Pramod Madhwaraj ಕುಟುಂಬದಿಂದ ಉಡುಪಿ ಕಾಂಗ್ರೆಸ್ ಎರಡು ತಲೆಮಾರು ಬಲಿ!

ಇತ್ತೀಚೆಗಷ್ಟೇ ಕಾಂಗ್ರೆಸ್ ನ ಹಿರಿಯ ನಾಯಕ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದ್ದಾರೆ. ಇದೀಗ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮೋದ್ ಮಧ್ಚರಾಜ್  ವಿರುದ್ಧ ಬೆಂಕಿ ಉಗುಳಿದೆ. ಪ್ರಮೋದ್ ಪಕ್ಷ ಬಿಟ್ಟನಂತರ ನಮ್ಮ ಕಾರ್ಯಕರ್ತರಿಗೆ ನೆಮ್ಮದಿಯ ಉಸಿರು ತೆಗೆಯುವಂತಾಗಿದೆ ಎಂದಿದೆ.

Udupi Congress president Ashok Kumar Kodavoor  lashes pramod madhwaraj  gow

ವರದಿ -ಶಶಿಧರ ಮಾಸ್ತಿಬೈಲು ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಮೇ.11): ಇತ್ತೀಚೆಗಷ್ಟೇ ಕಾಂಗ್ರೆಸ್ ನ ಹಿರಿಯ ನಾಯಕ ಪ್ರಮೋದ್ ಮಧ್ವರಾಜ್ (pramod madhwaraj) ಬಿಜೆಪಿ ಸೇರಿದ್ದಾರೆ. ಜಿಲ್ಲಾ ಕಾಂಗ್ರೆಸ್ ನಲ್ಲಿ ಉಸಿರುಗಟ್ಟುವ ವಾತಾವರಣ ಇತ್ತು. ಅದೇ ಕಾರಣಕ್ಕೆ ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವಂತಾಯ್ತು ಎಂದು ಪ್ರಮೋದ್ ಕೆಪಿಸಿಸಿ ರಾಜ್ಯಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಗಂಭೀರ ಆರೋಪ ಮಾಡಿದರು. ಇದೀಗ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮೋದ್ ಮಧ್ಚರಾಜ್  ವಿರುದ್ಧ ಬೆಂಕಿ ಉಗುಳಿದೆ. ಮಾಧ್ಯಮಗಳ ಜೊತೆ ಮಾತನಾಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು (Ashok Kumar Kodavoor ) ಹಲವು ಗಂಭೀರ ಆರೋಪಗಳನ್ಬು ಮಾಡಿದ್ದಾರೆ.

ಕಚೇರಿಗೆ ಬರದವರಿಗೆ ಉಸಿರುಗಟ್ಟುವುದು ಹೇಗೆ?
ಕಳೆದ ಮೂರು ವರ್ಷಗಳಿಂದ ಪ್ರಮೋದ್ ಮಧ್ವರಾಜ್ ರನ್ನು ಕಾಂಗ್ರೆಸ್ ನ ಯಾವುದಾದರೂ ಕಾರ್ಯಕ್ರಮದಲ್ಲಿ ನೀವು ಕಂಡಿದ್ದೀರಾ? ನಾನು ಜಿಲ್ಲಾ ಅಧ್ಯಕ್ಷರಾದ ನಂತರ ಅವರು ಯಾವುದೇ ಕಾರ್ಯಕ್ರಮಕ್ಕೆ  ಬಂದಿಲ್ಲ ಕಂಡು ಅಶೋಕ್ ಕೊಡವೂರು ಆರೋಪಿಸಿದ್ದಾರೆ. ಕಾಂಗ್ರೆಸ್‌ ನ ಕಾರ್ಯಕ್ರಮಗಳಿಗೆ ಬರದೇ ಇವರಿಗೆ ಉಸಿರುಗಟ್ಟುವುದು ಹೇಗೆ? ನಮ್ಮದು ಪ್ರಜಾಪ್ರಭುತ್ವ ಪಕ್ಷ.ಇಲ್ಲಿ ಒಬ್ಬನೇ ಹೇಳಿದ ಹಾಗೆ ನಡೆಯಬೇಕೆಂದರೆ ಹೇಗೆ? ಇದು ಯಜಮಾನ ಸಂಸ್ಕೃತಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಾವೇನು ಇವರ ಯಜಮಾನಿಕೆಯ ಅಡಿಯಲ್ಲಿ ಇರಬೇಕಾ? ನಮ್ಮದು ಸಂವಿಧಾನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಪಕ್ಷ. ಕಾಂಗ್ರೆಸ್ ಗೆ ಈಗ ಅಧಿಕಾರ ಇಲ್ಲ. ಅಧಿಕಾರ ಇಲ್ಲದೇ ಇರುವಲ್ಲಿ ಪ್ರಮೋದ್ ಮಧ್ವರಾಜ್ ಗೆ ಉಸಿರು ತೆಗೆಯಲು ಆಗೋದಿಲ್ವೋ ಏನೋ. ಅವರು ಹೋದ ಪಕ್ಷದಲ್ಲಿ ಈಗ ಅಧಿಕಾರ ಇದೆ. ಅಲ್ಲಿಯಾದರೂ ಅವರು ಚೆನ್ನಾಗಿ ಉಸಿರಾಡಬಹುದು ಎಂದಿದ್ದಾರೆ.

SHAURYA PURASKAR ಹುತಾತ್ಮನಾದ ಕರ್ನಾಟಕದ ಯೋಧನಿಗೆ ಮರಣೋತ್ತರ ಶೌರ್ಯಪ್ರಶಸ್ತಿ

ಪ್ರಮೋದ್ ಪಕ್ಷ ಬಿಟ್ಟನಂತರ ನಮ್ಮ ಕಾರ್ಯಕರ್ತರಿಗೆ ನೆಮ್ಮದಿಯ ಉಸಿರು ತೆಗೆಯುವಂತಾಗಿದೆ. ಎಷ್ಟೋ ಕಾರ್ಯಕರ್ತರು ಈ ಬಗ್ಗೆ ನನ್ನಲ್ಲಿ ಹೇಳಿದ್ದಾರೆ.ಪ್ರಮೋದ್ ಪಕ್ಷ ಬಿಟ್ಟನಂತರ  ನಮಗೆ ಉಸಿರಾಡಲು ಸ್ವಲ್ಪ ಆರಾಮ ಆಯ್ತು ಎಂದು ಅವರದೇ ಜನ ಹೇಳುತ್ತಿದ್ದಾರೆ.ಅವರ ಪರವಾಗಿ ಪಕ್ಷದೊಳಗೆ ಹೋರಾಟ ಮಾಡಿದ ಕಾರ್ಯಕರ್ತರನ್ನೇ ಮರೆತಿದ್ದಾರೆ. ಕಾರ್ಯಕರ್ತರ ಜೊತೆಗೂ ಚರ್ಚೆ ಮಾಡದೆ ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.

ಪ್ರಮೋದ್ ಮಧ್ವರಾಜ್ ಪಿಂಚಣಿ ಹಣ ಕಾರ್ಯಕರ್ತರಿಗೆ ಕೊಡುತ್ತಾರಾ?
ಪಕ್ಷ ಮಧ್ವರಾಜ್ ರ ಕುಟುಂಬಕ್ಕೆ ಎಲ್ಲವನ್ನೂ ಕೊಟ್ಟಿದೆ. ಕಾರ್ಯಕರ್ತರು ದುಡಿದು ಇವರ ಕುಟುಂಬವನ್ನು ಬೆಳೆಸಿದ್ದಾರೆ. ಇವರು ಪಕ್ಷದಲ್ಲಿ ತುಂಬಾ ಸುಖಕರವಾದ ಜೀವನ ಮಾಡಿದ್ದಾರೆ.ಪ್ರಮೋದ್ ಚಿಕ್ಕ ಮಗುವಾಗಿದ್ದಾಗಿನಿಂದ ನಾನು ಕಾಂಗ್ರೆಸ್ ಪಾರ್ಟಿಯಲ್ಲಿ ಕಾರ್ಯಕರ್ತ.ಇವರ ಕುಟುಂಬದಿಂದಾಗಿ ಎರಡು ಜನರೇಷನ್ ನಲ್ಲಿ ಯಾರಿಗೂ ಯಾವುದೇ ಅಧಿಕಾರ ಅನುಭವಿಸಲು ಸಿಗಲಿಲ್ಲ ಎಂದು ಅಶೋಕ್ ಕೊಡವೂರು ಕಿಡಿಕಾರಿದ್ದಾರೆ. ಆದರೆ ನಾವು ಪಕ್ಷದ ಸಂವಿಧಾನ ಗೌರವಿಸುವವರು.‌ ಬೇಸರ ಇಲ್ಲ.ನಾನೊಬ್ಬ ಬಡ ಮೊಗವೀರ ಅಧ್ಯಕ್ಷರಾಗಿರುವುದು ಅವರಿಗೆ ತೊಂದರೆ ಆಗಿರಬೇಕು. ಮೊಗವೀರ ಸಮುದಾಯದಲ್ಲಿ ಬೇರೆ ಯಾರೂ ಮೇಲೆ ಬರಬಾರದಾ? ಎಂದು ಪ್ರಶ್ನಿಸಿದ್ದಾರೆ.

ವಿನಯ ಕುಲಕರ್ಣಿ ಪೋಟೋ ಹಾಕಿಲ್ಲವೆಂದು ಪಂಚಮಸಾಲಿ ಮುಖಂಡರ ಪ್ರತಿಭಟನೆ

ಇವತ್ತು ಕೂಡ ಪ್ರಮೋದ್ ಗೆ ಮತ್ತು ಅವರ ತಾಯಿಗೆ ತಿಂಗಳಿಗೆ 50000 ಪಿಂಚಣಿ ಬರ್ತಾ ಇದೆ. ಅದು ಕಾರ್ಯಕರ್ತರ ಬೆವರಿನ ಹಣ ಅಲ್ವಾ.ಪಿಂಚಣಿ ಹಣ ಬೇಡ ಅಂತ ಇವರೇನು ಬಿಟ್ಟು ಬಿಡ್ತಾರಾ‌ಮಾಜಿ ಶಾಸಕರ ನೆಲೆಯಲ್ಲಿ ಪಿಂಚಣಿ ಪಡೆಯುವುದಿಲ್ಲವಾ. ನಾನು ದುಡಿದ ಹಣವನ್ನು ಪಕ್ಷಕ್ಕೆ ಖರ್ಚು ಮಾಡಿದ್ದೇನೆ ಎನ್ನುತ್ತಾರೆ. ನಾವೇನು ಬೇರೆ ದಾರಿಯಲ್ಲಿ ದುಡಿದ ಹಣವನ್ನು ಪಕ್ಷಕ್ಕೆ ವಿನಿಯೋಗಿಸಿದ್ದೇವಾ? ನಮ್ಮ ಹೆಂಡತಿ ಮಕ್ಕಳು ತಿನ್ನುವ ಹಣವನ್ನು ಪಕ್ಷ ಕಟ್ಟಲು ಖರ್ಚು ಮಾಡಿದ್ದೇವೆ. ಪಕ್ಷ ಯಾರ ಹಣದಲ್ಲೂ ಬೆಳೆದಿಲ್ಲ. ಒಬ್ಬ ದೊಡ್ಡನಾಯಕ ಈ ರೀತಿ ಮಾತನಾಡಬಾರದು ಎಂದಿದ್ದಾರೆ.

ಲಾಕ್ಡೌನ್ ಆದಾಗ ಮನೆಯಲ್ಲಿ ಕುಳಿತಿದ್ದ ಪ್ರಮೋದ್: ಪ್ರಧಾನಿ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಮಾಡಿದ ಕೆಲಸವನ್ನು ನೋಡಿ ಬಿಜೆಪಿ ಸೇರಿದ್ದೇನೆ ಎಂದು ಪ್ರಮೋದ್ ಹೇಳುತ್ತಾರೆ. ಆದರೆ ಲಾಕ್ ಡೌನ್ ಆದಾಗ ಪ್ರಮೋದ್ ಮಧುರಾಜ್ ಮನೆಯಲ್ಲೇ ಕುಳಿತಿದ್ದರು. ಕೊರೋನಾ ಬಂದಾಗ ಜನನಾಯಕನಾಗಿ ಇವರು ಒಂದು ದಿನವೂ ಸಾರ್ವಜನಿಕರ ತೊಂದರೆಗೆ ಸ್ಪಂದಿಸಲಿಲ್ಲ. ಪ್ರಮೋದ್ ಮಧ್ವರಾಜ್ ಒಂದಾದರೂ ಕಿಟ್ ಕೊಟ್ಟಿದ್ದಾರಾ? ನಾವು ಭಿಕ್ಷೆಬೇಡಿ ಕಿಟ್ ಕೊಟ್ಟಿದ್ದೇವೆ/ ಲಾಕ್ಡೌನ್ ಸಂದರ್ಭದಲ್ಲಿ ನಾನು ದಿನವಿಡೀ ಪಕ್ಷದ ಕಚೇರಿಯಲ್ಲಿದ್ದು ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ.ಇವರು ಲಾಕ್ಡೌನ್ ವೇಳೆ ಮನೆಯಲ್ಲಿ ಕುಳಿತಿದ್ದರು ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios