Asianet Suvarna News Asianet Suvarna News

Boycott Muslim Traders: ಉಡುಪಿಯಲ್ಲಿ ಮತ್ತೆ ಧರ್ಮ ದಂಗಲ್, ಧಾರ್ಮಿಕ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ

 ಉಡುಪಿಯಲ್ಲಿ ಎರಡನೇ ಸುತ್ತಿನ ಧರ್ಮ ದಂಗಲ್ ಶುರುವಾಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಆರಂಭವಾದ ವ್ಯಾಪಾರ ಬಹಿಷ್ಕಾರ, ಈ ಬಾರಿಯ ಜಾತ್ರೆಗಳಲ್ಲೂ ಕಂಡು ಬರುತ್ತಿದೆ. ಕುಂದಾಪುರ ತಾಲೂಕಿನ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಹೋಡಿ ಹಬ್ಬ ನಡೆಯುತ್ತಿದ್ದು, ಮುಸ್ಲಿಂ ವ್ಯಾಪಾರಿಗಳಿಗೆ ಇಲ್ಲಿ ನಿಷೇಧ ಹೇರಲಾಗಿದೆ.

Udupi  Dharma Dangal started  again  muslim traders ban in  Kodi Festival gow
Author
First Published Dec 9, 2022, 6:42 PM IST

ಉಡುಪಿ (ಡಿ.9): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಎರಡನೇ ಸುತ್ತಿನ ಧರ್ಮ ದಂಗಲ್ ಶುರುವಾಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಆರಂಭವಾದ ವ್ಯಾಪಾರ ಬಹಿಷ್ಕಾರ, ಈ ಬಾರಿಯ ಜಾತ್ರೆಗಳಲ್ಲೂ ಕಂಡು ಬರುತ್ತಿದೆ. ಜಿಲ್ಲೆಯ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಕೊಡಿಹಬ್ಬದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿರ್ಬಂಧಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈಗ ಪ್ರತಿದಿನ ಒಂದಿಲ್ಲೊಂದು ಗ್ರಾಮಗಳಲ್ಲಿ ಜಾತ್ರೆ ಮಹೋತ್ಸವಗಳು ನಡೆಯುತ್ತೆ. ದೇವಾಲಯಗಳ ನಗರಿಯಲ್ಲಿ ಇನ್ನು ಮೂರ್ನಾಲ್ಕು ತಿಂಗಳ ಕಾಲ ಪ್ರತಿದಿನ ನಿತ್ಯೋತ್ಸವ ಇರುತ್ತೆ. ಈ ಬಾರಿಯ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಬೇಕೆಂಬ ಒತ್ತಾಯ ಹಿಂದೂ ಸಂಘಟನೆಗಳು ಮಾಡಿವೆ.

ಸದ್ಯ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಹೋಡಿ ಹಬ್ಬ ನಡೆಯುತ್ತಿದೆ. ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಅಂದಾಜು ನಾಲ್ಕು ಲಕ್ಷ ಭಕ್ತರು ಭಾಗವಹಿಸುತ್ತಾರೆ. ದೇವಾಲಯದ ರಥ ಬೀದಿಯಲ್ಲಿ ವ್ಯಾಪಾರ ಮಳಿಗೆಗಳನ್ನು ಹಾಕಲಾಗುತ್ತೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸ್ಥಳದಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಗ್ರಹಿಸಿತ್ತು.

ಹಿಂದೂ ಸಂಘಟನೆಗಳ ಆಗ್ರಹಕ್ಕೆ ಮಣಿದು, ಧಾರ್ಮಿಕ ದತ್ತಿ ಇಲಾಖೆಯ ನಿಯಮಾನುಸಾರ ಕೊಡಿ ಹಬ್ಬದಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಮುಸ್ಲಿಂ ವ್ಯಾಪಾರಿಗಳ ಪಾಲ್ಗೊಳ್ಳುವಿಕೆ ನಿರಾಕರಿಸಲಾಗಿದೆ. ದೇವಸ್ಥಾನದ ಹೊರವಲಯದಲ್ಲಿ ಮಾತ್ರ ಅನ್ಯಧರ್ಮೀಯ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದಾರೆ.

ಕುಂದಾಪುರ ತಾಲೂಕಿನ ಎರಡನೇ ಅತಿ ದೊಡ್ಡ ಹಬ್ಬ ಉಪ್ಪಂದದಲ್ಲಿ ಏರ್ಪಾಟಾಗಿದೆ. ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಕೊಡಿ ಹಬ್ಬ ನಡೆಯುತ್ತಿದೆ. ವಿವಿಧ ಹಿಂದೂ ಸಂಘಟನೆಗಳು ಆರ್ ಎಸ್ ಎಸ್ ಮುಖಂಡರ ನೇತೃತ್ವದಲ್ಲಿ ಅನ್ಯಧರ್ಮಿಯ ವ್ಯಾಪಾರ ಬಹಿಷ್ಕಾರಕ್ಕೆ ಇಲ್ಲಿ ಆಗ್ರಹಿಸಿತ್ತು.

ಆಗ್ರಹಕ್ಕೆ ಮಾಡಿದ ಆಡಳಿತ ಮಂಡಳಿ ಇದೀಗ ಸೂಚನಾ ಫಲಕ ಅಳವಡಿಸಿ ದೇವಸ್ಥಾನದ ಆವರಣದಲ್ಲಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಿದೆ. ವ್ಯಾಪಾರ ಮಳಿಗೆಗಳಲ್ಲಿ ಕೇಸರಿ ಧ್ವಜ ಹಾರಿಸಿ ವಹಿವಾಟು ನಡೆಸಲಾಗುತ್ತಿದೆ. ದೇವಳದ ಹೊರ ಆವರಣದಲ್ಲಿ ಮಾತ್ರ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಉಡುಪಿಯಲ್ಲಿ ಧರ್ಮ ದಂಗಲ್: ಕೋಡಿ ಜಾತ್ರೆಯಲ್ಲಿ ಮುಸ್ಲಿ‌ ವರ್ತಕರಿಗೆ ನಿಷೇಧ

ಕಳೆದ ವರ್ಷ ಹಿಜಾಬ್ ಪರ ಹೋರಾಟ ಆರಂಭವಾದಾಗ ವ್ಯಾಪಾರ ಬಹಿಷ್ಕಾರ ಶುರುವಾಗಿತ್ತು. ಮಾರ್ಚ್ ತಿಂಗಳಲ್ಲಿ ಕಾಪು ಮಾರಿ ಪೂಜೆಯಲ್ಲಿ ಮೊದಲ ಬಾರಿ ವ್ಯಾಪಾರ ಬಹಿಷ್ಕಾರದ ಕೂಗು ಕೇಳಿ ಬಂದಿತ್ತು. ನಿಯಮಾನುಸಾರ ಅನ್ಯ ಧರ್ಮೀಯರಿಗೆ ಅವಕಾಶ ನಿರಾಕರಿಸಲಾಯಿತು. ಬಳಿಕ ಈ ಹೋರಾಟ ರಾಜ್ಯಾದ್ಯಂತ ವಿಸ್ತರಣೆಯಾಗಿತ್ತು.

ವಿಜಯಪುರದಲ್ಲೂ ಶುರುವಾಯ್ತು ಧರ್ಮ ಸಂಘರ್ಷ: ಧರ್ಮ ದಂಗಲ್‌ಗೆ ಸಾಕ್ಷಿಯಾಗುತ್ತಾ ಸಂಕ್ರಾಂತಿ ಜಾತ್ರೆ

ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಮುದಾಯದ ಯಾವುದೇ ಧರ್ಮ ಗುರುಗಳು ಖಂಡಿಸದೆ ಇರುವುದು, ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಈ ಎರಡು ಕಾರಣಕ್ಕೆ ವ್ಯಾಪಾರ ನಿರ್ಬಂಧ ದಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹಿಂದೂ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

Follow Us:
Download App:
  • android
  • ios