ಗಂಗಾವತಿ: ಕೊರೋನಾ ಆತಂಕದ ಮಧ್ಯೆಯೇ ಅನಧಿಕೃತ ರೆಸಾರ್ಟ್ ಆರಂಭ?
ಜಂಗಲ್ ಟ್ರೀ ರೆಸಾರ್ಟ್‌ನಲ್ಲಿ ಕಳೆದ ಮೂರು ದಿನಗಳ ಹಿಂದೆ ರೂಂ ಪಡೆದ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಯುವ ಪ್ರವಾಸಿಗರು| ಕಾನೂನು ಬಾಹಿರವಾಗಿ ಜಂಗಲ್ ಟ್ರೀ ರೆಸಾರ್ಟ್‌ನಲ್ಲಿ ಪ್ರವಾಸಿಗರಿಗೆ ಅವಕಾಶ| . ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಕೈಗೊಂಡ ಪೊಲೀಸರು|
ಗಂಗಾವತಿ(ಮೇ.25): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಲಿ ಗ್ರಾಮದಲ್ಲಿದ್ದ ಜಂಗಲ್ ಟ್ರೀ ರೆಸಾರ್ಟ್‌ನಲ್ಲಿ ಹೊರ ರಾಜ್ಯದ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಪ್ರವೇಶ ನೀಡಿದ್ದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಇಂದು(ಸೋಮವಾರ) ಬೆಳಿಗ್ಗೆ ನಡೆದಿದೆ.
ಜಂಗಲ್ ಟ್ರೀ ರೆಸಾರ್ಟ್‌ನಲ್ಲಿ ಕಳೆದ ಮೂರು ದಿನಗಳ ಹಿಂದೆ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಯುವ ಪ್ರವಾಸಿಗರು ಆಗಮಿಸಿ ರೂಂಗಳನ್ನು ಪಡೆದಿದ್ದರು. ದೇಶದಲ್ಲಿ ಕೊರೋನಾ ಮಾರಕ ರೋಗ ಇದ್ದಿದ್ದರಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ರೆಸಾರ್ಟ್ ಸೇರಿದಂತೆ ಹೋಟೆಲ್‌ಗಳನ್ನು ಮುಚ್ಚಲಾಗಿತ್ತು. ಆದರೆ ಕಾನೂನು ಬಾಹಿರವಾಗಿ ಜಂಗಲ್ ಟ್ರೀ ರೆಸಾರ್ಟ್‌ನಲ್ಲಿ ಪ್ರವಾಸಿಗರಿಗೆ ಅವಕಾಶ ನೀಡಿದ್ದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ಕೈಗೊಂಡಿದ್ದಾರೆ.
ಗಂಗಾವತಿ: ಕೊರೋನಾ ಟೆಸ್ಟ್ ಇಲ್ಲದೆ ಕೆಲಸಕ್ಕೆ ಬಂದ ಕಾರ್ಮಿಕರು, ಸ್ಥಳೀಯರಲ್ಲಿ ಆತಂಕ
ಈ ಹಿಂದೆ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಆಕ್ರಮವಾಗಿ ಚಟುವಟಿಕೆಗಳು ಮತ್ತು ಸರಕಾರದ ಭೂಮಿ ಒತ್ತುವರಿ ಮಾಡಿದ್ದಾರೆಂಬ ಕಾರಣಕ್ಕೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಣದಿಂದಾಗಿ ತೆರವುಗೊಳಿಸಲಾಗಿತ್ತು. ಈಗ ಜಂಗಲ್ ಟ್ರೀ ರೆಸಾರ್ಟ್‌ನಲ್ಲಿ ಅನಧಿಕೃತವಾಗಿ ಪ್ರಾರಂಭಿಸಿರುವುದಕ್ಕೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿದೆ.