ಉಡುಪಿ (ಡಿ.30): ಅಂಧ ಸಂಗೀತ ಕಲಾವಿದನ  ಹಣವನ್ನು ಜೇಬುಗಳ್ಳರು ದೋಚಿದ್ದು, ಕಲಾವಿದ ತನ್ನ  ಊರಾದ ಬಾಗಲಕೋಟೆಗೆ ತೆರಳಲು ಟಿಕೇಟಿಗೆ ಹಣವಿಲ್ಲದೆ ಉಡುಪಿಯಲ್ಲಿ ಅಸಹಾಯಕ ಪರಿಸ್ಥಿತಿ ಎದುರಿಸಿದ್ದಾನೆ. 

ಉಡುಪಿ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು  ಅವರು ನೆರವಿಗೆ ಬಂದಿದ್ದು, ಅಂಧ ಕಲಾವಿದನ ಬಾಗಲಕೋಟೆಗೆ ಬಸ್ಸು ಹತ್ತಿಸಿ ಕಳಿಸಿಕೊಟ್ಟಿದ್ದಾರೆ. 

ನಗರಸಭೆ ಆಸ್ತಿ ತೆರಿಗೆ ಸಲಹಾ ಕೇಂದ್ರದ ಸಿಬ್ಬಂದಿಗಳಾದ ವಿದ್ಯಾ, ಚಂದ್ರಾವತಿ, ಪೂರ್ಣಿಮಾ, ತ್ರಿವೇಣಿ ಅವರು, ಹಸಿದ ಕಲಾವಿದನಿಗೆ ಆಹಾರದ ವ್ಯವಸ್ಥೆ, ಪ್ರಯಾಣಿಸಲು ಟೀಕೆಟಿಗೆ ಬೇಕಾದ ಹಣ ಒದಗಿಸಿ ಮಾನವಿಯತೆ ಮೆರೆದಿದ್ದಾರೆ.

'ಪ್ಲಾನಿಸ್ಪಿಯರ್' - ಇಲ್ಲಿದೆ ಎಲ್ಲರಿಗೂ ಆಕಾಶ ತಿಳಿಯುವ ಅವಕಾಶ ..

ಈ ಮೂಲಕ ಸೂಕ್ತ ನೆರವಿನೊಂದಿಗೆ ಕಲಾವಿದ ತಮ್ಮ ಊರನ್ನು ಸೇರುವಂತಾಗಿದೆ.