* ರಾಜ್ಯದಲ್ಲಿ ಕಡಿಮೆಯಾ  ಕೋವಿಡ್ ಎರಡನೇ ಅಲೆ ಹಾವಳಿ* ದೇವಸ್ಥಾನ ಓಪನ್‌ಗೆ ಸರ್ಕಾರ ಗ್ರೀನ್ ಸಿಗ್ನಲ್* ಈ ಬಗ್ಗೆ ಮುಜರಾಯಿ ಇಲಾಖೆಯ ಆಯುಕ್ತರಿಗೆ ನಿರ್ದೇಶನ

ಬೆಂಗಳೂರು, (ಜುಲೈ.03): ಕೋವಿಡ್ ಎರಡನೇ ಅಲೆ ಹಾವಳಿ ಮತ್ತಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನಷ್ಟು ನಿರ್ಬಂಧಗಳ ಸಡಿಲಿಕೆಗೆ ಸರ್ಕಾರ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ಮೊದಲ ಭಾಗವಾಗಿ ರಾಜ್ಯದಲ್ಲಿ ದೇವಸ್ಥಾನಗಳನ್ನ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಇಂದು (ಶನಿವಾರ) ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಮುಜರಾಯಿ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. 

ಕರ್ನಾಟಕದಲ್ಲಿ ಶೇ.1.92ಕ್ಕೆ ಇಳಿದ ಕೊರೋನಾ ಪಾಸಿಟಿವಿಟಿ ದರ

ಈ ಮೂಲಕ ಎರಡು ತಿಂಗಳ ಬಳಿಕ ದೇವಸ್ಥಾನಗಳು ಓಪನ್ ಆಗುತ್ತಿದ್ದು, ಜುಲೈ.05ರಿಂದ ಭಕ್ತರು ದೇವರ ಆಶೀರ್ವಾದ ಪಡೆದುಕೊಳ್ಳಬಹುದು. ಆದ್ರೆ, ಹೋಮ-ಹವನ ಮಾಡುವುದಕ್ಕೆ ಅವಕಾಶ ಇಲ್ಲ, ಪ್ರಸಾದ ವಿತರಣೆ ಮಾಡುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.

ಬಹುಮುಖ್ಯವಾಗಿ ಮಾಸ್ಕ್, ಸಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕರು ಹಾಗೂ ಸಮಿತಿಗಳು ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದು ಸೂಚಿಸಲಾಗಿದೆ.