Udupi; ಕಡಲಿನ ಒಡಲಿಂದ ಬರುತ್ತಿದೆ ಜಿಡ್ಡು,ಮತ್ಸ್ಯ ಸಂತತಿ ನಾಶದ ಭೀತಿ

ಕಡಲತೀರದ ಅಲೆಗಳ ಬಣ್ಣ ಬದಲಾದ ಒಂದು ಅಪರೂಪದ ವಿದ್ಯಮಾನ ಇತ್ತೀಚೆಗೆ ಉಡುಪಿ ಜಿಲ್ಲೆಯ ಕೆಲಭಾಗಗಳಲ್ಲಿ ಕಂಡುಬಂದಿದೆ.

Udupi Fishermen worried about pollution of water with waste oil gow

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಮೇ.29): ಕಡಲು ತನ್ನ ಒಡಲಿನಲ್ಲಿ ಏನನ್ನು ಇರಿಸಿ ಕೊಳ್ಳುವುದಿಲ್ಲ ಅನ್ನೋ ಮಾತಿದೆ. ನಾವು ಸಮುದ್ರಕ್ಕೆ ಏನೇ ಎಸೆದರೂ, ಸಮುದ್ರ (sea) ಅದನ್ನು ತೀರ ಪ್ರದೇಶಕ್ಕೆ ತಂದು ವಾಪಸ್ಸು ಹಾಕುತ್ತದೆ. ಪ್ರವಾಸ , ಉದ್ಯಮ ನೆಪದಲ್ಲಿ ಇತರ ಭೂಪ್ರದೇಶ ಗಳಂತೆ ಕಡಲನ್ನು ಕೂಡ ನಾವು ನಾಶ ಮಾಡುತ್ತಿದ್ದೇವೆ. ಕಡಲು ಕಲುಶಿತಗೊಂಡರೆ ಮತ್ಸೋದ್ಯಮ (Fisheries) ನಷ್ಟ ಅನುಭವಿಸಬೇಕಾಗುತ್ತದೆ. ಕಡಲತೀರದ ಅಲೆಗಳ ಬಣ್ಣ ಬದಲಾದ ಒಂದು ಅಪರೂಪದ ವಿದ್ಯಮಾನ ಇತ್ತೀಚೆಗೆ ಉಡುಪಿ ಜಿಲ್ಲೆಯ ಕೆಲಭಾಗಗಳಲ್ಲಿ ಕಂಡುಬಂದಿದೆ.

ಉಡುಪಿ (udupi) ಕುಂದಾಪುರದ (Kundapura) ಬೀಜಾಡಿ, ಕೋಡಿ‌, ಮರವಂತೆ  ಕಡಲ ತಡಗಳಲ್ಲಿ  ಸಮುದ್ರದ ನೀರಿನ ಬಣ್ಣ ಕೆಲವೆಡೆ ಬದಲಾದಂತೆ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ, ಮುಟ್ಟಿದರೆ ಕೈಗೆ ಅಂಟುವ  ಎಣ್ಣೆ, ಜಿಡ್ಡು, ಹಾಗೂ ಮೈಕ್ರೋ ಪ್ರಾಸ್ಟಿಕ್ ತುಣುಕುಗಳು ಇಲ್ಲಿ ಪತ್ತೆಯಾಗಿದೆ. 

Udupiಯಲ್ಲಿ ಇಮ್ಮಡಿ ದೇವರಾಯನ ಚಗ್ರಿಬೆಟ್ಟು ಶಾಸನ ಪತ್ತೆ

ಸಮುದ್ರ ತೀರಕ್ಕೆ ತೈಲ ತ್ಯಾಜ್ಯ ಬರುವುದು ಸಾಮಾನ್ಯ ಆದರೆ ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ತೈಲ ತ್ಯಾಜ್ಯ  (Waste oil) ಬಂದಿದ್ದಿಲ್ಲ. ಈ ಭಾಗದ ಕಡಲ ನೀರು ಮುಟ್ಟಿದರೆ ತುರಿಕೆಯ ಅನುಭವ ಆಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ನೀರು ಸುಟ್ಟ ಎಣ್ಣೆ ವಾಸನೆ ಬರುತ್ತಿದೆ.  ಹಡಗುಗಳ ತ್ಯಾಜ್ಯವನ್ನು ಬಂದರಿನಲ್ಲಿ ಹಣ ಕಟ್ಟಿ, ಡಂಪ್ ಮಾಡುವ ವ್ಯವಸ್ಥೆ ಇದೆ. ಆದರೆ ಹಣ ಉಳಿಸುವುದಕ್ಕಾಗಿ ಕೆಲವೊಂದು ಹಡಗಿನವರು, ಸಮುದ್ರದ ಮಧ್ಯೆ ಯಾರಿಗೂ ತಿಳಿಯದಂತೆ ಡಂಪ್  ಮಾಡುತ್ತಾರೆ. ಮಳೆಗಾಲದಲ್ಲಿ ಅಲೆಗಳ ಅಬ್ಬರ ಹೆಚ್ಚಾದಾಗ ಈ ತ್ಯಾಜ್ಯ ಸಮುದ್ರತೀರಕ್ಕೆ ಬರುತ್ತದೆ. 

Vijayanagaraದಲ್ಲಿ ಸಮಗ್ರ ನೀರಾವರಿಗಾಗಿ ಪಾದಯಾತ್ರೆ , ಸ್ವಾಮೀಜಿಗಳ ಬೆಂಬಲ

ಬಳಸಿದ ಪ್ಲಾಸ್ಟಿಕ್ ಸಮುದ್ರಕ್ಕೆ ಹಾಕುವುದರಿಂದ ಅದು ಹುಡಿಯಾಗಿ ಆಯಿಲ್ ಜೊತೆ ಸೇರಿ ಸಮುದ್ರತೀರಕ್ಕೆ ಬರುತ್ತದೆ. ಇತ್ತೀಚೆಗೆ ಅಸಾನಿ ಚಂಡಮಾರುತ ಬಂದಾಗ ಕಡಲು ಅಡಿಮೇಲಾಗಿತ್ತು . ಈ ವೇಳೆ ಅನೇಕ ತ್ಯಾಜ್ಯಗಳನ್ನು ಹೊತ್ತ ಅಲೆಗಳು ತೀರ ಪ್ರದೇಶಕ್ಕೆ ಬಂದಿತ್ತು . ಅದೇ ವೇಳೆ ಉಡುಪಿ ಜಿಲ್ಲೆಯ ಅನೇಕ ಕಡಲ ತೀರ ಪ್ರದೇಶಗಳಲ್ಲಿ ಈ ರೀತಿಯ ಜಿಡ್ಡು- ತ್ಯಾಜ್ಯ ಪತ್ತೆಯಾಗಿದೆ .

ಇವುಗಳನ್ನೇ ಆಹಾರವೆಂದು ತಿಳಿದು ಆಮೆ, ಮೀನುಗಳು ಸೇವಿಸಿ ಸಾವನ್ನಪ್ಪುವ ಸಾಧ್ಯತೆ ಯೂ ಇದೆ. ಅಲ್ಲದೆ ಇವುಗಳನ್ನು ಸೇವಿಸಿದ ಮೀನನ್ನು ತಿನ್ನುವುದರಿಂದ ಮನುಷ್ಯ ನ ಆರೋಗ್ಯದ ಮೇಲೂ ಪರಿಣಾಮ‌ ಉಂಟಾಗುತ್ತೆ. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

CET 2022ಗೆ ಅರ್ಜಿ ಸಲ್ಲಿಸಲು ಕೊನೆ ಅವಕಾಶ, 2 ದಿನ ವಿಂಡೋ ರೀ ಓಪನ್

ಕಡಲು ಕರ್ನಾಟಕಕ್ಕೆ ಪ್ರಕೃತಿ ಕೊಟ್ಟ ವರ, ಆದರೆ ಕಡಲಿನ ನಿರ್ವಹಣೆಯಲ್ಲಿ ನಾವು ಎಡವಿದರೆ, ಈ ವರವೇ ಶಾಪ ವಾಗಬಹುದು.‌ ವರ್ಷದಿಂದ ವರ್ಷಕ್ಕೆ ಮತ್ಸ್ಯ ಸಂತಾನ ಇಳಿಮುಖವಾಗುತ್ತಿದೆ. ಮೀನುಗಾರಿಕೆಯ ಆಧುನೀಕರಣ ಒಂದೆಡೆಯಾದರೆ ಸಂತಾನೋತ್ಪತ್ತಿ ಕಾಲದಲ್ಲೇ ಮೀನು ಹಿಡಿಯುವುದರಿಂದ ಮತ್ಸ್ಯನಾಶಕ್ಕೆ ಕಾರಣವಾಗುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ, ಅನಪೇಕ್ಷಿತ ತ್ಯಾಜ್ಯಗಳು ಸಮುದ್ರ ಸೇರುತ್ತಿರುವುದು ಮೀನು (Fish) ಸಂತತಿ ನಾಶವಾಗಲು ಪ್ರಮುಖ ಕಾರಣವಾಗಿದೆ.

Latest Videos
Follow Us:
Download App:
  • android
  • ios