ಚಲಾವಣೆಯಾಗದ ₹ 5 ನೋಟು, 10 ರೂ. ನಾಣ್ಯ?
ರಬಕವಿ-ಬನಹಟ್ಟಿ ಅವಳಿ ನಗರಗಳಲ್ಲಿ ಈ ನೋಟು ಚಲಾವಣೆಯಾಗುತ್ತಿಲ್ಲ. 10 ನಾಣ್ಯಗಳೂ ನಕಲಿ ಇವೆ ಎಂಬ ಶಂಕೆಯಿಂದ ಯಾರೊಬ್ಬರು ಪಡೆಯುತ್ತಿಲ್ಲ. ಇದರಿಂದ ವ್ಯಾಪಾರ, ವಹಿವಾಟಿಗೆ ತೀವ್ರ ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಗೂ ತೊಂದರೆಯಾಗಿದೆ.
ಶಿವಾನಂದ ಪಿ.ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ (ಫೆ.09): 5, ನೋಟು ಹಾಗೂ 10 ಮುಖಬೆಲೆಯ ನಾಣ್ಯಗಳು ಅಮಾನ್ಯಗೊಂಡಿವೆಯೇ? ಇಂತಹ ಪ್ರಶ್ನೆ ಈಗ ಎದುರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೇಳಿಬರುತ್ತಿದ್ದ ಈ ಸುದ್ದಿ ಈಗ ನಗರ ಪ್ರದೇಶಕ್ಕೂ ವ್ಯಾಪಿಸಿದೆ. ವರ್ತಕರು ಸೇರಿದಂತೆ ಎಲ್ಲರೂ ರ ನೋಟು ಹಾಗೂ ₹10 ನಾಣ್ಯ ಪಡೆಯಲು ನಿರಾಕರಿ ಸುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಚಿಲೆ ಸಮಸ್ಯೆ ಎದುರಾಗಿ ಸಾರ್ವಜನಿಕರು, ವ್ಯಾಪಾರಸ್ಥರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ರಬಕವಿ-ಬನಹಟ್ಟಿ ಅವಳಿ ನಗರಗಳಲ್ಲಿ ಈ ನೋಟು ಚಲಾವಣೆಯಾಗುತ್ತಿಲ್ಲ. 10 ನಾಣ್ಯಗಳೂ ನಕಲಿ ಇವೆ ಎಂಬ ಶಂಕೆಯಿಂದ ಯಾರೊಬ್ಬರು ಪಡೆಯುತ್ತಿಲ್ಲ. ಇದರಿಂದ ವ್ಯಾಪಾರ, ವಹಿವಾಟಿಗೆ ತೀವ್ರ ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಗೂ ತೊಂದರೆಯಾಗಿದೆ.
ಚಿದ್ರೆ ಕೊಡುವ ಬದಲು ಮಸ್ತು ನೀಡುತ್ತಿದ್ದಾರೆ: ಕೆಲವರಂತೂ ೨ ಹಾಗೂ ₹10 ಬದಲಾಗಿ ಬೇರೆ ವಸ್ತುಗಳನ್ನು ಉಪಯೋಗಿಸಿ ತಮ್ಮದೇ ಬ್ಯಾಂಡ್ ಮಾಡಿಕೊಂಡಿದ್ದರೆ ಇನ್ನು ಕೆಲವು ವ್ಯಾಪಾರಸ್ಥರು, ಐದು, ಹತ್ತು ರೂಪಾಯಿ ಕೊಡುವ ಪ್ರಸಂಗ ಬಂದರೆ ಹೆಚ್ಚಿನ ವಸ್ತು ನೀಡಿ ಸರಿದೂಗಿಸುತ್ತಿದ್ದಾರೆ. ಇದರಿಂದ ಗ್ರಾಹಕರು ಅವಶ್ಯಕತೆ ಇಲ್ಲದಿದ್ದರೂ ಹೆಚ್ಚಿನ ದಸ್ತುಗಳನ್ನು ಖರೀದಿಸುಂತಾಗಿದೆ.
ಎಂಟು ವರ್ಷ ಕೆಲಸ ಮಾಡಿದರೂ ಖಾಯಂಗೊಳಿಸದ ಅನುದಾನಿತ ಶಾಲೆ; ಆತ್ಮಹತ್ಯೆಗೆ ಯತ್ನಿಸಿದ ಶಿಕ್ಷಕ
5 ನೋಟು 10 ನಾಣ್ಯಗಳನ್ನು ಭಾರತೀಯ ರಿಝರ್ವ್ ಬ್ಯಾಂಕ್ ನಿಷೇಧ ಮಾಡಿದ್ದರೆ ಬಗ್ಗೆ ಯಾವುದೇ ಆದೇಶ, ಅಥವಾ ಹೇಳಿಕೆ ನೀಡದಿದ್ದರೂ ಒಬ್ಬರಿಂದ ಮತ್ತೊಬ್ಬರಿಗೆ ವದಂತಿ ಹರಡಿ ಯಾರೊಬ್ಬರೂ ಇವುಗಳನ್ನು ತೆಗೆದುಕೊಳ್ಳಲು ತಯಾರಿಲ್ಲ, ಇದರಿಂದ ಜನತೆ ವದಂತಿಯನ್ನೇ ನಂಬಿ ಮಾರುಕಟ್ಟೆಯಲ್ಲಿ ಚಿಲ್ಲರೆ ಅಭಾವ ತೀವ್ರಗೊಂಡಿದೆ. ವರ್ತಕರು, ಸಾರ್ವಜನಿಕರು ಈ ನೋಟು ಹಾಗೂ ನಾಣ್ಯ ಸ್ವೀಕರಿಸದ ಕಾರಣ ಇವು ಚಲಾವಣೆಯಿಲ್ಲದೆ ಮಾಯವಾಗಿವೆ.
ಸರ್ಕಾರಿ ಕಚೇರಿಗಳಲ್ಲೂ ತೆಗೆದುಕೊಳ್ಳುತ್ತಿಲ್ಲ: ನಗರಸಭೆ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಕರ ಪಾವತಿ, ಭೂದಾಖಲೆ ಶುಲ್ಕ, ಇಲ್ಲವೆ ಸರ್ಕಾರಿ ಸೇವಾ ಶುಲ್ಕ ಭರಿಸಲು ಮುಂದಾದರೆ ಅಲ್ಲಿನ ಸಿಬ್ಬಂದಿಯೂ T S ಸರ್ಕಾರಿ ತೆಗೆದುಕೊಳ್ಳುತ್ತಿಲ್ಲವಾದ್ದರಿಂದ ನಿಷೇಧ ವದಂತಿಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಸರ್ಕಾರಿ ಕಚೇರಿಯಲ್ಲೂ ಆನಧಿಕೃತವಾಗಿ ನಿಷೇಧ ಜಾರಿಯಾಗಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ನೋಟುಹಾರ್ಗೂ 10 ನಾಣ್ಯಗಳನ್ನು ಪಡೆಯುತ್ತಿಲ್ಲ. ಕಚೇರಿಗಳಲ್ಲೇ ಹೊಸ ನಾಣ್ಯಗಳಿಂದ ಗೊಂದಲ: ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರತಂದಿರುವ 1, ₹3 ಹಾಗೂ ಕ ಮುಖಬೆಲೆಯ ನಾಣ್ಯಗಳು ಜನರಲ್ಲಿ ಗೊಂದಲ ಮೂಡುವಂತೆ ಮಾಡಿರುವುದು ಸಹಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಈ ಮೂರೂ ನಾಣ್ಯಗಳು ಸೈಜ್ ಹಾಗೂ ಕಲರ್ ಒಂದೇ ಯಾವುದೇ ನೋಟು, ನಾಣ್ಯ ಅಮಾನ್ಯಗೊಂಡಲ್ಲಿ ಸರ್ಕಾರ ಅಧಿಕೃತ ಮಾಹಿತಿ ನೀಡುತ್ತದೆ. ಅಲ್ಲದೆ ಅವುಗಳನ್ನು ಬ್ಯಾಂಕಿಗೆ ಮರಳಿಸುವಂತೆ ಸಂದೇಶ ನೀಡುತ್ತದೆ. 5 ನೋಟು ಹಾಗೂ ₹10 ನಾಣ್ಯಗಳನ್ನು ನಿಷೇಧ ಮಾಡಿಲ್ಲ. ಅಲ್ಲದೆ, ಇವುಗಳನ್ನು ನಿರಾಕರಿಸುವುದು ಅಪರಾಧವಾಗುತ್ತದೆ. ಜನರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು.
ನಾಣ್ಯ ಚಲಾವಣೆಯನ್ನು ಸರ್ಕಾರ ಬಂದ್ ಮಾಡಿಲ್ಲ. ಈ ನೋಟು-ನಾಣ್ಯಗಳನ್ನು ತೆಗೆದುಕೊಳ್ಳುವ ಮೂಲಕ ಸಾರ್ವಜನಿಕರು, ವರ್ತಕರು ಸಹಕರಿಸಬೇಕು. ಇದರಿಂದ ವ್ಯಾಪಾರ, ವಹಿವಾಟು ಕುಂಠಿತಗೊಳ್ಳುತ್ತದೆ. ಇದಕ್ಕೆ ಅವಕಾಶ ನೀಡಬೇಡಿ.
ಕೇಂದ್ರ ಸರ್ಕಾರ ಇಲ್ಲವೆ ಭಾರತೀಯ ರಿಝರ್ವ್ ಬ್ಯಾಂಕ್ 5ರ ಮುಖಬೆಲೆಯ ನೋಟು ಮತ್ತು 10ರ ಮುಖಬೆಲೆಯ ನಾಣ್ಯಗಳನ್ನು ನಿಷೇಧಿಸಿಲ್ಲ. ಜನತೆ ವ್ಯವಹಾರಗಳಲ್ಲಿ ಬಳಸಬಹುದಾಗಿದೆ. ವರ್ತಕರು ಜಾಗೃತರಾಗಿ ಜನರಲ್ಲಿನ ಸುಳ್ಳು ವದಂತಿಗೆ ಇಂಬು ನೀಡದೆ ಇವುಗಳನ್ನು ಸ್ವೀಕರಿಸುವ ಮೂಲಕ ಚಿಲ್ಲರೆ ಸಮಸ್ಯೆ ನಿವಾರಿಸಬೇಕು. ಬೆಲ್ಲರೆ ಹೆಚ್ಚಾದಲ್ಲಿ ಎಸ್‌ಬಿಐ ಬ್ಯಾಂಕಿಗೆ ಜಮಾ ಮಾಡಿ ನಿತ್ಯದ ವ್ಯವಹಾರ ನಿರ್ವಹಿಸಬೇಕು ಎಂದು ಢಪಳಾಪುರ ಕಿರಾಣಿ ವರ್ತಕ ರಬಕವಿ ಪ್ರಭಾಕರ ಬಸವರಾಜ ತಿಳಿಸಿದ್ದಾರೆ.