ರಾಮಮೂರ್ತಿ  ನವಲಿ

ಗಂಗಾವತಿ(ಮೇ.17): ಸಮೀಪದ ದೇವಘಾಟ್ ಬಳಿ ತುಂಗಭದ್ರಾ ವಿಜಯನಗರ ಉಪ ಕಾಲುವೆ ದುರಸ್ತಿಗೆ ಅಂತರ್ ರಾಜ್ಯದ 100 ಕ್ಕೂ ಹೆಚ್ಚು ಕಾರ್ಮಿಕರು ಬಂದಿದ್ದರಿಂದ ಕೊರೋನಾ ಭೀತಿ ಉಂಟಾಗಿದೆ. ಕಳೆದ ವರ್ಷ 2019 ರಲ್ಲಿ 4 ಕೋಟಿ ರು. ಜಲ ಸಂಪನ್ಮೂಲ ಇಲಾಖೆಯಿಂದ ಅನುದಾನ ಬಂದಿತ್ತು. ಈ ಕಾಮಗಾರಿಗೆ ಪೂಜೆ ನೆರವೇರಿಸಿತ್ತು. ನಂತರ ಕೃಷಿ ಚಟುವಟಿಕೆ ಮತ್ತು ಕೊರೋನಾ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಈಗ ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ತೆಲಂಗಾಣದ ಮೆಹಬೂಬ್ ನಗರದ ಪಾಲ್ಯಂ ಗ್ರಾಮದ 100 ಹೆಚ್ಚು ಕಾರ್ಮಿಕರ ದಂಡು ಶನಿವಾರ ರಾತ್ರೋ ರಾತ್ರಿ ಬಂದಿಳಿದಿದೆ.

ಆದರೆ ಕಾರ್ಮಿಕರು ಹೊಸಪೇಟೆ, ಮುನಿರಾಬಾದ್‌ನಲ್ಲಿ ಕಾಲುವೆ ಕಾಮಗಾರಿ ಮುಗಿಸಿ ಗಂಗಾವತಿ ಬಳಿ ದೇವಘಾಟ್ ಸಮೀಪ ಮೋತಿಕಾಟ್‌ನಲ್ಲಿ ಕಾಲುವೆ ಕಾಮಗಾರಿಗಾಗಿ ಕಾರ್ಮಿಕರು ಇಳಿದಿದ್ದಾರೆ. ಇವರಿಗೆ ಯಾವುದೇ ರೀತಿಯ ಕೊರೋನಾ ತಪಾಸಣೆ ನಡೆಸದೆ ಬಂದಿದ್ದರಿಂದ ಸ್ಥಳೀಯರಲ್ಲಿ ಭಯ ಉಂಟಾಗಿದೆ. ಕಾರ್ಮಿಕರು ಮಾವಿನ ತೋಪಿನ ಬಳಿ ಗುಡಿಸಲಗಳನ್ನ ಹಾಕಿಕೊಂಡಿದ್ದು, ಇವರ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಬೇಕಾಗಿದೆ. 

ಮದುವೆ ತಂದಿದ್ದ ಆತಂಕ ಠುಸ್, ಗ್ರೀನ್‌ ಝೋನ್‌ನಲ್ಲಿ ಕೊಪ್ಪಳ ಸೇಫ್..!

ಅಂತರ್ ರಾಜ್ಯದ ಕಾರ್ಮಿಕರು ಕಾಲುವೆ ಕಾಮಗಾರಿ ಬಂದಿದ್ದಾರೆ. ಇವರು ಹೊಸಪೇಟೆ ತಾಲೂಕಿನಲ್ಲಿ ಕಾಮಗಾರಿ ಕೈಗೊಂಡಿದ್ದಾರೆ. ಇವರಿಗೆ ಯಾವುದೇ ರೀತಿಯ ಕೊರೋನಾ ಸೋಂಕು ಭಯ ಇಲ್ಲ ಎಂದು ಮೇಲ್ವಿಚಾರ ರತ್ನಾಕರ್ ಭಟ್ ಎಂಬುವರು ತಿಳಿಸಿದ್ದಾರೆ.