ಉಡುಪಿ ಡೀಸಿ ವಿವಾದ : ಫೋಟೋ ವೈರಲ್
ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಬಸ್ ತಡೆದು ಪ್ರಯಾಣಿಕರನ್ನು ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆಂದು ಕೆಳಗೆ ಇಳಿಸಿದ್ದ ಉಡುಪಿ ಜಿಲ್ಲಾಧಿಕಾರಿ ಇದೀಗ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.
ಉಡುಪಿ (ಏ.25): ಉಡುಪಿ ಜಿಲ್ಲಾಧಿಕಾರಿ ಅವರು ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮಾಸ್ಕ್ ಧರಿಸದ ಫೋಟೋವೊಂದು ವೈರಲ್ ಆಗಿದೆ.
ಉಡುಪಿ ಎಎಸ್ಪಿ ಅವರ ಮಗಳ ಮಹೆಂದಿ ಕಾರ್ಯಕ್ರಮದಲ್ಲಿ ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭಾಗವಹಿಸಿದ್ದರು. ವೈಭವದ ಮೆರವಣಿಗೆಯಲ್ಲಿ ವಧುವನ್ನು ವೇದಿಕೆಗೆ ಕರೆತರಲಾಗಿತ್ತು.
ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿದ್ದ ಯೋಜನೆಯಿಂದ ಇದೀಗ ರೆಡ್ ಅಲರ್ಟ್
ನಂತರ ವೇದಿಕೆಯಲ್ಲಿ ಎಎಸ್ಪಿ ಮತ್ತು ಡಿಸಿ ಫೋಟೋ ತೆಗೆಸಿಕೊಂಡಿದ್ದು, ಅದರಲ್ಲಿ ಡಿಸಿ ಮಾಸ್ಕ್ ಧರಿಸಿರಲಿಲ್ಲ. ಹೀಗಾಗಿ ಈ ಫೋಟೋ ಇದೀಗ ಭಾರೀ ಟೀಕೆಗೆ ಕಾರಣವಾಗಿದೆ.
ಕೋವಿಶೀಲ್ಡ್ ದರ ಭಾರತದಲ್ಲೇ ದುಬಾರಿ! ..
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿಗಳು, ಕಾರ್ಯಕ್ರಮದಲ್ಲಿ ತಾನು ಅಲ್ಲಿದ್ದಷ್ಟುಹೊತ್ತು ಮಾಸ್ಕ್ ಧರಿಸಿದ್ದೆ, ಕೇವಲ ಒಂದು ಫೋಟೋಗೋಸ್ಕರ ಮಾಸ್ಕ್ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ಸ್ಪಷ್ಟನೆ ನೀಡಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸಿ ಭಾಗವಹಿಸಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗೆ ಹಾಕಿದ್ದಾರೆ.