ದುಬೈ ಮಾತ್ರವಲ್ಲ, ಮುಂಬೈನಿಂದ ಬಂದವರಲ್ಲೂ ಸೋಂಕು: ಉಡುಪಿಯಲ್ಲಿ ಕೊರೋನಾ ಕಾಟ
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ 10 ಕೊರೋನಾ ಸೋಂಕು ಪ್ರಕರಣಗಳಲ್ಲಿ, 8 ಮಂದಿ ದುಬೈಯಿಂದಲೇ ಬಂದವರಾಗಿದ್ದಾರೆ. ಇದರಿಂದ ದುಬೈಯಿಂದ ವಾಪಸ್ ಬರುವವರ ಬಗ್ಗೆ ಜಿಲ್ಲೆಯಲ್ಲಿ ಆತಂಕ ಉಂಟಾಗಿತ್ತು. ಇದೀಗ ಮುಂಬೈಯಿಂದ ಜಿಲ್ಲೆಗೆ ವಾಪಸ್ ಬಂದವರಲ್ಲೂ ಕೊರೋನಾ ಸೋಂಕು ಪತ್ತೆಯಾಗಿದ್ದು, ದುಬೈ ಜೊತೆಗೆ ಮುಂಬೈ ಆತಂಕವೂ ಆರಂಭವಾಗಿದೆ.
ಉಡುಪಿ(ಮೇ 17): ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ 10 ಕೊರೋನಾ ಸೋಂಕು ಪ್ರಕರಣಗಳಲ್ಲಿ, 8 ಮಂದಿ ದುಬೈಯಿಂದಲೇ ಬಂದವರಾಗಿದ್ದಾರೆ. ಇದರಿಂದ ದುಬೈಯಿಂದ ವಾಪಸ್ ಬರುವವರ ಬಗ್ಗೆ ಜಿಲ್ಲೆಯಲ್ಲಿ ಆತಂಕ ಉಂಟಾಗಿತ್ತು. ಇದೀಗ ಮುಂಬೈಯಿಂದ ಜಿಲ್ಲೆಗೆ ವಾಪಸ್ ಬಂದವರಲ್ಲೂ ಕೊರೋನಾ ಸೋಂಕು ಪತ್ತೆಯಾಗಿದ್ದು, ದುಬೈ ಜೊತೆಗೆ ಮುಂಬೈ ಆತಂಕವೂ ಆರಂಭವಾಗಿದೆ.
13ರಂದು ಮುಂಬೈಯಿಂದ ಬಂದ 54 ವರ್ಷದ ಗಂಡಸು ಹೃದಯಾಘಾತದಿಂದ 14ರಂದು ಮಣಿಪಾಲ ಕೆಎಂಸಿಯಲ್ಲಿ ಮೃತಪಟ್ಟಿದ್ದಾರೆ, ಜೊತೆಗೆ ಅವರಿಗೆ ಕೊರೋನಾ ಸೋಂಕು ಇದ್ದುದು ಕೂಡ ದೃಢಪಟ್ಟಿದೆ. ಅವರೊಂದಿಗೆ ಪತ್ನಿ ಮಕ್ಕುಳು ಸೇರಿ ಕುಂದಾಪುರದ ಸುಮಾರು 30 ಮಂದಿ ಊರಿಗೆ ಆಗಮಿಸಿದ್ದಾರೆ. ಈಗ ಅವರೆಲ್ಲರೂ ಕೊರೋನಾ ರೋಗಿಯ ಪ್ರಾಥಮಿಕ ಸಂಪರ್ಕಿತರಾಗಿದ್ದರಿಂದ, ಅವರೆಲ್ಲ ಗಂಟಲದ್ರವಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರೆಲ್ಲರ ವರದಿಗಳು ಇಂದು ಅಥವಾ ನಾಳೆ ಬರುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನತೆ ಆತಂಕದಲ್ಲಿದ್ದಾರೆ.
ಲಾಕ್‌ಡೌನ್ ವೇಳೆ ದಾಖಲೆ ಬರೆದ ನೂತನ ಮಾರುತಿ ಬ್ರೆಜಾ ಪೆಟ್ರೋಲ್ ಕಾರು!
ಉಡುಪಿ ಜಿಲ್ಲೆಗೆ ಕೊರೋನಾ ಹಾಟ್‌ಸ್ಪಾಟ್ ಆಗಿರುವ ಮುಂಬೈಯಿಂದ ಆಗಮಿಸುವುದಕ್ಕೆ 10 ಸಾವಿರಕ್ಕೂ ಅಧಿಕ ಮಂದಿ ಕಾಯುತಿದ್ದಾರೆ, ಅವರನ್ನೆಲ್ಲ ಹಂತಹಂತವಾಗಿ ಕರೆ ತರಲಾಗುತ್ತಿದೆ. ಈಗಾಗಲೇ ಜಿಲ್ಲೆಗೆ 3500ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ, ಸುಮಾರು 2000 ಮಂದಿ ಇತರ ರಾಜ್ಯಗಳಿಂದಲೂ ಬಂದಿದ್ದಾರೆ. ಅವರನ್ನೆಲ್ಲ ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿರಿಸಲಾಗಿದೆ.
ಮುಂಬೈ ವರದಿ ಪಾಸಿಟಿವ್?
ಉಡುಪಿ ಜಿಲ್ಲೆಗೆ ಮುಂಬೈಯಿಂದ ಬರುವಾಗಲೇ ಕೆಲವವರು ಅಲ್ಲಿಯೇ ಗಂಟಲದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕೊಟ್ಟು ಬಂದಿದ್ದಾರೆ. ಅವರಲ್ಲೀಗ ಕೆಲವು ಮಂದಿಗೆ ಮುಂಬೈ ಪ್ರಯೋಗಾಲಯದಿಂದ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಹೇಳಲಾಗುತ್ತಿದೆ, ಆದರೆ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ. ಆದರೆ ಈ ಪಾಸಿಟಿವ್ ವರದಿ ಬಂದಿರುವವರನ್ನು ಗುರುತಿಸಿ, ಅವರಿದ್ದ ಕ್ವಾರಂಟೈನ್‌ನಿಂದ ಪ್ರತ್ಯೇಕಿಸಿ, ಪುನಃ ಗಂಟಲದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ, ಇಂದು ಅವರ ವರದಿಗಳೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಉನ್ನತ ಶಿಕ್ಷಣ ಪರೀಕ್ಷೆಗಳ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿದ ಅಶ್ವಥ್ ನಾರಾಯಣ