Asianet Suvarna News Asianet Suvarna News

Tumakuruನಲ್ಲಿ ಕಾರು - ಸರಕಾರಿ ಬಸ್ ಭೀಕರ ಅಪಘಾತ, ಇಬ್ಬರು ಬಲಿ

ಕಾರು ಮತ್ತು  KSRTC ಬಸ್ ನಡುವೆ ಭೀಕರ  ಅಪಘಾತ ಸಂಭವಿಸಿದ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಕಾರಿನಲ್ಲಿದ್ದ  ಇಬ್ಬರು ಸ್ಥಳದಲ್ಲೇ  ಮೃತಪಟ್ಟಿದ್ದಾರೆ.

car and ksrtc bus accident in tumakuru gow
Author
Bengaluru, First Published Jun 20, 2022, 3:00 PM IST

ತುಮಕೂರು (ಜೂನ್ 20): ಕಾರು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ ನಡುವೆ ಭೀಕರ  ಅಪಘಾತ ಸಂಭವಿಸಿದ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಕಾರಿನಲ್ಲಿದ್ದ  ಇಬ್ಬರು ಸ್ಥಳದಲ್ಲೇ  ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು ದೊಡ್ಡಗುಣಿ ಕೆರೆ ಏರಿ ಮೇಲೆ ಬೆಳಗ್ಗೆ ಸುಮಾರು 5.30ರ ಸಮಯದಲ್ಲಿ  ಈ ದುರಂತ ನಡೆದಿದೆ. 

ಕೆಎಸ್ಆರ್ಟಿಸಿ ಬಸ್ ನಲ್ಲಿದ್ದ 5 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ಗಾಯಾಳುಗಳನ್ನು ಗುಬ್ಬಿ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

1500 ಕೋಟಿಯಲ್ಲಿ 171 ಕಿ.ಮೀ. ಬೆಂಗಳೂರು RAJAKALUVE ಅಭಿವೃದ್ಧಿ

ಸಾಮಾಜಿಕ ಕಾರ್ಯಕರ್ತನ ಹತ್ಯೆ,ಹೊತ್ತಿ ಉರಿದ ಬೆಳಗಾವಿ: ಕಾರು ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪಾಟೀಲ್(27) ಕೊಲೆಯಲ್ಲಿ ಅಂತ್ಯವಾಗಿದೆ. ಗ್ರಾಮಸ್ಥರ ಒಳಿತಿಗಾಗಿ, ದೇವಸ್ಥಾನದ ಜಮೀನು ಮರಳಿ ದೇವಸ್ಥಾನಕ್ಕೆ ಸಿಗಬೇಕು ಅಂತಾ ಹೋರಾಡುತ್ತಿದ್ದ ಜೀವವನ್ನು ಆ ದೇವರೂ ಸಹ ಉಳಿಸಲಾಗಲಿಲ್ಲ. ಇದು ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮಸ್ಥರ ಮನದಾಳದ ಮಾತು. ಜೂನ್ 18ರ ರಾತ್ರಿ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಕಾಲಭೈರವನಾಥ ದೇವಸ್ಥಾನ ಎದುರು ಯಾವ ದೇವಸ್ಥಾನದ ಜಮೀನುಗಾಗಿ ಹೋರಾಡುತ್ತಿದ್ದನೋ ಆತನ ನೆತ್ತರು ಹರಿದಿದೆ. 

ವೃತ್ತಿಯಲ್ಲಿ ಫಾರ್ಮಸಿಸ್ಟ್ ಆಗಿದ್ದ ಸತೀಶ್ ಪಾಟೀಲ್ ಸಾಮಾಜಿಕ ಸೇವೆಯಿಂದಲೇ ಗ್ರಾಮಸ್ಥರ ಮನಗೆದ್ದಿದ್ದ. ಆದರೆ ಕಳೆದ ರಾತ್ರಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಜೀವ ಚೆಲ್ಲಿದ್ದ. ಸುದ್ದಿ ಹರಡುತ್ತಿದ್ದಂತೆ ಹಿಂಸಾಚಾರ ನಡೆದಿದ್ದು 10 ಕ್ಕೂ ಹೆಚ್ಚು ವಾಹನಗಳು, ಬಣವೆಗಳು ಸುಟ್ಟು ಕರಕಲಾಗಿವೆ. ದೇವಸ್ಥಾನದ ಜಮೀನು ವಿವಾದ, ಹಳೆ ವೈಷಮ್ಯದಿಂದ ಇಡಿ ಗ್ರಾಮದಲ್ಲೇ ಸ್ಮಶಾನ ಮೌನ ಆವರಿಸಿದೆ. 

ಕಳೆದ ರಾತ್ರಿ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮ ಅಕ್ಷರಶಃ ರಣರಂಗವಾಗಿತ್ತು. ಎಲ್ಲಿ ನೋಡಿದಲ್ಲಿ ಧಗಧಗಿಸುತ್ತಿರುವ ಬೆಂಕಿ...  ಪೊಲೀಸರ ಗಸ್ತು... ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ... ಕಾರು ಪಾರ್ಕಿಂಗ್ ವಿಚಾರವಾಗಿ ಆರಂಭವಾದ ಗಲಾಟೆ ಹಾಗೂ ಹಳೆ ವೈಷಮ್ಯ ಕೊಲೆ, ಗಲಾಟೆ ಹಾಗೂ ಹಿಂಸಾಚಾರದ ಮೂಲಕ ಅಂತ್ಯವಾಗಿದೆ.  

Ballari Drinking Water Crisis ಬಳ್ಳಾರಿ ಜನರಿಗೆ ಕುಡಿಯಲು ಆಂಧ್ರದ  ಫಿಲ್ಟರ್ ನೀರು!

ಜೂನ್ 18ರ ರಾತ್ರಿ ಗೌಂಡವಾಡ ಗ್ರಾಮದ ಕಾಲ ಭೈರವನಾಥ ದೇವಾಲಯ ಸ್ವಚ್ಛಗೊಳಿಸುವಾಗ ಆವರಣದಲ್ಲಿ ಆನಂದ ಕುಟ್ರೆ ಎಂಬಾತ ಕಾರು ಪಾರ್ಕ್ ಮಾಡಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾತೆ ತೆಗೆದ ಗ್ರಾಮದ ಮತ್ತೊಂದು ಗುಂಪಿನ ಜನ ಸತೀಶ್ ಪಾಟೀಲ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತೀಶ್ ಪಾಟೀಲ್ ನನ್ನ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ ಚಿಕಿತ್ಸೆ ಫಲಿಸದೇ ಸತೀಶ್ ಪಾಟೀಲ್ ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಸತೀಶ್ ಪಾಟೀಲ್ ಬೆಂಬಲಿಗರು,  ವಿರೋಧಿ ಬಣದ ಹತ್ತಕ್ಕೂ ಹೆಚ್ಚು ಕಾರುಗಳು, ಮೇವಿನ ಬಣವೆಗಳು, ಮನೆಗಳಿಗೆ ಬೆಂಕಿ ಹಚ್ಚಿ, ಮನೆಗೆ ನುಗ್ಗಿ ಕಿಟಕಿ ಗಾಜುಗಳನ್ನ ಒಡೆದು, ಕಲ್ಲು ತೂರಾಟ ನಡೆಸಿದ್ದರು.

ಕಾಳಭೈರವನಾಥ ದೇವಸ್ಥಾನಕ್ಕೆ ಸೇರಿದ 27 ಎಕರೆ ಜಮೀನನ್ನು ಗ್ರಾಮದ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು ಇದನ್ನ ವಾಪಸ್ ಪಡೆಯಲು ಸತೀಶ್ ಪಾಟೀಲ್ ಹೋರಾಟ ಮಾಡಿದ್ರು. ಇದೇ ಕಾರಣಕ್ಕೆ ಪಕ್ಕಾ ಪ್ಲ್ಯಾನ್ ಮಾಡಿ ಹತ್ಯೆ ಮಾಡಿದ್ದಾರೆ ಅಂತಾರೆ ಗ್ರಾಮಸ್ಥರು‌. ಇನ್ನೂ ಗೌಂಡವಾಡ ಗ್ರಾಮದಲ್ಲಿ ಹಿಂಸಾಚಾರ ಸುದ್ದಿ ತಿಳಿದು ಬೆಳಗಾವಿ ಪೋಲಿಸ್ ಆಯುಕ್ತ ಡಾ. ಬೋರಲಿಂಗಯ್ಯಾ ನೇತೃತ್ವದಲ್ಲಿ ನೂರಾರು ಪೋಲಿಸರು, ಗೌಂಡವಾಡ ಗ್ರಾಮಕ್ಕೆ ಲಗ್ಗೆ ಇಟ್ಟು ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದಿಂದ ವಾಹನ, ಮನೆ ಹಾಗೂ ಬಣವೆಗಳಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ್ರು‌. ರಾತ್ರಿಯಿಡೀ ಹೊತ್ತಿ ಉರಿದಿದ್ದ ಗೌಂಡವಾಡ ಗ್ರಾಮದಲ್ಲಿ ಇಂದು ಸ್ಮಶಾನ ಮೌನ ಆವರಿಸಿತ್ತು. 

Follow Us:
Download App:
  • android
  • ios