ವಿಜಯಪುರ(ಏ.17): ಕೊರೋನಾ ಪೀಡಿತ ವ್ಯಕ್ತಿ ದಾಖಲಾಗಿದ್ದ ನಗರದ ಖಾಸಗಿ ಆಸ್ಪತ್ರೆ ದಾದಿಗೂ ಈಗ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಡೀ ಆಸ್ಪತ್ರೆಯನ್ನೇ ಕ್ವಾರಂಟೈನ್‌ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದೆ.

ಸೋಂಕಿತ ವ್ಯಕ್ತಿಯೊಬ್ಬರು ಏ.10ರಂದು ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 3 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಏ.13ರಂದು ಮೃತಪಟ್ಟಿದ್ದರು. ನಂತರ ಬಂದ ವೈದ್ಯಕೀಯ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. 

ರಾಜ್ಯದಲ್ಲಿ ಮತ್ತೆರಡು ಬಲಿ: ಸಾವಿನ ಸಂಖ್ಯೆ 10ಕ್ಕೇರಿಕೆ, 260 ಸೋಂಕಿತರು!

ಇದಾದ ಬೆನ್ನಲ್ಲೇ ಆಸ್ಪತ್ರೆಯ ದಾದಿಗೂ ಸೋಂಕು ತಗುಲಿದ್ದು, ಆತಂಕ ಮೂಡಿಸಿದೆ. ಹೀಗಾಗಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ, ರೋಗಿಗಳು ಮತ್ತು ಅವರ ಜೊತೆಗಿದ್ದ 15 ಮಂದಿ ಸೇರಿ 50 ಮಂದಿಯನ್ನು ಅದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿದೆ.