ಬೆಂಗಳೂರು(ಏ. 16)  ರಂಜಾನ್ ವೇಳೆ ಮಸೀದಿಯಲ್ಲಿ ಜನರು ಒಂದು ಗೂಡಿ 5 ಸಲ ನಮಾಜ್ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟ ನಿರಂತರವಾಗಿದ್ದು ಎಲ್ಲರೂ ಸಹಕಾಎ ನೀಡಬೇಕಾದ್ದು ಅನಿವಾರ್ಯವಾಗಿದೆ.

ಇನ್ನೊಂದು ಕಡೆ ವಕ್ಫ್  ಭೋರ್ಡ್ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಸುದ್ದಿಘೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಹೇಳಿದ್ದಾರೆ.  ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು.  ಮಾಸ್ ಪ್ರಾರ್ಥನೆ ಗೆ ಅವಕಾಶ ಇಲ್ಲ. ಬೇರೆ ಬೇರೆ ಕುಟುಂಬದ ಸದಸ್ಯರು ಸೇರಬಾರದು ಎಂದು ತಿಳಿಸಿದ್ದಾರೆ.

ಲಾಕಡೌನ್ ಮತ್ತು ಹಾಟ್ ಸ್ಪಾಟ್ ಗುರುತಿಸಲಾಗಿದೆ.  ಎಲ್ಲ ವಿಚಾರಕಿಂತಲೂ ಜೀವ ಮುಖ್ಯ. ದರ್ಗಾ ಮತ್ತು ಮಸೀದಿ ಹೋಗುವುದು ಮುಖ್ಯ ಅಲ್ಲ. ನಿಮ್ಮ ಜೀವ ಉಳಿಸಿಕೊಳ್ಳುವುದು ಬಹಳ ಮುಖ್ಯ. ಸಮಾಜ ಇದನ್ನ ಮುಖ್ಯವಾಗಿ ಪರಿಗಣಿಸಬೇಕು. ಸರ್ಕಾರದ ಆದೇಶಗಳನ್ನ ಯಥಾವತ್ತಾಗಿ ಪಾಲಿಸಬೇಕು ಅಂತ ವಾಕ್ಫ ಬೋರ್ಡ್ ಸೂಚನೆ ನೀಡಿದೆ.

ಲಾಕ್ ಡೌನ್ ನಡುವೆ ಮುಸ್ಲಿಮರು ರಂಜಾನ್ ಈ ರೀತಿ ಆಚರಿಸಿದರೆ ಎಷ್ಟು ಚೆನ್ನ!

ಇದೇ ತಿಂಗಳ 25 ರಿಂದ ರಂಜಾನ್ ಆರಂಭ ಆಗುತ್ತೆ. ನಿಮ್ಮ ನಿಮ್ಮ ಮನೆಗಳಲ್ಲಿ ರಂಜನ್ ಆಚರಣೆ ಮಾಡಿ.  ಮಾಸ್ ಆಗಿ ಸೇರಿ ಅನಾಹುತ ಮಾಡುವುದು ಬೇಡ.  ರಂಜನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡುವಾಗ ಜನ ಸೇರುವುದು ಬೇಡ. ಬರೀ ಮುಸ್ಲಿಂ ಅವರಿಗೆ ಅಷ್ಟೇ ಅಲ್ಲ ಇತರ ಸಮುದಾಯಗಳಿಗೂ ಸಹಾಯ ಮಾಡಿ. ಇದು ಅಲ್ಲಾ ಗೆ ಇಷ್ಟವಾಗುತ್ತೆ ಎಂದು ಮೊಹಮ್ಮದ್ ಯೂಸುಫ್ ತಿಳಿಸಿದ್ದಾರೆ.

ಪ್ರಾರ್ಥನೆ ಮಾಡುವಾಗ ನಾಲ್ಕು ರಿಂದ ಐದು  ಜನ ಮಾತ್ರ ಮಸೀದಿಯಲ್ಲಿ ಇರಿ. ಮಸೀದಿಯಲ್ಲಿದ್ದು ಖುರಾನ್ ಓದುವವರು ಪ್ರಾರ್ಥನೆ ಮಾಡ್ಲಿ. ಲೌಡ್ ಸ್ಪೀಕರ್ ಅಳವಡಿಸಿಕೊಳ್ಳುವಂತಿಲ್
ಮೇ 3 ವರೆಗೂ ಇದು ಅನ್ವಯ ಆಗುತ್ತೆ ಮರೆಯಬೇಡಿ ಎಂದು ತಿಳಿಸಿದರು.

300ಕ್ಕೇರಿದ ಕರ್ನಾಟಕದ ಸೋಂಕಿತರ ಸಂಖ್ಯೆ

ತಬ್ಲಿಘ್ ಜಮಾತ್ ಬಗ್ಗೆ ತಪ್ಪು ಸಂದೇಶ ರವಾನೆ ಮಾಡಬೇಡಿ. 2015ರಲ್ಲಿ ನಿಜಾಮುದ್ದಿನ್ ಇಂದ ವಿಭಾಗವಾಗಿದೆ. ಜಮಾತ್ ಗೂ ವಾಕ್ಫ ಬೋರ್ಡ್ ಗೂ ಸಂಬಂಧ ಇಲ್ಲ. ಯಾರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಮಾವೇಶ ಮಾಡಿದ್ದರೋ ಅವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.ನ ಮ್ಮ ರಾಜ್ಯ ಸರ್ಕಾರಕ್ಕೂ ಅದಕ್ಕೂ ಸಂಬಂಧ ಇಲ್ಲ. ದೆಹಲಿ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಲಿ

ರಂಜಾನ್ ಹಬ್ಬದ ಹಿನ್ನಲೆ ಮುಸ್ಲಿಮರು ಧಾರ್ಮಿಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುತ್ತಾರೆ. ರಂಜಾನ್ ತಿಂಗಳಲ್ಲಿ ಯಾರು ಮಸೀದಿಗೆ ಹೋಗಬಾರದು. ಇಫ್ತಾರ್ ಕೂಟ ಹಾಗೂ ಐದು ಹೊತ್ತಿನ ನಮಾಜ್ ನನ್ನು ಮನೆಯಲ್ಲಿ‌ ಮಾಡ್ಬೇಕು. ದರ್ಗಾ ಹಾಗೂ ಮಸೀದಿಗಳಲ್ಲಿ ಯಾವುದೇ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ. ದೆಹಲಿಯ ತಬ್ಲಿಘ್ ಜಮಾತ್ ಗೆ 698 ಮಂದಿ ಹೋಗಿದ್ದಾರೆ. ಬ್ಲಿಘ್ ಗೆ ಹೋದವರೆಲ್ಲ ತಪಾಸಣೆ ಗೆ ಒಳಪಟ್ಟಿದ್ದಾರೆ ಎಂದು ಹೇಳಿದರು.

ಈ ಪೈಕಿ 28 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎನ್ನುತ್ತ ಕರ್ನಾಟಕ ರಾಜ್ಯ ವಕ್ಫ್  ಮಂಡಳಿಯ ಅಧ್ಯಕ್ಷರ ಮೊಹಮ್ಮದ್ ಯುಸೂಫ್  ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ. ದೆಹಲಿಯಲ್ಲಿ ನಡೆದ ನಿಜಾಮುದ್ದಿನ್ ತಬ್ಲಿಘ್ ಮತ್ತು ಸುಲ್ತಾನ್ ಷಾ 2015 ರಲ್ಲಿ ಬೇರೆ ಬೇರೆಯಾಗಿದೆ. ನಮ್ಮ ರಾಜ್ಯದಿಂದ ತಬ್ಲಿಘಿ ಗೆ ಹೋದವರು ಕೇವಲ 10 ರಿಂದ 12 ಜನ ಎಂಉ ಯೂಸಫ್ ಹೇಳಿದರು.

ಸರ್ಕಾರ 698 ಜನ ಹೋಗಿದ್ರು ಅಂತ ಹೇಳುತ್ತಿದೆ ಅನ್ನೋ ಪ್ರಶ್ನೆಗೆ  ಉತ್ತರಿಸಿದ   ಮಹಮದ್ ಯೂಸೆಫ್ ಸರ್ಕಾರದ ಅಂಕಿ ಅಂಶಗಳೇ ತಪ್ಪಾಗಿದೆ.  10 ರಿಂದ 12 ಜನ ಮಾತ್ರ ಹೋಗಿರಬಹುದು. ಅಲ್ಪಸಂಖ್ಯಾತರಿಂದ ಸೋಂಕು ಬಂತು ಅನ್ನೋದು ಸರಿಯಲ್ಲ. ಸೋಂಕು ತಗುಲಿದವರಲ್ಲಿ ಹಿಂದು,ಕ್ರಿಶ್ಚಿಯನ್ ಸೇರಿದಂತೆ ಹಲವರು ಇದ್ದಾರೆ ಎಂದು ಹೇಳಿದರು.