Asianet Suvarna News

ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ: ಇಲ್ಲಿದೆ ಟೈಮಿಂಗ್ಸ್

* ಶ್ರೀಕೃಷ್ಣ ಮಠದಲ್ಲಿ ನಾಳೆಯಿಂದ ದೇವರ ದರ್ಶನಕ್ಕೆ ಅವಕಾಶ
* ಪರ್ಯಾಯ ಶ್ರೀಗಳ‌ ಆದೇಶದಂತೆ ಭಾನುವಾರದಿಂದ ಕೃಷ್ಣನ‌ ದರ್ಶನಕ್ಕೆ ಅವಕಾಶ
* ದೇವಸ್ಥಾನ ತೆರೆಯಲು ವಾರದ ಹಿಂದೆಯೇ ಅವಕಾಶ ‌ನೀಡಿದ್ದ ಸರ್ಕಾರ
* ಕೃಷ್ಣ ದರ್ಶನ ಒಂದು ವಾರ ಮುಂದೂಡಿದ್ದ ಮಠದ ಆಡಳಿತ ಮಂಡಳಿ

udupi sri krishna Mutt will not open July from July 11th rbj
Author
Bengaluru, First Published Jul 10, 2021, 9:40 PM IST
  • Facebook
  • Twitter
  • Whatsapp

ಉಡುಪಿ, ಜುಲೈ.10):  ಶ್ರೀಕೃಷ್ಣನ ದರ್ಶನ ಭಾಗ್ಯ ಲಭಿಸುವ ಅವಕಾಶವನ್ನು ಪರ್ಯಾಯ ಶ್ರೀಪಾದರು ಕಲ್ಪಿಸಿದ್ದಾರೆ.​​ 

ಹೌದು...ಉಡುಪಿಯ  ಶ್ರೀಕೃಷ್ಣ ಮಠದಲ್ಲಿ ನಾಳೆಯಿಂದ (ಜುಲೈ.11) ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದ್ರೆ, ಯಾವುದೇ ತೀರ್ಥ- ಪ್ರಸಾದ ಸೇವೆಗಳಿರುವುದಿಲ್ಲ.

ದೇವಸ್ಥಾನ ತೆರೆಯಲು ಸರ್ಕಾರ ಅನುಮತಿ: ಕಂಡೀಷನ್ಸ್ ಅಪ್ಲೈ 

ಪರ್ಯಾಯ ಶ್ರೀಗಳ‌ ಆದೇಶದಂತೆ ಭಾನುವಾರದಿಂದ ಕೃಷ್ಣನ‌ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮಧ್ಯಾಹ್ನ 2ಗಂಟೆಯಿಂದ ಸಂಜೆ 6ರವರೆಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಮಾಸ್ಕ್ ಹಾಗೂ ಸಾಮಾಜಿಕ‌ ಅಂತರ ಕಡ್ಡಾಯವಾಗಿರುತ್ತದೆ.

ದೇವಸ್ಥಾನ ತೆರೆಯಲು ವಾರದ ಹಿಂದೆಯೇ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು, ಆದರೆ, ಮಠದ ಆಡಳಿತ ಮಂಡಳಿ, ಕೃಷ್ಣ ದರ್ಶನ ಒಂದು ವಾರ ಮುಂದೂಡಿತ್ತು.

ಕೊರೋನಾ ವೈರಸ್​ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಾಕ್​ಡೌನ್​ ನಿಯಮ ಜಾರಿಗೆ ತಂದಿತ್ತು. ಎರಡು ತಿಂಗಳಿಗೂ ಅಧಿಕ ಕಾಲ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಈ ವೇಳೆ ದೇವಾಲಯಗಳ ಬಾಗಿಲನ್ನು ಮುಚ್ಚಲಾಗಿತ್ತು. ಈಗ ದೇವಾಲಯ ಓಪನ್​ ಮಾಡಲು ಸರ್ಕಾರ ಅನುಮತಿ ನೀಡಿದೆ. 

Follow Us:
Download App:
  • android
  • ios