Asianet Suvarna News Asianet Suvarna News

ನರಸಿಂಹ ಸ್ವಾಮಿ‌ ದರ್ಶನ ಪಡೆದು ಬೀದರ್ ಜಿಲ್ಲೆಯ ಪ್ರವಾಸ ಆರಂಭಿಸಿದ ಸಚಿವ ಎಚ್.ಕೆ.ಪಾಟೀಲ್

ನಮ್ಮ ಸ್ಮಾರಕ ದರ್ಶನ ಮತ್ತು ಸರಂಕ್ಷಣೆಗಾಗಿ ಪ್ರವಾಸ ಕೈಗೊಂಡಿರುವ ಎಚ್.ಕೆ.ಪಾಟೀಲ್  ಮಂಗಲಪೇಟ್ ಬಳಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಬೀದರ್‌ ಜಿಲ್ಲೆ ಪ್ರವಾಸ ಕೈಗೊಂಡರು.

Tourism Minister  HK Patil start Bidar District  tour gow
Author
First Published Nov 6, 2023, 3:24 PM IST

ವರದಿ:  ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್

ಬೀದರ್ (ನ.6): ನಮ್ಮ ಸ್ಮಾರಕ ದರ್ಶನ ಮತ್ತು ಸರಂಕ್ಷಣೆಗಾಗಿ ಪ್ರವಾಸ ಕೈಗೊಂಡಿರುವ ಎಚ್.ಕೆ.ಪಾಟೀಲ್ ನಗರದ ಮಂಗಲಪೇಟ್ ಬಳಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಜಿಲ್ಲೆಯ ಹಲವು ಐತಿಹಾಸಿಕ ಸ್ಮಾರಕ, ಕೋಟೆಗಳಿಗೆ ಸಚಿವರು ಭೇಟಿ ನೀಡಿ ವೀಕ್ಷಣೆ ಮಾಡಿದರು.

ನರಸಿಂಹ ಸ್ವಾಮಿ ಟೆಂಪಲ್ ನಿಂದ ಮೊದಲಿಗೆ ನಗರದ ಹೊರವಲಯದ ಹಮೀಲಾಪುರ ಗ್ರಾಮದ ಬಳಿಯ ಅಷ್ಟಕೋನಾಕಾರದ ಭಾವಿಗೆ ಭೇಟಿ ನೀಡಿಸಿ ವೀಕ್ಷಿದ ಸಚಿವರು, ಅಲಿಯಾಬಾದ್ ಬಳಿ ಪ್ರಾಚಿನ ಕರೇಜ್ ವ್ಯವಸ್ಥೆ ವೀಲ್ಷಣೆ ಮಾಡಿದರು ಬಳಿಕ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಅಧಿಕಾರಿಗಳು, ಪ್ರವಾಸಿ ಸ್ಥಳಗಳು ದತ್ತು ಪಡೆಯಲು ಆಸಕ್ತಿ ಇರುವ  ಸಂಘ- ಸಂಸ್ಥೆಗಳ ಜೊತೆ ಸಭೆ ನಡೆಸಿ ಅವರಿಂದ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಮಾಡಬೇಕಾದ ಕೆಲಸ ಕಾರ್ಯಗಳ ಕುರಿತು ಸಲಹೆ ಪಡೆದರು.

ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್ ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ಪ್ರಧಾನ ಮೋದಿ ವಾಗ್ದಾಳಿ ನಡೆಸಿದರು,.. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜವಾಬ್ದಾರಿಯಿಂದ ಮಾತಾಡಬೇಕು. ಎಲೆಕ್ಟೋರಲ್ ಬಾಂಡ್ ಗಳ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಮೂಲಕ ಕೊಡಬಾರದು ಎಂದು ಕಾನೂನು ಮಾಡಿದ್ದ ನೀವು  ಯಾರ ಬಗ್ಗೆ ಮಾತಾಡುತ್ತೀರಿ ಎಂಬುವುದು ನಾಚಿಕೆಯಾಗಬೇಕು ಎಂದರು

ಇನ್ನು ಸುರ್ಜೆವಾಲಾ, ವೇಣುಗೋಪಾಲ ಸೂಟಕೇಸ್ ತೆಗೆದುಕೊಂಡು ಹೋಗಿದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ. ಪಾಟೀಲ್ ವಿರೋಧ ಪಕ್ಷದವರಿಗೆ ಸೂಟಕೇಸ್ ಬಗ್ಗೆನೆ ಚಿಂತೆ ಇರುತ್ತದೆ, ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿ, ಬಿಜೆಪಿ ಮತ್ತು ಅವರ ಜೊತೆ ಸೇರಿಕೊಂಡ ಪಾರ್ಟನರ್ ಗಳ ದೃಷ್ಟಿ ಸೂಟಕೇಸ್ ಕಡೆ ಇದೆ ಎಂದರು, ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆಗೆ ಉತ್ತರಿ ಸಿಎಂ  ಸೀಟು ಖಾಲಿ ಆದ ಮೇಲೆ ಅದರ ಬಗ್ಗೆ ಚರ್ಚೆ ಮಾಡೋಣ ಎಂದರು.

ಮುಂಗಾರು ಕೈ ಕೊಟ್ಟು ಬರ ತಂಡವಾಡುತ್ತಿದೆ ಮತ್ತೊಂದು ಕಡೆ ಹಿಂಗಾರು ಮಳೆ ಬರುತ್ತಿಲ್ಲ ಎಂದು ನಾವು ಒದ್ದಾಡುತ್ತಿದ್ದೇವೆ,. ಬರ ಪರಿಹಾರದ ಹಣ ಬಿಡುಗಡೆ ಮಾಡುವುದರಲ್ಲಿ ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

 

Follow Us:
Download App:
  • android
  • ios