Asianet Suvarna News Asianet Suvarna News

ರಂಜಾನ್‌ ತಿಂಗಳಲ್ಲೂ ಲಾಕ್‌ಡೌನ್‌ ಪಾಲನೆ ಕಡ್ಡಾಯ

ರಂಝಾನ್‌ ತಿಂಗಳಲ್ಲೂ ಲಾಕ್‌ಡೌನ್‌ ಕಡ್ಡಾಯವಾಗಿ ಪಾಲನೆ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಯಾಸೀನ್‌ ಮಲ್ಪೆ ಕರೆ ನೀಡಿದ್ದಾರೆ.

 

Udupi district muslim association asks people to follow lock down strictly during Ramadan
Author
Bangalore, First Published Apr 17, 2020, 2:07 PM IST

ಉಡುಪಿ(ಏ.17): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌ ನಿಲ್ಲಿಸಲಾಗಿದೆ. ಈಗ ಕೇಂದ್ರ ಸರ್ಕಾರ ಮೇ 3ರವರೆಗೆ ಲಾಕ್‌ಡೌನ್‌ ವಿಸ್ತರಿಸಿದೆ.

ಈ ನಡುವೆ ಪ್ರಾರಂಭವಾಗುವ ರಂಝಾನ್‌ ತಿಂಗಳಲ್ಲೂ ಲಾಕ್‌ಡೌನ್‌ ಕಡ್ಡಾಯವಾಗಿ ಪಾಲನೆ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಯಾಸೀನ್‌ ಮಲ್ಪೆ ಕರೆ ನೀಡಿದ್ದಾರೆ.

ದಾದಿಗೂ ಕೊರೋನಾ ಸೋಂಕು ದೃಢ: ಇಡೀ ಆಸ್ಪತ್ರೆಯೇ ಕ್ವಾರಂಟೈನ್‌..!

ರಮಝಾನ್‌ ಪ್ರಯುಕ್ತ ಯಾರೂ ಮಸೀದಿಗಳಿಗೆ ತೆರಳದೆ ಪ್ರತಿದಿನದ 5 ಹೊತ್ತಿನ ನಮಾಜನ್ನು ಮನೆಯಲ್ಲಿ ಕುಟುಂಬದ ಸದಸ್ಯರು ಸೇರಿ ಮಾಡಬೇಕು. ನಿತ್ಯದ ಅಗತ್ಯ ವಸ್ತುಗಳ ಖರೀದಿ ವಿಚಾರದಲ್ಲೂ ಸರ್ಕಾರದ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು.

ರಂಜಾನ್; ಲೌಡ್ ಸ್ಪೀಕರ್, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ

ಸಹರಿ-ಇಫ್ತಾರ್‌ ಕೂಟಗಳನ್ನು ಕೈಬಿಟ್ಟು, ರಮಝಾನ್‌ ಮಾಸದಲ್ಲಿ ಬಡವರು, ಅಗತ್ಯ ಇರುವವರಿಗೆ ನೆರವು ನೀಡಬೇಕು. ಝಕಾತ್‌ ಹಾಗೂ ಸದಖಾ ಮೂಲಕ ಸಂಬಂಧಿಕರು, ನೆರೆಹೊರೆಯ, ಅಗತ್ಯ ಇರುವಂತಹ ಸರ್ವಧರ್ಮೀಯರಿಗೆ ನೆರವು ನೀಡಬೇಕು ಎಂದವರು ತಿಳಿಸಿದ್ದಾರೆ.

Follow Us:
Download App:
  • android
  • ios