟಿನ ಅಡಿಭಾಗಕ್ಕೆ ತೆರಳುತ್ತದೆ. ಹೆಚ್ಚಾಗಿ ಬೋಟ್‌ಗಳಡಿ ಕಪ್ಪೆ ಚಿಪ್ಪು ಗಟ್ಟಿಯಾಗಿ ಬೋಟ್‌ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ ಕೆಲ ತಾಂತ್ರಿಕ ತೊಂದರೆಗಳೂ ಕಾಣಿಸುತ್ತವೆ. ಇವೆಲ್ಲವನ್ನು ಸರಿಸುಮಾರು ಎರಡ್ಮೂರು ಗಂಟೆ ಅವಧಿಯಲ್ಲಿ ತಂಡ ಸರಿಪಡಿಸುತ್ತದೆ. ಬೋಟ್‌ನ ಅಡಿ ಭಾಗದಲ್ಲಿ ಕ್ಯಾಮೆರಾ, ಫ್ಯಾನ್‌, ಚುಕಾನ್‌ ಅಳವಡಿಕೆ ಕೂಡ ಮಾಡುತ್ತದೆ ಈ ತಂಡ. ಆದರೆ, ಇದೆಲ್ಲ ಬೋಟ್‌ಗಳು ನದಿ ನೀರಿನಲ್ಲಿದ್ದರೆ ಮಾತ್ರಸಾಧ್ಯ. ದುರಸ್ತಿ ಕಾರ್ಯಕ್ಕೆ ವಿಧಿಸುವ